ಮಡಿಕೇರಿ, ಡಿ. ೨೧: ಅತಿವೃಷ್ಟಿ ಬೆಳೆಹಾನಿ ಪರಿಹಾರಕ್ಕೆ ಸಂಬAಧಿಸಿದAತೆ ಹುದಿಕೇರಿ ಹೋಬಳಿಯ ಬಾಡಗರಕೇರಿ ಗ್ರಾಮ ಸೇರಿದಂತೆ ಹಲವೆಡೆ ತಾಂತ್ರಿಕ ದೋಷದಿಂದಾಗಿ ಲೋಪವಾಗಿರುವ ಕುರಿತು ಬೆಳೆಗಾರರಿಂದ ಆಕ್ಷೇಪ ವ್ಯಕ್ತಗೊಂಡಿದೆ. ಸರಕಾರದ ನಿಯಮಾವಳಿಯ ಪ್ರಕಾರವೇ ಬೆಳೆಗಾರರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರೂ ಇದೀಗ ನೀಡಲಾಗಿರುವ ಮೊತ್ತದಲ್ಲಿ ವ್ಯತ್ಯಾಸವಾಗಿದೆ.
ಹಲವಾರು ಬೆಳೆಗಾರರಿಗೆ ಕೇವಲ ರೂ. ೧೮೦೦, ರೂ ೨೪೦೦, ರೂ. ೩೦೦೦ ಈ ರೀತಿಯಾಗಿ ಅತ್ಯಲ್ಪ ಮೊತ್ತ ಮಾತ್ರ ಬ್ಯಾಂಕ್ಖಾತೆಗೆ ಜಮಾ ಆಗಿದೆ. ನಿಯಮಾನುಸಾರ ಗರಿಷ್ಟ ಎರಡು ಹೆಕ್ಟೇರ್ (ಐದು ಎಕರೆ)ಗೆ ಗರಿಷ್ಟ ರೂ. ೩೬ ಸಾವಿರದ ತನಕ ಪರಿಹಾರದ ಮೊತ್ತ ನ್ಯಾಯೋಚಿತವಾಗಿ ಲಭ್ಯವಾಗಬೇಕಿತ್ತು. ಆದರೆ ಇಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ ಎನ್ನಲಾಗಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಅವರು ಈ ವಿಚಾರ ಈಗಾಗಲೇ ಗಮನಕ್ಕೆ ಬಂದಿದ್ದು, ಸಂಬAಧಿಸಿದ ಸಿಬ್ಬಂದಿಗಳೊAದಿಗೆ ಚರ್ಚಿಸಲಾಗಿದೆ. ಇದನ್ನು ತ್ವರಿತವಾಗಿ ಸರಿಪಡಿಸಿ ನಿಗದಿತ ಪರಿಹಾರದ ಮೊತ್ತವನ್ನು ತಲುಪಿಸಲಾಗುವದು ಎಂದು ತಿಳಿಸಿದ್ದಾರೆ.