ಮಡಿಕೇರಿ, ಡಿ. ೨೧: ತಾ. ೧೧ ರಿಂದ ೨೦ರ ವರೆಗೆ ನವದೆಹಲಿಯಲ್ಲಿ ನಡೆದ ೫೯ನೇ ರಾಷ್ಟಿçÃಯ ಸ್ಪೀಡ್ ರೋ¯ರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಾಡ್ಯಮಾಡ ರಿಯಾ ಅಚ್ಚಯ್ಯ ಅವರು ಸಾಧನೆ ಮಾಡಿದ್ದಾರೆ. ೫೦೦ ಮೀರ‍್ಸ್ ರಿಂಕ್ ರೇಸ್ ಹಾಗೂ ರೋಡ್ ರೇಸ್‌ನಲ್ಲಿ ಚಿನ್ನದ ಪದಕ, ೩,೦೦೦ ಮೀರ‍್ಸ್ ರಿಲೇನಲ್ಲಿ ಚಿನ್ನದ ಪದಕ, ೧೫,೦೦೦ ಮೀರ‍್ಸ್ ರೋಡ್ ಎಲಿಮಿನೇಷನ್ ರೇಸ್‌ನಲ್ಲಿ ಬೆಳ್ಳಿ ಪದಕ ಹಾಗೂ ೨೦೦ ಮೀಟರ್ ಟೈಮ್ ಟ್ರಯಲ್ ರೇಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ರಿಯಾ ಅವರು ಮೈಸೂರಿನ ವಿದ್ಯಾವರ್ದಕ ಕಾಲೇಜಿನಲ್ಲಿ ೩ನೇ ವರ್ಷದ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದು, ಅತ್ತೂರಿನ ಕಾಡ್ಯಮಾಡ ಅರುಣ್ ಅಚ್ಚಯ್ಯ ಹಾಗೂ ಪ್ರಿಯಾ ಅಚ್ಚಯ್ಯ ದಂಪತಿಯ ಪುತ್ರಿ.