ನಾಪೋಕ್ಲು, ಡಿ. ೨೫: ಮೂರ್ನಾಡುವಿನಲ್ಲಿ ಇಂದು ಆರಂಭಗೊAಡ ಚೌರಿರ ಕಪ್ ಹಾಕಿ ಪಂದ್ಯಾಟದ ನಡುವೆ ದುರಂತ ಘಟನೆಯೊಂದು ಸಂಭವಿಸಿದ್ದು, ಕ್ರೀಡಾಭಿಮಾನಿಗಳು ಆಘಾತಗೊಳ್ಳುವಂತಾಗಿದೆ. ಪಂದ್ಯವನ್ನಾಡುತ್ತಿದ್ದ ತೊತ್ತಿಯಂಡ ಕುಟುಂಬದ ಯುವ ಆಟಗಾರ ಸೋಮಣ್ಣ (೨೩) ದಿಢೀರನೆ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ತೀವ್ರ ಹೃದಯಾಘಾತಕ್ಕೊಳಗಾಗಿ ಅವರು ಆಟದ ನಡುವೆ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಸೋಮಣ್ಣ ಅವರನ್ನು ವೈದ್ಯಕೀಯ ತಂಡದವರು ತುರ್ತು ಚಿಕಿತ್ಸಾ ವಾಹನದಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಆದರೆ ಅವರು ಈ ವೇಳೆಗಾಗಲೇ ಅಸುನೀಗಿದ್ದಾರೆ.

ಈ ದುರಂತ ಘಟನೆ ಪಂದ್ಯಾವಳಿಯ ಆರಂಭದ ದಿನದಂದೇ ಸಂಭವಿಸಿದ್ದು, ಆಕಸ್ಮಿಕ ಘಟನೆಯಿಂದ ಜೊತೆಗಿದ್ದ ಆಟಗಾರರು, ಕ್ರೀಡಾ ಪ್ರೇಮಿಗಳು ತತ್ತರಿಸುವಂತಾಗಿದೆ.