ಚೆಟ್ಟಳ್ಳಿ, ಡಿ. ೨೩: ಚೆಟ್ಟಳ್ಳಿಯ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ ತಾ ೨೬ರಂದು ನಡೆಯಲಿದೆ. ಪೂರ್ವಾಹ್ನ ೭ರಿಂದ ೯ಗಂಟೆಯ ವರೆಗೆ ಗಣಪತಿ ಹವನ, ೧೧ಗಂಟೆ ಯಿಂದ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ ಪೂಜೆ, ಮಂಗಳಾರತಿ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೭.೩೦ ಗಂಟೆಗೆ ದೀಪಾರಾಧನೆ, ರಂಗಪೂಜೆ ಮತ್ತು ಮಹಾಪೂಜೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.