ನಾಪೋಕ್ಲು, ಡಿ. ೨೫: ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೌರಿರ ಕಪ್ ಹಾಕಿ ಕ್ರೀಡಾಕೂಟದ ಮೊದಲ ದಿನದ ಪಂದ್ಯಾಟದಲ್ಲಿ ಮುರುವಂಡ, ಮಾಚಿಮಂಡ, ಮಚ್ಚಂಡ, ಚಂಗುಲAಡ, ಚಿಂಡಮಾಡ, ಪೊರುಕೊವಂಡ, ಆದೇಂಗಡ, ತೀತಮಾಡ, ಅಮ್ಮಣಿಚಂಡ, ಮುಕ್ಕಾಟಿರ, ಕೇಚೆಟ್ಟಿರ ಕುಟುಂಬಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮುರುವಂಡ ಮತ್ತು ಮಾಪಣಮಡ ನಡುವೆ ನಡೆದ ಪಂದ್ಯದಲ್ಲಿ ಮುರುವಂಡ ತಂಡವು ಮಾಪಣಮಡ ಶೂಟೌಟ್ನಲ್ಲಿ ಮಣಿಸಿತು. ಮಾಚಿಮಂಡ ಮತ್ತು ಮುದ್ದಿಯಂಡ ನಡುವೆ ನಡೆದ ಪಂದ್ಯ ದಲ್ಲಿ ಮಾಚಿಮಂಡ ಮುದ್ದಿಯಂಡ ತಂಡವನ್ನು ೪-೧ ಗೋಲುಗಳ ಅಂತರದಿAದ ಪರಾಭವ ಗೊಳಿಸಿತು. ಮಚ್ಚಂಡ ಚೇನಂಡ ಕುಟುಂಬವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು.
ಚಂಗುಲAಡ ಮಾರ್ಚಂಡ ಕುಟುಂಬವನ್ನು ೪-೨ ಗೋಲುಗಳ ಅಂತರದಿAದ ಸೋಲಿಸಿತು. ಚಿಂಡಮಾಡ ಚೊಟ್ಟೆರ ಅನ್ನು ೨-೧ ಗೋಲುಗಳ ಅಂತರದಿAದ ಮಣಿಸಿತು. ಪೊರುಕೊವಂಡ ಮತ್ತು ಅಪ್ಪಂಡೇರAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊರುಕೊವಂಡ ತಂಡವು ಅಪ್ಪಂಡೇರAಡ ತಂಡವನ್ನು ಶೂಟೌಟ್ನಲ್ಲಿ ಸೋಲಿಸಿತು. ಆದೇಂಗಡ ತಂಡವು ಮಾಚಿಮಂಡ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
೩-೦ ಗೋಲುಗಳ ಅಂತರದಲ್ಲಿ ತೀತಿಮಾಡ ತಂಡವು ಪುಲ್ಲಂಗಡ ತಂಡವನ್ನು ಪರಾಭವಗೊಳಿಸಿತು. ಅಮ್ಮಣಿಚಂಡ ಮತ್ತು ಬಾಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಮ್ಮಣಿಚಂಡ ವಾಕ್ಓವರ್ನಲ್ಲಿ ವಿಜಯ ಸಾಧಿಸಿತು. ಮುಕ್ಕಾಟಿರ (ಪುಲಿಕೋಟು) ಮತ್ತು ಕೊಂಗAಡ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಕೊಂಗAಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು.
ಕೇಚೆಟ್ಟಿರ ತಂಡವು ವಾಕ್ಓವರ್ ನಲ್ಲಿ ಕೋಡಿಮಣಿಯಂಡ ವಿರುದ್ಧ ಜಯಗಳಿಸಿತು. ಅಲ್ಲುಮಾಡ ಮತ್ತು ನಾಳಿಯಂಡ ನಡುವೆ ಪಂದ್ಯದಲ್ಲಿ ನಾಳಿಯಂಡ ಜಯಗಳಿಸಿತು. ನಾಗಂಡ ೫-೧ ಗೋಲುಗಳ ಅಂತರದಲ್ಲಿ ಮೂಕಳೇರ ವನ್ನು ಪರಾಭವಗೊಳಿಸುವದರ ಮೂಲಕ ಮುಂದಿನ ಸುತ್ತು ಪ್ರವೇಶಿಸಿತು.