ಕಣಿವೆ, ಡಿ. ೨೪: ಕುಶಾಲನಗರದ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಅಂಗವಾಗಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿಯನ್ನು ರೂ. ೧೧ ಕೋಟಿ ವೆಚ್ಚದಲ್ಲಿ ಆರಂಭಿಸುವ ಸಂಬAಧ ಸಭೆಯಲ್ಲಿ ಅಧ್ಯಕ್ಷ ಶರವಣಕುಮಾರ್ ವಿಷಯ ಪ್ರಸ್ತಾಪಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಸದಸ್ಯರಿಗೆ ಘೋಷಿಸಿದ್ದ ಶೇ. ೧೦ ರ ಲಾಭಾಂಶವನ್ನು ಬಿಟ್ಟು ಕೊಡುವಂತೆ ಮಹಾಸಭೆ ಅನುಮೋದಿಸಿತು. ಉದ್ದೇಶಿತ ಕಟ್ಟಡ ಕಾಮಗಾರಿಯನ್ನು ೨೦೨೨ ರ ಏಪ್ರಿಲ್ ನಂತರದ ದಿನಗಳಲ್ಲಿ ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು. ಹಾಗೆಯೇ ಕಟ್ಟಡದ ನೆಲ ಅಂತಸ್ತಿನಲ್ಲಿ ೯೦ ಕಾರುಗಳು ೧೦೦ ಬೈಕುಗಳು ನಿಲುಗಡೆಗೊಳ್ಳಲು ವ್ಯವಸ್ಥೆ ಕಲ್ಪಿಸಲು ನೀಲಿನಕ್ಷೆ ತಯಾರಿಸಲಾಗಿದೆ. ಅಲ್ಲದೇ ಮೊದಲ ಅಂತಸ್ತಿನ ಕಟ್ಟಡ ದಲ್ಲಿ ಸುವ್ಯವಸ್ಥಿತವಾದ ಸುಸಜ್ಜಿತವಾದ ಡಾರ್ಮೆಂಟರಿ, ವಸತಿ ಗೃಹಗಳ ನಿರ್ಮಾಣ ಹಾಗೆಯೇ ೩೦೦ ಮಂದಿ ಕೂರುವಷ್ಟು ವಿಶಾಲ ಸಭಾಂಗಣ, ಮೇಲಂತಸ್ತಿನಲ್ಲಿ ೬೦೦ ಮಂದಿ ಕೂರು ವಂತಹ ಸಭಾಂಗಣ ನಿರ್ಮಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶರವಣಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.