ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ನಾಲ್ವರ ಸಾವು

ವಡೋದರಾ, ಡಿ. ೨೪: ಗುಜರಾತಿನ ವಡೋದರಾ ಜಿಐಡಿಸಿ ಪ್ರದೇಶದಲ್ಲಿ ಶುಕ್ರವಾರ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ ಸ್ಪೋಟಗೊಂಡು ನಾಲ್ಕು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ೧೧ ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ೪ ವರ್ಷದ ಬಾಲಕಿ, ೬೫ ವರ್ಷದ ಪುರುಷ, ಹದಿಹರೆಯದವರು ಮತ್ತು ೩೦ ವರ್ಷದ ಮಹಿಳೆ ಸೇರಿದ್ದಾರೆ. ಬೆಳಿಗ್ಗೆ ೯.೩೦ ರ ಸುಮಾರಿಗೆ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡಿದೆ. ಹದಿನೈದು ಜನರು ಗಾಯಗೊಂಡಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಅವರಲ್ಲಿ ನಾಲ್ವರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಕರಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಾಜಿದ್ ಬಲೋಚ್ ಹೇಳಿದ್ದಾರೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರಲ್ಲಿ ಕಾರ್ಮಿಕರು ಸೇರಿದ್ದಾರೆ. ಜೊತೆಗೆ ಸ್ಫೋಟ ಸಂಭವಿಸಿದಾಗ ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ಹೇಳಿದರು. ನಾಲ್ವರು ವ್ಯಕ್ತಿಗಳು ಸುಟ್ಟ ಗಾಯಗಳಿಂದಾಗಿ, ಸ್ಫೋಟಗೊಂಡ ಸ್ಥಳದಿಂದ ಹಾರಿದ ವಸ್ತುಗಳ ಪ್ರಬಲ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಈಗಾಗಲೇ ಫೋರೆನ್ಸಿಕ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದೆ ಎಂದು ಬಲೂಚ್ ಹೇಳಿದರು.

ಕೋವಿಡ್-೧೯ : ಜಾಗರೂಕರಾಗಿರಲು ಪ್ರಧಾನಿ ಕರೆ

ನವದೆಹಲಿ, ಡಿ. ೨೪: ದೇಶಾದ್ಯಂತ ಕೋವಿಡ್-೧೯ ನ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಸಭೆಯಲ್ಲಿ ಕೋವಿಡ್-೧೯ ತಡೆಗೆ ಸೂಕ್ತವಾದ ನಡೆಗೆ ಹೆಚ್ಚಿನ ಒತ್ತನ್ನು ಪ್ರಧಾನಿ ಮೋದಿ ನೀಡಿದ್ದು, ಕೊರೊನಾ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದು, ಕಡಿಮೆ ಲಸಿಕೆ ಪ್ರಮಾಣವಿರುವ ರಾಜ್ಯಗಳಿಗೆ, ಪ್ರಕರಣ ಹೆಚ್ಚುತ್ತಿರುವ ಪ್ರದೇಶಗಳಿಗೆ ಹಾಗೂ ಕಡಿಮೆ ಆರೋಗ್ಯ ಮೂಲಸೌಕರ್ಯವಿರುವೆಡೆಗೆ ಸಹಾಯ ಮಾಡುವುದಕ್ಕಾಗಿ ಪರಿಸ್ಥಿತಿ ಸುಧಾರಣೆ ಮಾಡುವುದಕ್ಕಾಗಿ ತಂಡಗಳನ್ನು ಕಳಿಸಬೇಕೆಂದು ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಓಮಿಕ್ರಾನ್ ಹಿನ್ನೆಲೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು (ಸತರ್ಕ್, ಸಾವಧಾನ್ ಪಾಲನೆ) ಎಂದೂ ಮೋದಿ ಸೂಚನೆ ನೀಡಿದ್ದಾರೆ. ಕೋವಿಡ್-೧೯ ಹಾಗೂ ಓಮಿಕ್ರಾನ್ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡುವಂತೆಯೂ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕೋವಿಡ್-೧೯ ತಡೆಗೆ ಸುರಕ್ಷಿತ ನಡೆಯನ್ನು ಮುಂದುವರೆಸಬೇಕಿರುವುದು ಇಂದಿಗೂ ಅತ್ಯಂತ ಪ್ರಮುಖವಾದದ್ದು ಎಂದು ಹೇಳಿದ್ದಾರೆ. ಕಂಟೈನ್ಮೆAಟ್ ಹಾಗೂ ಕೋವಿಡ್-೧೯ ನಿರ್ವಹಣೆ, ಆಕ್ಸಿಜನ್ ಲಭ್ಯತೆ, ಔಷಧ ಲಭ್ಯತೆ, ಕಾನ್ಸಂಟ್ರೇಟರ್ ಗಳು, ವೆಂಟಿಲೇತರ್, ಪಿಎ??? ಘಟಕ, ಐಸಿಯು/ ಆಕ್ಸಿಜನ್ ಬೆಂಬಲಿತ ಬೆಡ್ ಗಳು, ಮಾನವ ಸಂಪನ್ಮೂಲ, ಐಟಿ ಸಹಯೋಗ, ಲಸಿಕೆ ಸ್ಥಿತಿಗಳು ಸೇರಿದಂತೆ ಆರೋಗ್ಯ ಸಂಬAಧಿತ ವಿಷಯಗಳ ಪರಿಶೀಲನೆ, ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಪಿಎಂಒ ಮಾಹಿತಿ ನೀಡಿದೆ. ಅಧಿಕಾರಿಗಳು ಸಭೆಯಲ್ಲಿ ಓಮಿಕ್ರಾನ್ ಸಂಬAಧಿತ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ಪ್ರಧಾನಿಗಳಿಗೆ ವಿವರಿಸಿದ್ದು, ಯಾವ ದೇಶದಲ್ಲಿ ಸೋಂಕು ಹೆಚ್ಚಿದೆ, ಲಸಿಕೆ ನೀಡಿರುವ ಪ್ರಮಾಣ, ಹೊಸ ಸೋಂಕು ಇರುವಿಕೆ, ಡಬ್ಲ್ಯುಹೆಚ್ ಒ ನಿಂದ ಶಿಫಾರಸು ಮಾಡಲಾಗಿರುವ ಆದ್ಯತೆಯ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ: ಉದ್ಯಮಿ ಮನೆ, ಅಂಗಡಿ ಮೇಲೆ ಐಟಿ ದಾಳಿÀ

ಕಾನ್ಪುರ, ಡಿ. ೨೪: ಉತ್ತರ ಪ್ರದೇಶದ ಕಾನ್ಪುರದಲ್ಲಿ ಉದ್ಯಮಿಯೊಬ್ಬರ ನಿವಾಸ, ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದೆ. ಕಾನ್ಪುರ, ಕನೌಜ್, ಮುಂಬೈ ಮತ್ತು ಗುಜರಾತಿನಲ್ಲಿರುವ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಶ್ ಜೈನ್ ಮನೆ, ಕಾರ್ಖಾನೆ, ಕಚೇರಿ, ಕೋಲ್ಡ್ ಸ್ಟೋರ್ ಮತ್ತು ಪೆಟ್ರೋಲ್ ಪಂಪ್ ಗಳ ಮೇಲೆ ಐಟಿ ದಾಳಿ ನಡೆಸಿದೆ. ಕಾನ್ಪುರ, ಮುಂಬೈ ಮತ್ತು ಗುಜರಾತಿನಲ್ಲಿ ಏಕಕಾಲದಲ್ಲಿ ಆರಂಭವಾದ ದಾಳಿಗಳು ತಡರಾತ್ರಿ ಕೊನೆಗೊಂಡಿತು. ದಾಳಿ ವೇಳೆ ೧೫೦ ಕೋಟಿ ರೂಪಾಯಿ ನಗದನ್ನು ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಐಟಿ ದಾಳಿಯ ಜೊತೆಗೆ, ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಅಹಮದಾಬಾದಿನ ಜಿಎಸ್ ಟಿ ಗುಪ್ತಚರ ಮಹಾನಿರ್ದೇಶನಾಲಯದ (ಡಿಜಿಜಿಐ) ಅಧಿಕಾರಿಗಳು ಕಾನ್ಪುರದಲ್ಲಿ ಕಾರ್ಖಾನೆ ಆವರಣ ಮತ್ತು ಪಾನ್ ಮಸಾಲಾ ತಯಾರಕರು ಮತ್ತು ಸಾಗಣೆದಾರರ ಆವರಣದಲ್ಲಿ ಶೋಧ ನಡೆಸಿದರು. ಆದಾಯ ತೆರಿಗೆ ತಂಡ ಮೊದಲು ಕರೆನ್ಸಿ ಎಣಿಕೆ ಯಂತ್ರದೊAದಿಗೆ ಪಿಯೂಶ್ ಜೈನ್ ಅವರ ಆನಂದಪುರಿ ನಿವಾಸಕ್ಕೆ ತಲುಪಿತು. ಮುಂಬೈ ಮತ್ತು ಗುಜರಾತಿನಲ್ಲಿರುವ ಜೈನ್ ಸಂಸ್ಥೆಗಳ ಮೇಲೆ ಇದೇ ರೀತಿಯ ದಾಳಿಗಳು ನಡೆದಿವೆ. ಅಧಿಕಾರಿಗಳ ಪ್ರಕಾರ ಸುಮಾರು ೧೫೦ ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಈ ತೆರಿಗೆ ವಂಚನೆಯನ್ನು ಮುಖ್ಯವಾಗಿ ಶೆಲ್ ಕಂಪನಿಗಳ ಮೂಲಕ ಮಾಡಲಾಗುತ್ತಿತ್ತು. ಆನಂದಪುರಿ ನಿವಾಸಿ ಪಿಯೂಶ್ ಜೈನ್ ಮೂಲತಃ ಕನೌಜಿನ ಛಿಪಟ್ಟಿಗೆ ಸೇರಿದವರು. ಅವರು ಕನೌಜಿನಲ್ಲಿ ಮನೆ, ಸುಗಂಧ ದ್ರವ್ಯ ಕಾರ್ಖಾನೆ, ಕೋಲ್ಡ್ ಸ್ಟೋರ್, ಪೆಟ್ರೋಲ್ ಪಂಪ್ ಹೊಂದಿದ್ದಾರೆ. ಪಿಯೂಶ್ ಜೈನ್ ಮುಂಬೈನಲ್ಲಿ ಮನೆ, ಮುಖ್ಯ ಕಚೇರಿ ಮತ್ತು ಶೋರೂಮ್ ಅನ್ನು ಸಹ ಹೊಂದಿದ್ದಾರೆ. ಅವರ ಕಂಪನಿಗಳೂ ಮುಂಬೈನಲ್ಲಿಯೇ ನೋಂದಣಿಯಾಗಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಖಾಸಗೀಕರಣ ಇಲ್ಲ

ಬೆಳಗಾವಿ, ಡಿ. ೨೪: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಖಾಸಗೀಕರಣದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವರು ಆಗಿರುವ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ. ಸದಸ್ಯ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಎಸ್ ಆರ್ ಟಿಸಿ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ, ಇದರಿಂದ ಲಾಭ ಬಂದರೂ ಸರಿ ಅಥವಾ ನಷ್ಟವಾದರೂ ಸರಿ, ಯಾವುದೇ ಕಾರಣಕ್ಕೂ ಸರ್ಕಾರವೇ ನಡೆಸಿಕೊಂಡು ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಬಿಎಂಟಿಸಿ ಕುರಿತು ಉತ್ತರಿಸಿದ ಸಚಿವರು, ೧೫ ವರ್ಷದ ವರೆಗೂ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದು ಸಂಬAಧಿಸಿದ ಸಂಸ್ಥೆಗಳು ಪ್ರಮಾಣೀಕರಿಸಿರುವ ಬಸ್ಸುಗಳನ್ನು ಕೇವಲ ಮೂರು ವರ್ಷಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹೊರೆ ಮಾಡುವುದು ಎಷ್ಟು ಎಷ್ಟು ಸರಿ ಎಂದು ಪ್ರಶ್ನೆಮಾಡಿದರು. ಬಿಎಂಟಿಸಿ ೭೩೩ ಕೋಟಿ ಪಡೆದಿದ್ದು, ೧೯೫ ಕೋಟಿ ಮರು ಪಾವತಿ ಮಾಡಲಾಗಿದೆ. ೧೧ ವರ್ಷಾವಧಿ ಅಥವಾ ೮ ಲಕ್ಷ ಕಿಲೋ ಮೀಟರ್ ವರೆಗೆ ಸಂಚಾರ ಮಾಡಿರುವ ಬಸ್ ಗಳನ್ನು ಮಾತ್ರ ಮಾರಾಟ ಮಾಡಲು ತಯಾರಿ ನಡೆಸಲಾಗಿದೆ. ಈಗ ಹೊಸದಾಗಿ ಸಾಮಾನ್ಯ ಬಸ್ ಗಳನ್ನು ಮಾತ್ರ ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.