ಮಡಿಕೇರಿ, ಡಿ. ೨೫: ನಗರದ ತುಳಸಿ ಭವನದಿಂದ ಕನ್ನಂಡಬಾಣೆ ರಸ್ತೆ ಸಂಚಾರಕ್ಕೆ ಮುಂದಿನ ೧೫ ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ೧೫ನೇ ಹಣಕಾಸು ನಿಧಿಯಲ್ಲಿ ಕಲ್ವಾಟ್ ಹಾಗೂ ಒಳಚರಂಡಿ ಕಾಮಗಾರಿ ಹಿನ್ನೆಲೆ ಈ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧಿಸಿದ್ದು, ಮಹದೇವಪೇಟೆ -ಸಂಪಿಗೆಕಟ್ಟೆ ಪರ್ಯಾಯ ರಸ್ತೆಯ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಪೌರಾಯುಕ್ತ ರಾಮದಾಸ್ ಹಾಗೂ ನಗರಸಭೆ ಸದಸ್ಯ ರಮೇಶ್ ತಿಳಿಸಿದ್ದಾರೆ.