ಮಡಿಕೇರಿ, ಡಿ. ೨೫: ಸೋಮವಾರಪೇಟೆ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ತಾ.೨೮ರ ಬೆಳಿಗ್ಗೆ ೧೧ ಗಂಟೆಗೆ ಸೋಮವಾರಪೇಟೆಯ ಕಸಾಪ ಕಚೇರಿಯಲ್ಲಿ ಸೋಮವಾರಪೇಟೆ ತಾಲೂಕು ಸದಸ್ಯರ ಸಭೆ ನಡೆಯಲಿದೆ.
ಸಭೆಯಲ್ಲಿ ನೂತನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮತ್ತು ತಾಲೂಕು ನಿಕಟಪೂರ್ವ ಅಧ್ಯಕ್ಷ ಹೆಚ್.ಜಿ.ಜವರಪ್ಪ ಭಾಗವಹಿಸಲಿದ್ದಾರೆ.
ಕುಶಾಲನಗರ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ತಾ. ೨೮ರ ಸಂಜೆ ೪ ಗಂಟೆಗೆ ಹೊಟೇಲ್ ಕನ್ನಿಕಾ ಇಂಟರ್‌ನ್ಯಾಶನಲ್‌ನ ಸಭಾಂಗಣದಲ್ಲಿ ಕಸಾಪದ ಕುಶಾಲನಗರ ತಾಲೂಕು ಸದಸ್ಯರ ಸಭೆ ಕರೆಯಲಾಗಿದೆ.
ಸಭೆಯಲ್ಲಿ ನೂತನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹಾಜರಿರಲಿದ್ದಾರೆ.