ವಿಶಾಲ ಕಾವೇರಿ ನದಿ ಎಲ್ಲರಿಗೂ ಬೇಕು. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ತಂಪೆರೆದು ರೈತರ ಬಂಧುವಾಗಿ ವಿದ್ಯುತ್ ಶಕ್ತಿಯ ಉತ್ಪಾದಕಿಯಾಗಿ, ಜನರ ತೃಷೆಯಿಂಗಿಸುವ ಕರುಣಾ ಮಾತೆ ಕಾವೇರಿ ಎಲ್ಲರಿಗೂ ಬೇಕು. ಅದಕ್ಕಾಗಿ ರಾಜ್ಯ ರಾಜ್ಯಗಳಲ್ಲಿ ಇತಿಹಾಸಕಾಲದಿಂದ ಇಂದಿನವರೆಗೂ ಜಲವಿವಾದ ಮುಂದುವರಿದಿದೆ. ಈಗಲೂ ಮೇಕೆದಾಟು ಅಣೆಕಟ್ಟೆ ಯೋಜನೆ ಈಡೇರದೆ ಭುಗಿಲೆದ್ದಿದೆ. ವಿವಾದ ಮುಗಿಲು ಮುಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಉಗಮಿಸಿ ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುವ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಕಾವೇರಿ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ. ಜಲಾನಯನ ಪ್ರದೇಶ ೮೧,೧೫೫ ಕಿ. ಮೀ (೩೧,೩೩೪ ಚ. ಮೀ.) ಅಂದರೆ ೪೭೫ ಮೈಲಿ.

ಇತಿವೃತ್ತ

ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಷಾ, ಹೇಮಾವತಿ, ಅರ್ಕಾವತಿ, [ಕಪಿಲಾ ಅಥವಾ ಕಬಿನಿ], ಲಕ್ಷö್ಮಣ ತೀರ್ಥ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಅಲ್ಲದೆ, ಹಾರಂಗಿ, ಹೇಮಾವತಿ, ಕಬಿನಿ, ಭವಾನಿ, ಲಕ್ಷ್ಮಣ ತೀರ್ಥ, ನೊಯಾಲ್ ಮತ್ತು ಅರ್ಕಾವತಿ ಸೇರಿದಂತೆ ಹಲವು ಉಪನದಿ ಗಳಿವೆ. ನದಿ ಜಲಾನಯನ ಪ್ರದೇಶವು ಮೂರು ರಾಜ್ಯಗಳನ್ನು ಮತ್ತು ಕೇಂದ್ರ ಪ್ರದೇಶವನ್ನು ಈ ಕೆಳಗಿನಂತೆ ಒಳಗೊಂಡಿದೆ: ತಮಿಳುನಾಡು, ೪೩,೮೬೮ ಚದರ ಕಿಲೋಮೀಟರ್ (೧೬,೯೩೮ ಚದರ ಮೈಲಿ); ಕರ್ನಾಟಕ, ೩೪,೨೭೩ ಚದರ ಕಿಲೋಮೀಟರ್ (೧೩,೨೩೩ ಚದರ ಮೈಲಿ); ಕೇರಳ, ೨,೮೬೬ ಚದರ ಕಿಲೋಮೀಟರ್ (೧,೧೦೭ ಚದರ ಮೈಲಿ), ಮತ್ತು ಪುದುಚೇರಿ, ೧೪೮ ಚದರ ಕಿಲೋಮೀಟರ್ (೫೭ ಚದರ ಮೈಲಿ). ಕರ್ನಾಟಕದ ಕೊಡಗಿನಲ್ಲಿರುವ ತಲಕಾವೇರಿಯಲ್ಲಿ ಉದ್ಭವಿಸಿ ಇದು ಬಂಗಾಳಕೊಲ್ಲಿಯನ್ನು ಪ್ರವೇಶಿಸಲು ಆಗ್ನೇಯಕ್ಕೆ ಸುಮಾರು ೮೦೦ ಕಿಲೋಮೀಟರ್ (೫೦೦ ಮೈಲಿ) ಹರಿಯುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದು ಶಿವನಸಮುದ್ರ ದ್ವೀಪವನ್ನು ರೂಪಿಸುತ್ತದೆ, ಇದರ ಎರಡೂ ಬದಿಯಲ್ಲಿ ಸುಮಾರು ೧೦೦ ಮೀಟರ್ (೩೩೦ ಅಡಿ) ಇಳಿಯುವ ಸುಂದರವಾದ ಶಿವನಸಮುದ್ರ ಜಲಪಾತವಿದೆ. ನದಿ ವ್ಯಾಪಕವಾದ ನೀರಾವರಿ ವ್ಯವಸ್ಥೆಗೆ ಮತ್ತು ಜಲವಿದ್ಯುತ್ ಶಕ್ತಿಗೆ ಮೂಲವಾಗಿದೆ. ಈ ನದಿಯು ಶತಮಾನಗಳಿಂದ ನೀರಾವರಿ ಕೃಷಿಯನ್ನು ಬೆಂಬಲಿಸಿದೆ ಮತ್ತು ಪ್ರಾಚೀನ ಸಾಮ್ರಾಜ್ಯಗಳು ಮತ್ತು ದಕ್ಷಿಣ ಭಾರತದ ಆಧುನಿಕ ನಗರಗಳ ಜೀವನಾಡಿಯಾಗಿ ಕಾರ್ಯನಿರ್ವಹಿಸಿದೆ. ನದಿಯ ನೀರಿಗೆ ಪ್ರವೇಶವು ದಶಕಗಳಿಂದ ಭಾರತೀಯ ರಾಜ್ಯಗಳನ್ನು ಪರಸ್ಪರ ವಿರುದ್ಧವಾಗಿ ಮಾಡಿದೆ.

ನದಿಯ ಪಾತ್ರ

ಕೊಡಗಿನ ಬೆಟ್ಟಗಳನ್ನು ಬಿಟ್ಟ ನಂತರ ಕಾವೇರಿ ನದಿ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಮೂರು ದ್ವೀಪಗಳಿವೆ-ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರ, ಹಾಗೂ ತಮಿಳುನಾಡಿನಲ್ಲಿ ಶ್ರೀರಂಗ ಈ ದ್ವೀಪಗಳು ಶಿವನಸಮುದ್ರದಲ್ಲಿ ಈ ನದಿ ೩೨೦ ಅಡಿಗಳ ಎತ್ತರದಿಂದ ಧುಮುಕಿ, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಭಾರತದ ಮೊದಲ ಜಲವಿದ್ಯುದಾಗಾರ ಇಲ್ಲಿ ೧೯೦೨ ರಲ್ಲಿ ಕಟ್ಟಲ್ಪಟ್ಟು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು. ಹೊಗೇನಕಲ್ ಜಲಪಾತವಾಗಿ ಬಿದ್ದಾದ ಮೇಲೆ ತಮಿಳುನಾಡನ್ನು ಪ್ರವೇಶಿಸುವ ಈ ನದಿ, ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.

ಕರ್ನಾಟಕದಲ್ಲಿ ಕಾವೇರಿ

ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ ೭೨ ಮೈಲಿಗಳಷ್ಟು ಉದ್ದವಿದ್ದು, ೧೦,೦೦೦ ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.

ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ. ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರ ದೊಡ್ಡಿ ನಾಲೆ ಮೈಸೂರಿನ ಒಡೆಯರ್ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರವನ್ನು ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು.

ತಮಿಳುನಾಡಿನಲ್ಲಿ ಕಾವೇರಿ

ಹರಿವು: ತನ್ನ ಮೂಲದಿಂದ ಮುಖಜ ಭೂಮಿಯಲ್ಲಿ ಸಮುದ್ರ ಸೇರುವವ ರೆಗಿನ ಕಾವೇರಿ ನದಿಯ ಒಟ್ಟು ಉದ್ದ ೮೦೦ ಕಿ.ಮೀ.. ಕರ್ನಾಟಕದಲ್ಲಿ ೩೨೦ ಕಿ.ಮೀ. ಹರಿದು ೪೧೬ ಕಿ.ಮೀ. ತಮಿಳುನಾಡಿನಲ್ಲಿ ಹರಿಯುವುದು. ಮತ್ತು ೬೪ ಕಿ. ಮೀ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಮಾನವಾದ ಗಡಿಯನ್ನು ರೂಪಿಸುವುದು. ೩೨೦+೩೨=೩೪೨ ಕಿ.ಮೀ. ಕರ್ನಾಟಕದಲ್ಲಿ; ೪೧೬+೩೨ ಕಿ,ಮೀ. ತಮಿಳುನಾಡಿನಲ್ಲಿ ಹರಿದಂತಾಯಿತು. ತಮಿಳುನಾಡಿನ ಮೆಟ್ಟೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.

ಮೇಕೆದಾಟು ಅಣೆಕಟ್ಟು ಯೋಜನೆ

ಈ ನಡುವೆ ಪ್ರಸಕ್ತ ಮೇಕೆದಾಟು ಅಣೆಕಟ್ಟು ಯೋಜನೆ ಎರಡೂ ರಾಜ್ಯಗಳ ನಡುವೆ ವಿವಾದದ ಭುಗಿಲೆಬ್ಬಿಸಿದೆ. ಬೆಂಗಳೂರಿನಿAದ ೧೦೦ ಕಿ.ಮೀ. ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ.ಮೀ. ದೂರದಲ್ಲಿ ಮೇಕೆದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದಕ್ಕೆ ಅಂಕಿ ಅಂಶ, ಸಾಕ್ಷಾö್ಯಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ. ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆAಬುದು ಕರ್ನಾಟಕದ ಬಯಕೆ. ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯ ವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ ೨೩,೨೩೦ ಚದರ ಕಿ.ಮೀ., ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ನೀರು ಉತ್ಪತ್ತಿಯಾಗುತ್ತಿದೆ. ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿAದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ. ಆದರೂ ತಮಿಳುನಾಡು ಈ ಅಣೆಕಟ್ಟಿನ ವಿರುದ್ಧ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಕ್ಕೆ ದೂರು ತೆಗೆದುಕೊಂಡು ಹೋಗಿದೆ.

ತಲಕಾವೇರಿಯಲ್ಲಿ ಪಠಿಸಬೇಕಾದ ಸ್ತೋತ್ರಗಳು

ಅಗಸ್ತö್ಯ ಮಹರ್ಷಿ ಸ್ತುತಿ

ಕಾಶಪುಷ್ಪ ಪ್ರತೀಕಾಶ ಅಗ್ನಿ ಮಾರುತ ಸಂಭವ

ಮಿತ್ರಾವರುಣಯೋಃ ಪುತ್ರ ಕುಂಭಯೋನೆ ನಮೋಸ್ತುತೇ ||೧||

ವಿಂಧ್ಯವೃದ್ಧಿಕ್ಷಯಕರ ಮೇಘತೋಯ ವಿಷಾಪಹ |

ರತ್ನವಲ್ಲಭ ದೇವೇಶ ಲಂಕಾವಾಸಿ ನಮೋಸ್ತುತೇ ||೨||

ವಾತಾಪಿ ಭಕ್ಷಿತೋ ಯೇನ ಸಮುದ್ರಃ ಶೋಷಿತಃ ಪುರಾ |

ಲೋಪಾಮುದ್ರಾಪತಿಃ ಶ್ರೀಮಾನ್ಯೋ ಸಾತಸ್ಮೆöÊ ನಮೋ ನಮಃ ||೨||

ಕಾವೇರೀ ಭುಜಂಗ ಸ್ತೋತ್ರಂ

ಕಥA ಸಹ್ಯಜನ್ಯೇ ಸುರಾಮೇ ಸಜನ್ಯೇ |

ಪ್ರಸನ್ನೇ ವದಾನ್ಯಾಃ ಭವೇಯುರ್ವದಾನ್ಯೇ |

ಸಪಾಪಸ್ಯಮನ್ಯೇ ಗತಿಂ ತ್ವಾಮಂಬ ಮಾನ್ಯೇ |

ಕವೇರಸ್ಯಧನ್ಯೇ ಕವೇರಸ್ಯಕನ್ಯೇ ||೧||

ಕೃಪಾಂಬೋಧಿ ಸಂಘೇ ಕೃಪಾರ್ದಂತಿರAಗೇ ||

ಜಲಾಕ್ರಾಂತರAಗೇ ಜಲೋದ್ಯತ್ತರಂಗೇ |

ನಭಶ್ಚುಂಬಿವನ್ಯೇಭ ಸಂಪನ್ನಮಾನ್ಯೇ |

ನಮಸ್ತೇ ವದಾನ್ಯೇ ಕವೇರಸ್ಯಕನ್ಯೇ ||೨||

ಸಮಾತೇ ನ ಲೋಕೇ ನದೀ ಹ್ಯತ್ರ ಲೋಕೇ |

ಹತಾಶೇಶಶೋಕೇ ಲಸತ್ತಟ್ಯಶೋಕೇ |

ಪಿಬಂತೋಬುತೇ ಕೇ ರಮಂತೇನ ನಾಕೇ |

ನಮಸ್ತೇ ವದಾನ್ಯೇ ಕವೇರಸ್ಯಕನ್ಯೇ ||೩||

ಬ್ರಹ್ಮ ಸ್ತೋತ್ರಂ

ಜಯದೇವ ಚತುರ್ವಕ್ತ ಸರ್ವಲೋಕ ಪಿತಾಮಹ |

ಜಗತ್ಕಾರಣ ವಿಶ್ವಾತ್ಮನ್ ಚತುರ್ಮೂತೇ ಜಗತ್ಪತೇ ||

ಸರ್ವತೀರ್ಥಾಶ್ರಯ ಕಾವೇರಿ

ಜಯದೇವಿ ಮಹೇಶಾನೇ ಜಯ ಸರ್ವೇಶ್ವರೇಶ್ವರಿ |

ಜಯಗಂಗಾದ್ಯನೇಕೈಕ ಪುಣ್ಯ ತೀರ್ಥಾಶ್ರಯೇ ಪÀರೇ

ಜಯಶಂಕರ ಸರ್ವಸ್ವೇ ಜಯ ವಿಘ್ನ ಪಥಾಶ್ರಯೇ

ಜಯಭಕ್ತಜನೋದ್ಧಾರೇ ಜಯ ಸರ್ವಾರ್ಥಸಿದ್ದಿದೇ

ಜಯ ಜನ್ಮಜರಾಸಂಸ್ಥೋನ್ಮೂಲನಾ ಬದ್ಧಕಂಕಣೇ

ಜಯ ಸರ್ವ ಜಗತ್ತೃಷ್ಟಿಸ್ಥಿತಿ ಸಂಹಾರಕಾರಣೇ

ಜಯ ಬ್ರಹ್ಮಾದಿಕೀಟಾಂತಮೋಹನೇ ವಿಶ್ವಮಂಗಲೇ

ಜಯದೇವಿ ಪರಬ್ರಹ್ಮ ಗೋಚರ ಜ್ಞಾನದಾಯಿನಿ

ಗಂಗೇ ಗೋದಾವರಿ ಶಿವೇ ನರ್ಮದೇ ಹೇ ಸರಸ್ವತೀ

ಯಮುನೇ ಪುಣ್ಯಕಾವೇರಿ ತ್ರಾಹಿಮಾಂ ಭವಸಾಗರಾತ್ ||

ಕಾವೇರಿ ಸ್ತೋತ್ರ

ಜಯದೇವಿ ಜಗನ್ಮಾತರ್ಲೋಪಾಮುದ್ರೆ ಪುರಾತನೇ |

ಜಯಭಕ್ತಪ್ರಿಯೇ ಭದ್ರೇ ಮಂಗಳೇ ಮಂಗಳಪ್ರದೇ ||

ಜಯೇಶ್ವರಿ ಮಹಾಮಾಯೇ ವ್ಯಕ್ತಾವ್ಯಕ್ತ ಸನಾತನೇ

ಸರ್ವಭೂತಹಿತಾರ್ಥಾಯ ಭವ ಪಾಪಂಕರೇ ಶುಭೇ ||

ಕವೇರತನಯೇ ದೇವಿ ಕಾವೇರಿ ಕಲಿನಾಶಿನಿ

ಮಾಯಾವತಿ ಮಹಾಕಾಳಿ ಮಹಾಮಾಯೇ ಸುರೇಶ್ವರಿ |

ಹಿರಣ್ಯಶೃಂಗಿ ಹರಿಣಿ ಋಗ್ಯಜುಸ್ಸಾಮರೂಪಿಣಿ ||

ಚಂದ್ರಾತ್ಮಿಕೇ ಚಂದ್ರಧರೇ ಜಗತ್ಪೂಜ್ಯೇ ಜಗನ್ಮಯೇ

ಸರಸ್ವತಿ ವಿಶಾಲಾಕ್ಷಿ ವಿಶ್ವರೂಪೇ ಮಹೇಶ್ವರಿ ||

ವಿಶ್ವಂಭರೇ ವಿಶ್ವಕರೇ ವಿಶ್ವ ಕ್ಸೇನಾಂಗ ಸಂಶ್ರಯೇ

ವಿಷ್ಣುಪ್ರಿಯೇ ವಿಶ್ವಮುಖ್ಯೇ ವಿದ್ಯಾರೂಪೇ ಮನೋಹರೇ ||

ಸಂಹ್ಯಾನಾA ಸಹ್ಯತನಯೇ ಮಮಪ್ರಸೀದ

(ಮುಂದುವರಿಯುವುದು) (ಆಧಾರ)