ನಾಪೋಕ್ಲು, ಡಿ. ೨೧ : ಸಂಸ್ಥೆಯ ಅಭಿವೃದ್ಧಿಗೆ ಸರ್ವರ ಸಹಕಾರ ಮುಖ್ಯ ಎಂದು ನಾಪೋಕ್ಲು ಕೊಡವ ಸೌಹಾರ್ದ ಬ್ಯಾಂಕ್‌ನ ಅಧ್ಯಕ್ಷ ಅಪ್ಪಾರಂಡ ಸುಧೀರ್ ಅಯ್ಯಪ್ಪ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬ್ಯಾಂಕ್‌ನ ೩ ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬ್ಯಾಂಕ್‌ನಲ್ಲಿ ಸುಮಾರು ೬೩೫ ಸದಸ್ಯರಿದ್ದು ಪಾಲು ಬಂಡವಾಳ ರೂ.೮,೨೪,೯೦೦, ನಿರಖು ಠೇವಣಿ ರೂ. ೬೪,೨೦,೦೦೦ ಮತ್ತು ಸದಸ್ಯರಿಗೆ ವಿತರಿಸಿದ ಸಾಲ ರೂ.೯೦,೪೧,೩೮೨ ಆಗಿದ್ದು ಪ್ರಸಕ್ತ ಬ್ಯಾಂಕ್ ರೂ. ೫,೨೦,೦೦೦ ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು. ಬ್ಯಾಂಕ್‌ನ ಸದಸ್ಯರು ಠೇವಣಿಯನ್ನು ಇಡುವುದರ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದ ಅವರು ಠೇವಣಿದಾರರಿಗೆ ಉತ್ತಮ ಬಡ್ಡಿ ದರವನ್ನು ನೀಡಲಾಗುವುದು ಎಂದು ತಿಳಿಸಿದರು.

ಸದಸ್ಯರ ಮನವಿಯಂತೆ ಮುಂದೆ ಸದಸ್ಯರಿಗೆ ಮರಣ ನಿಧಿಯನ್ನು ಸ್ಥಾಪಿಸಲು ಉದ್ದೇಶಿಸಿದ್ದು ಪ್ರತಿಯೊಬ್ಬ ಸದಸ್ಯರು ಇದರ ಮೊತ್ತವನ್ನು ಪಾವತಿಸಿ ಮರಣ ನಿಧಿಗೆ ಸದಸ್ಯರಾಗುವಂತೆ ಕೋರಿದರು. ಸಾಲಗಾರರಿಗೆ ವಿಮೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸಾಲ ಪಡೆಯುವ ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮುಂದೆ ಬ್ಯಾಂಕ್ ವತಿಯಿಂದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲು ಮುಂದಿನ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ ಬ್ಯಾಂಕ್ ಉತ್ತಮವಾಗಿರಬೇಕಾದರೆ ಸಾಲ ಪಡೆದವರು ಸಮರ್ಪಕವಾಗಿ ಸಾಲ ಮರು ಪಾವತಿ ಮಾಡಬೇಕು ಎಂದರು. ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಚಂಗೇಟ್ಟಿರ ಶಂಭು ಅಚ್ಚಯ್ಯ, ಕೊಂಡೀರ ನಾಣಯ್ಯ ,ಕಂಗಾAಡ ಜಾಲಿ ಪೂವಪ್ಪ, ಶಿವಚಾಳಿಯಂಡ ಜಗದೀಶ್ ಸೂಕ್ತ ಸಲಹೆಯನ್ನು ನೀಡಿದರು.

ಉಪಾಧ್ಯಕ್ಷ ಮಂಡಿರ ರಾಜಪ್ಪ ಚಂಗಪ್ಪ, ಮಳೆಯಂಡ ಅಯ್ಯಪ್ಪ, ಬಿದ್ದಾಟಂಡ ರಮೇಶ್ ಚಂಗಪ್ಪ, ಕುಲ್ಲೇಟಿರ ಅಜಿತ್ ನಾಣಯ್ಯ, ಹರೀಶ್ ಕಾರ್ಯಪ್ಪ, ಮುಕ್ಕಾಟೀರ ವಿನಯ್, ಕನ್ನಂಭಿರ ಸುಧಿ ತಿಮ್ಮಯ್ಯ, ಕುಂಡ್ಯೋಳAಡ ಪೂವಯ್ಯ, ಕಾಟುಮಣಿಯಂಡ ಉಮೇಶ್, ಚೋಕಿರ ಚಿಣ್ಣಪ್ಪ, ಚೇನಂಡ ಗಿರೀಶ್ ಪೂಣಚ್ಚ, ಮೂವೇರ ರೇಖಾ ಪ್ರಕಾಶ್, ಬಿದ್ದಂಡ ಉಷಾ ದೇವಮ್ಮ, ಕೊಟೇರ ನೈಲ ಸುರೇಶ್ ಮತ್ತು ವ್ಯವಸ್ಥಾಪಕ ಎಸ್.ಪಿ. ದೇವಯ್ಯ, ಸಿಬ್ಬಂದಿ ಕೆ.ಜಿ. ಸರಸ್ವತಿ ಮತ್ತಿತರರು ಇದ್ದರು.