ವೀರಾಜಪೇಟೆ, ಡಿ. ೨೪ : ಖಗೋಳಶಾಸ್ತç ಶಿಕ್ಷಣ ವಿರಳವಾಗಿರುವÀ ಸಮಾಜದಲ್ಲಿ ಕಲಿಕೆಗೆ ಮತ್ತು ಅಧ್ಯಾಯನ ಮಾಡುವ ವಿಧ್ಯಾರ್ಥಿಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಾಹ್ಯಾಕಾಶ ವೀಕ್ಷಣಾ ಘಟಕವನ್ನು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.
ಕಾವೇರಿ ಎಜುಕೇಷನ್ ಸೊಸೈಟಿ(ರಿ)-ಗೊಣಿಕೊಪ್ಪಲು ಅಧೀನ ಸಂಸ್ಥೆ ಯಾದ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಅಂತಿಮ ವರ್ಷದ (೨೦೨೦-೨೧ ನೇ ಸಾಲಿನ) ವಿದ್ಯಾರ್ಥಿಗಳು ತಮ್ಮ ‘ಪ್ರಾಜೆಕ್ಟ್ ವರ್ಕ್’ ಅಡಿಯಲ್ಲಿ ಟೆಲಿಸ್ಕೋಪ್ ಬೆಂಬಲಕ್ಕೆAದು ಘಟಕವೊಂದನ್ನು ನಿರ್ಮಿಸಿದ್ದಾರೆ.
ಕ್ಯಾಡ್ ಮಾಡಲಿಂಗ್ ಮತ್ತು ವಿನ್ಯಾಸ ಕಾರ್ಯವನ್ನು ಕೈಗೆತ್ತಿಕೊಂಡು ಮರ, ಸ್ಟೀಲ್, ಹಾಗೂ ವೈಬ್ರೆಷನ್ ರಹಿತ ವಸ್ತುಗಳನ್ನು ಬಳಕೆ ಮಾಡಿಕೊಂಡು ಟೆಲಿಸ್ಕೋಪ್ ಅಳವಡಿಕೆ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಈ ಟೆಲಿಸ್ಕೋಪ್ಅನ್ನು ಬಳಸಿಕೊಂಡು ವಿದ್ಯಾರ್ಥಿಗಳು ಚಂದ್ರ ನಕ್ಷತ್ರ, ಗ್ರಹಗಳಾದ (ಗುರು, ಶನಿ, ಶುಕ್ರ, ಯುರೇನಸ್ಸ್) ಸೇರಿದಂತೆ ಆಕಾಶ ಕಾಯಗಳನ್ನು ಕೂಡ ವೀಕ್ಷಿಸಬಹುದಾಗಿದೆ.
ಪ್ರಸ್ತುತ ಕೇವಲ ಸಣ್ಣ ಘಟಕವಿದೆಯಾದರೂ ಭವಿಷ್ಯದಲ್ಲಿ ವೀಕ್ಷಣಾಲಯ ವನ್ನು ನಿರ್ಮಿಸಿ ವಿದ್ಯಾರ್ಥಿಗಳಲ್ಲಿ ಖಗೋಳಾಸಕ್ತಿ ಹೆಚ್ಚಿಸುವ ಕಾರ್ಯಕ್ಕೆ ಕಾಲೇಜು ಮುಂದಾಗಿದೆ.
ಗ್ರಹ, ಚಂದ್ರ ನಕ್ಷತ್ರಾದಿಗಳ ವೀಕ್ಷಣೆಯೊಂದಿಗೆ ಅಧ್ಯಯನ ಕೂಡ ಮಾಡಬಹುದಾಗಿದೆ. ರಾಜ್ಯದಲ್ಲಿ ಕೆಲವೇ ಭಾಗಗಳಲ್ಲಿ ಬೃಹತ್ ಗಾತ್ರದಲ್ಲಿ ಬಾಹ್ಯಾಕಾಶ ವೀಕ್ಷಣಾ ಕೇಂದ್ರಗಳನ್ನು ತೆರೆದಿದ್ದು ಆಕಾಶ ಕಾಯಗಳ ವೀಕ್ಷಣೆಗಾಗಿ ಅನುವು ಮಾಡಿಕೊಡಲಾಗಿದೆ. ಹಲವು ವಿದ್ಯಾರ್ಥಿಗಳು ಖಗೋಳ ವಿಜ್ಞಾನದ ಬಗ್ಗೆ ಅನೇಕ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮತ್ತು ಸಂಶೋಧನೆಗಳತ್ತ ಸಾಗಿದ್ದಾರೆ. ಈ ದಿಸೆಯಲ್ಲಿ ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಕಾವೇರಿ ಪಾಲಿಟೆಕ್ನಿಕ್ನ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಮತ್ತು ಯೋಜನೆಯ ನಿರ್ದೇಶಕರು ಹಾಗೂ ಉಪನ್ಯಾಸಕರ ನಿರಂತರವಾದ ಉತ್ತೇಜನದಿಂದಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಬಾಹ್ಯಾಕಾಶ ವೀಕ್ಷಣಾ ಕೇಂದ್ರ ನಿರ್ಮಿಸಲಾಗಿದೆ.
ಮೆಕ್ಯಾನಿಕಲ್ ವಿಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಪ್ರಾಜೆಕ್ಟ್ಗಳನ್ನು ಮಾಡಲಾಗುತ್ತಿತ್ತು, ೨೦೧೬ ರಿಂದ ವಿಭಾಗದಲ್ಲಿ ಅಟೋಮಿಷನ್ ಸಂಬAದಿಸಿದAತೆ ಸಿ.ಎನ್.ಸಿ(ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸ್ವಯಂಚಾಲಿತ ಯಂತ್ರಗಳನ್ನು ತಯಾರು ಮಾಡಲು ಆರಂಭಿಸಲಾಯಿತು.
ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಖಗೋಳ ವಿಜ್ಞಾನಕ್ಕೆ ಸಂಬAದಿಸಿದAತೆ ನೂತನವಾದ ಪ್ರಯತ್ನಕ್ಕೆ ಮುಂದಾದರು. ಬಾಹ್ಯಾಕಾಶ ವೀಕ್ಷಣೆ ಮಾಡಲು ತಮಗೆ ನಿರ್ದಿಷ್ಟವಾದ ದೂರದರ್ಶಕ( ಟೆಲಿಸ್ಕೋಫ್) ನ್ನು ಆಯ್ಕೆ ಮಾಡಲಾಯಿತು. ಟಿಲಿಸ್ಕೋಪ್ ಪ್ರಮುಖ ದರ್ಪಣವು ೧,೫೦೦ ಎಂ.ಎA ಫೋಕಲ್ ಲೆಂತ್ ಮತ್ತು ದ್ಯುತಿರಂದ್ರವು ೩೦೦ ಎಂ.ಎA ವಿಶೇಷತೆಯನ್ನು ಹೊಂದಿವೆ. ಅಲ್ಲದೆ ಎಲ್ಲ ಗ್ರಹಗಳ ವೀಕ್ಷಣೆಯೊಂದಿಗೆ ಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯುವ ಕಾರ್ಯವಿಧಾನವನ್ನು ಅಳವಡಿಸಲಾಗಿದೆ. ವೈಜ್ಞಾನಿಕ ರೀತಿಯಲ್ಲಿ ವೀಕ್ಷಣೆ ಮಾಡಲು ಮತ್ತು ಉಪಯೋಗಿಸಲು ವೇದಿಕೆಯನ್ನು ಕ್ಯಾಡ್ ಮಾಡಲಿಂಗ್ ಮತ್ತು ವಿನ್ಯಾಸದ ಸಹಾಯದಿಂದ ನಿರ್ಮಿಸಲಾಗಿದೆ.
ಬಾಹ್ಯಾಕಾಶ ವೀಕ್ಷಣಾ ಕೇಂದ್ರ ನಿರ್ಮಾಣದ ಪರದೆ ಹಿಂದೆ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ೨೦೨೦-೨೧ ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ರೋಹಿತ್ ಬಿ.ಆರ್, ಚಂದನ್ ಜಿ.ಎಸ್ ಟೀಮ್ ಲೀಡರ್ಗಳಾಗಿ ಕಾರ್ಯನಿರ್ವಹಿಸಿದ್ದಾರೆೆ. ಎಂ.ಎA ಪೊನ್ನಣ್ಣ, ಪ್ರನೀಲ್ ಪಿ.ಪಿ. ಪ್ರಜ್ವಲ್ ಪೊನ್ನಪ್ಪ ಜೆ.ಯು, ತಶ್ವಿನ್ ವಿ.ಡಿ, ರಿಯಾನ್ ಲೋಬೊ, ಹರಿ ನಾರಾಯಣ, ಡ್ಯಾನಿ ಅಚ್ಚಯ್ಯ ಪ್ರಮುಖ ತಾಂತ್ರಿಕ ವರ್ಗದ ವಿದ್ಯಾರ್ಥಿಗಳು ಸೇರಿದಂತೆ ಇತರ ೧೭ ಮಂದಿ ವಿದ್ಯಾರ್ಥಿಗಳ ಅವಿರತ ಶ್ರಮವು ಕೇಂದ್ರಕ್ಕೆ ಸಹಕಾರಿ ಯಾಯಿತು. -ಕಿಶೋರ್ ಕುಮಾರ್ ಶೆಟ್ಟಿ ಕೊಡಗಿನಲ್ಲಿ ಪ್ರಪ್ರಥಮವಾಗಿ ಬಾಹ್ಯಾಕಾಶ ವೀಕ್ಷಣಾ ಕೇಂದ್ರವನ್ನು ತಯಾರು ಮಾಡಲಾಗಿದ್ದು.ಬಾಹ್ಯಾಕಾಶದಲ್ಲಿ ನಡೆಯುವ ಘಟನೆಗಳನ್ನು ದೂರದರ್ಶಕದ ಮೂಲಕ ನೋಡಬಹುದಾಗಿದೆ. ಶಾಲಾ ಮತ್ತು ಕಾಲೇಜು ಹಾಗೂ ಸಾರ್ವಜನಿಕರಿಗೆ ಕೇಂದ್ರದ ಉಪಯೋಗವಾಗಲಿದೆ. ಮುಂದೆ ಬರುವ ವಿದ್ಯಾರ್ಥಿಗಳು ಶಾಶ್ವತ ಕೇಂದ್ರಕ್ಕಾಗಿ ಈಗಾಗಲೆ ನೀಲಿನಕ್ಷೆ ಸಿದ್ದ ಗೊಂಡಿದ್ದು ಮುಂದಿನ ದಿನಗಳಲ್ಲಿ ಎಲ್ಲ ಸೌಕರ್ಯ, ಡೋಮ್ ಮತ್ತು ಶಾಶ್ವತ ಕಟ್ಟಡದಲ್ಲಿ ನೆಲೆ ನಿಲ್ಲುವಂತೆ ಮಾಡಲಾಗುತ್ತದೆ. ಈ ಪ್ರೊಜೆಕ್ಟ್ಗೆ ಬೋಧಕರು, ಉಪನ್ಯಾಸಕರು ಹಾಗೂ ವಿಶೇಷವಾಗಿ ಮಾರ್ಗದರ್ಶಕರಾದ ಉನ್ನಿಕೃಷ್ಣನ್ ಪಿ. ಪಿ. ಅವರು ಸಹಕಾರ ನೀಡಿದ್ದಾರೆ.
- ರೋಹಿತ್ ಬಿ.ಆರ್. ಚಂದನ್ ಜಿ.ಎಸ್: ಅಂತಿಮ ವರ್ಷದ ವಿದ್ಯಾರ್ಥಿಗಳು, ಮೆಕ್ಯಾನಿಕಲ್ ವಿಭಾಗ