ಮಡಿಕೇರಿ, ಡಿ. ೨೩: ಕೊಡಗು ಜಿಲ್ಲೆಯಲ್ಲಿ ರೈತರ ಆರ್‌ಟಿಸಿಯಲ್ಲಿನ ಬೆಳೆ ಕಲಂನಲ್ಲಿ ದಾಖಲು ಮಾಡು ವಾಗ ಪ್ರಸ್ತುತ ಅನುಸರಿಸಲಾ ಗುತ್ತಿರುವ ಕ್ರಮದಿಂದ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಲು ಕ್ರಮಕೈಗೊಳ್ಳುವುದಾಗಿ ರಾಜ್ಯ ಕಂದಾಯ ಸಚಿವರಾದ ಆರ್. ಅಶೋಕ್ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಈ ಬಗ್ಗೆ ಗಮನ ಸೆಳೆದ ಸಂದರ್ಭ ಸಚಿವರು ಈ ಭರವಸೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳು ರಾಜ್ಯದ ಇತರ ಜಿಲ್ಲೆಗಳಂತೆ ಅಲ್ಲ. ಇಲ್ಲಿ ಬೆಳೆಯುವ ಕಾಫಿ, ಕರಿಮೆಣಸು, ಅಡಿಕೆಯಂತಹ ಬೆಳೆಗಳು ಬಹು ವಾರ್ಷಿಕ ಬೆಳೆಗಳಾಗಿವೆ. ಆದರೆ, ರೈತರು ಬೆಳೆಗಾರರ ಆರ್‌ಟಿಸಿಯಲ್ಲಿ ಇದು ಮರ‍್ನಾಲ್ಕು ತಿಂಗಳಿಗೊಮ್ಮೆ ಬದಲಾಯಿಸಲ್ಪಡುತ್ತಿದೆ. ಇಲ್ಲವೇ ಖಾಲಿ ಎಂಬುದಾಗಿ ನಮೂದಿಸಲ್ಪಡುತ್ತಿದೆ. ಇದರಿಂದ ಹಲವಾರು ಸೌಲಭ್ಯಗಳಿಂದ ಇಲ್ಲಿನ ಜನರು ವಂಚಿತರಾಗು ವಂತಾಗಿದೆ.

ಪ್ರಸ್ತುತ ಅನುಸರಿಸುತ್ತಿರುವ ನೀತಿ ಜಿಲ್ಲೆಯ ಮಟ್ಟಿಗೆ ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾಯಿಸಿ ಬಹು ವಾರ್ಷಿಕ ಬೆಳೆಯಾಗಿಯೇ ನಮೂದಿಸುವಂತಾಗಬೇಕು ಎಂದು ವೀಣಾ ಅಚ್ಚಯ್ಯ ಅವರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್ ಅವರು ಈ ಬಗ್ಗೆ ಸಂಬAಧಿಸಿದ ಕೃಷಿ ಇಲಾಖೆಯೊಂದಿಗೆ ವ್ಯವಹರಿಸಿ ಇದನ್ನು ಸರಿಪಡಿಲಾಗುವುದು. ಈ ಸಮಸ್ಯೆ ತಮ್ಮ ಗಮನಕ್ಕೂ ಬಂದಿದೆ ಎಂದು ಆಶ್ವಾಸನೆಯಿತ್ತರು.