*ವೀರಾಜಪೇಟೆ, ಡಿ. ೨೪: ಕೊಡಗಿನ ಪುರಾತನ ಹಾಗೂ ಪ್ರಸಿದ್ಧವಾದ ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾಹಿತಿ ನೀಡಿದ ಧರ್ಮಕೇಂದ್ರದ ಪ್ರಧಾನ ಗುರು ರೆ. ಫಾ. ಮದಲೈ ಮುತ್ತು ಅವರು, ಲೋಕದ ಉದ್ದಾರಕ್ಕೆ ಜನ್ಮ ತಾಳಿದ ಪ್ರಭು ಯೇಸು ಕ್ರಿಸ್ತರು. ಅವರ ಜನ್ಮದಿನವಾದ ಕ್ರಿಸ್ಮಸ್ ಅನ್ನು ಚರ್ಚ್ ನಲ್ಲಿ ವಿಶೇಷ ಪೂಜೆ, ಆರಾಧನೆ, ಧಾರ್ಮಿಕ ಪಠಣ, ಸಂದೇಶ, ಗಾಯನ ಹಾಗೂ ಮುಂತಾದ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದ್ದೇವೆ ಎಂದರು. ಅಂತೆಯೇ ಈ ಹಬ್ಬವು ಪ್ರಪಂಚದಲ್ಲಿ ಪರಸ್ಪರ ಶಾಂತಿ, ಸುಖ, ಸಮೃದ್ಧಿ ಯನ್ನು ಕರುಣಿಸಲಿ ಹಾಗೂ ಈ ಹಬ್ಬದ ಮುಖ್ಯ ಉದ್ದೇಶವಾದ ದೇವರ ಪ್ರೀತಿಯು ಎಲ್ಲರ ಮೇಲಿರಲಿ ಎಂದು ಸಂದೇಶ ನೀಡಿದರು.
ಕೂಡಿಗೆ
ಕೂಡಿಗೆಯ ಪವಿತ್ರ ತಿರು ಕುಟುಂಬ ದೇವಾಲಯ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಿಂಗಾರಗೊAಡಿದೆ.