ಮಡಿಕೇರಿ, ಡಿ. ೨೧: ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ಪರಾಮರ್ಶೆಗೆ ಲೋಕಸಭೆಯ ಸಂಸದರ ಜಂಟಿ ಸಮಿತಿ ರಚನೆ ಮಾಡಲಾಗಿದೆ. ಕರ್ನಾಟಕದಿಂದ ಸಮಿತಿಯ ಏಕೈಕ ಸದಸ್ಯರಾಗಿ ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಸೇರ್ಪಡೆ ಮಾಡಲಾಗಿದೆ.
ಈ ಸಮಿತಿಯು ದೇಶದ ಜೀವ ವೈವಿಧ್ಯತೆ ಸಂಬAಧ ೨೦೦೨ರ ಕಾಯಿದೆ ಸಂಬAಧಿತ ಪರಾಮರ್ಶೆ ನಡೆಸಲಿದೆ. ಈ ಜಂಟಿ ಸಮಿತಿ ಕಸ್ತೂರಿರಂಗನ್ ವರದಿಯನ್ನು ಪಶ್ಚಿಮಘಟ್ಟದ ಜಿಲ್ಲೆಗಳ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಜಾರಿಗೊಳಿಸಲು ಚಿಂತನೆ ನಡೆಸುತ್ತದೆ. ಪ್ರತಾಪ್ ಸಿಂಹ ಒಳಗೊಂಡAತೆ ದೇಶದ ೨೧ ಸಂಸದರು, ರಾಜ್ಯಸಭೆಯ ೧೦ ಸದಸ್ಯರನ್ನು ಸಮಿತಿಗೆ ನೇಮಕ ಮಾಡಲಾಗಿದೆ. ಕಸ್ತೂರಿರಂಗನ್ ವರದಿಯಿಂದ ಉಂಟಾಗುವ ಸಮಸ್ಯೆ ಬಗ್ಗೆ ಮರುಪರಾಮರ್ಶೆ ನಡೆಸಿ ೨೦೨೨ರ ಫೆಬ್ರವರಿಯೊಳಗೆ ಜಂಟಿ ಸಮಿತಿ ತನ್ನ ವರದಿ ಸಲ್ಲಿಸಬೇಕಿದೆ.