ಶನಿವಾರಸಂತೆ, ಡಿ. ೨೬: ಸಮೀಪದ ಕೊಡ್ಲಿಪೇಟೆಯ ಐ.ಪಿ.ಸಿ. ಚರ್ಚ್ನಲ್ಲಿ ಕ್ರೆöÊಸ್ತರು ಸರಳವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು. ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪಾಸ್ಟರ್ ಪಿ.ಸಿ ಫ್ರೆಡ್ಡಿ ಸಂದೇಶ ನೀಡುತ್ತಾ, ಯೇಸುಕ್ರಿಸ್ತನ ಸರಳ ಬೋಧನೆಯಾದ ‘ನಿನ್ನಂತೆ ನಿನ್ನ ನೆರೆಯವರನ್ನು ಪ್ರೀತಿಸು, ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ ಬದುಕಬೇಕು’ ಎಂದರು. ಜನತೆಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಕ್ರೆöÊಸ್ತರು ಪಾಲ್ಗೊಂಡಿದ್ದರು. ಪಟ್ಟಣದ ಬ್ರೆöÊಟ್ ಅಕಾಡೆಮಿ ಆಂಗ್ಲ ಮಾದ್ಯಮ ವಿದ್ಯಾ ಸಂಸ್ಥೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷೆ ಹೇಮಾ ಮಾತನಾಡಿ, ಮಕ್ಕಳಲ್ಲಿ ಸರ್ವಧರ್ಮ ಸಮನ್ವಯದ ಅರಿವು ಮೂಡಿಸುವ ಉದ್ದೇಶದಿಂದ ಧಾರ್ಮಿಕ ಹಬ್ಬವಾದ ಕ್ರಿಸ್ಮಸ್ ಹಬ್ಬವನ್ನು ಶಾಲೆಯಲ್ಲಿ ಆಚರಿಸಲಾಗುತ್ತಿದೆ ಎಂದರು.
ಮಕ್ಕಳು ಬಣ್ಣಬಣ್ಣದ ಉಡುಪು ಹಾಗೂ ಟೋಪಿ ಧರಿಸಿ ಸಾಂತಕ್ಲಾಸ್ ವೇಷ ಧರಿಸಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಮುಖ್ಯ ಶಿಕ್ಷಕಿ ಟಿ.ಎನ್. ಚೈತ್ರಾ, ಶಿಕ್ಷಕಿಯರಾದ ಪವಿತ್ರ, ಕವನ, ಭ್ರಮ್ಯಾ, ಸೌಮ್ಯ ಹಾಜರಿದ್ದರು.