ಮಡಿಕೇರಿ, ಡಿ. ೨೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಜನವರಿ ೨ ರಂದು ಮರಂದೋಡ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಾಳೋಪಾಟ್ ಹಾಡುವ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯಲ್ಲಿ ೨ ವಿಭಾಗವಿದ್ದು, ಮಕ್ಕಳ ವಿಭಾಗ ೮ ರಿಂದ ೧೦ನೇ ತರಗತಿ ಮಕ್ಕಳಿಗೆ, ಸಾರ್ವಜನಿಕ ವಿಭಾಗದಲ್ಲಿ ಪಿಯುಸಿ ಮೇಲ್ಮಟ್ಟು ಮತ್ತು ಸಾರ್ವಜನಿಕರಿಗೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಇ-ಮೇಲ್: ಞoಜಚಿvಚಿ.ಚಿಛಿಚಿಜಚಿmಥಿ@gmಚಿiಟ.ಛಿomಗೆ ಅಥವಾ ಖುದ್ದಾಗಿ ಕಚೇರಿಗೆ ಬಂದು ತಾ. ೨೫ ರೊಳಗೆ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ. ೦೮೨೭೨-೨೨೯೦೭೪, ಮೊ.ನಂ.೯೪೪೮೪೨೨೨೯೩ನ್ನು ಸಂಪರ್ಕಿಸಬಹುದು.
ಸ್ಪರ್ಧೆಯ ವಿವರಗಳು: ಬಾಳೋಪಾಟ್‌ನಲ್ಲಿ ದೇಶಕ್‌ಟ್ಟ್ ಪಾಟ್, ಕಾವೇರಮ್ಮ ಪಾಟ್, ಮಂಗಲ ಪಾಟ್ ಈ ಹಾಡುಗಳನ್ನು ಮಾತ್ರ ಹಾಡಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಲಾಟರಿ ಮುಖಾಂತರ ಹಾಡುಗಳನ್ನು ಆಯ್ಕೆ ಮಾಡಿಕೊಡಲಾಗುವುದು. ಪ್ರತಿ ತಂಡದಲ್ಲಿ ೪ ಜನರಿಗೆ ಮಾತ್ರ ಅವಕಾಶ. ಕೊಡವ ಸಾಂಪ್ರಾದಾಯಿಕ ಉಡುಪಿನಲ್ಲಿ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಪರಿಕರಗಳನ್ನು ತಾವೇ ತರಬೇಕು. ಸ್ಪರ್ಧೆಯಲ್ಲಿ ಗೆದ್ದವರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.