ಸೋಮವಾರಪೇಟೆ,ಡಿ.೨೦: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಮಾಡಿಸಿದ ರಕ್ತಗುಂಪು ಹಾಗೂ ಹೆಪಟೈಟಿಸ್ ಪರೀಕ್ಷಾ ವರದಿ ಎರಡು ದಿನಗಳ ಅಂತರದಲ್ಲಿ ವ್ಯತಿರಿಕ್ತವಾಗಿ ಬಂದಿದ್ದು, ರೋಗಿಯಲ್ಲಿ ಗೊಂದಲ ಉಂಟು ಮಾಡಿದೆ.
ಗೌಡಳ್ಳಿ ಗ್ರಾಮ ಪಂಚಾಯಿತಿಯ ಹಿರಿಕರ ನಿವಾಸಿ ೫೨ ವರ್ಷದ ರಾಧ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಬೆಂಗಳೂರಿನ ಆಸ್ಪತ್ರೆಯನ್ನು ಸಂಪರ್ಕಿಸಿದ ಸಂದರ್ಭ ರಕ್ತದ ಗುಂಪು ಮಾದರಿ ಹಾಗೂ ಹೆಪಟೈಟಿಸ್ ವರದಿಯನ್ನು ಅಲ್ಲಿಂದಲೇ ತರುವಂತೆ ಸೂಚಿಸಿದ್ದರು.
ಅದರಂತೆ ರಾಧಾ ಅವರನ್ನು ತಾ. ೧೮ರಂದು ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕರೆದೊಯ್ದು ರಕ್ತದ ಮಾದರಿ ನೀಡಲಾಗಿದ್ದು, ಇದರಲ್ಲಿ ರಕ್ತದ ಗುಂಪು ಎಬಿ ನೆಗೆಟಿವ್ ಹಾಗೂ ಹೆಪಟೈಟಿಸ್ ಬಿ ಸರ್ಫೇಸ್ ಆ್ಯಂಟಿಜೆನ್- Weಚಿಞಟಥಿ ಠಿosiಣive ಎಂಬ ವರದಿ ಬಂದಿದೆ. ಈ ವರದಿಯ ಬಗ್ಗೆ ಮನೆಯವರಿಗೆ ಸಂಶಯ ಬಂದಿದ್ದು, ರಕ್ತದ ಮಾದರಿ ಬಿ ಪಾಸಿಟಿವ್ ಬದಲಿಗೆ ಎಬಿ ಪಾಸಿಟಿವ್ ಬಂದಿರುವುದು ಹಾಗೂ ಹೆಪಟೈಟಿಸ್ ಬಿ ವರದಿ ಪಾಸಿಟಿವ್ ಇರುವ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ.
ಇದಾಗಿ ತಾ. ೨೦ರಂದು ಮತ್ತೊಮ್ಮೆ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಬಂದು ರಕ್ತದ ಮಾದರಿ ಪರೀಕ್ಷೆ
(ಮೊದಲ ಪುಟದಿಂದ) ಮಾಡಿಸಿದ್ದು, ಇದರಲ್ಲಿ ರಕ್ತದ ಗುಂಪು ಬಿ ಪಾಸಿಟಿವ್ ಹಾಗೂ ಹೆಪಟೈಟಿಸ್ ಬಿ ಸರ್ಫೇಸ್ ಆ್ಯಂಟಿಜೆನ್- ಓegeಣive ಬಂದಿದೆ. ಈ ವ್ಯತಿರಿಕ್ತ ವರದಿಯ ಬಗ್ಗೆ ಪ್ರಯೋಗಾಲಯ ಸಿಬ್ಬಂದಿಗಳಲ್ಲಿ ವಿಚಾರಿಸಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ರೋಗಿಯ ಪೋಷಕರು ಆರೋಪಿಸಿದ್ದಾರೆ.
ಒಂದು ವೇಳೆ ಹಳೆಯ ವರದಿಯನ್ನೇ ಬೆಂಗಳೂರಿನ ಆಸ್ಪತ್ರೆಗೆ ಸಲ್ಲಿಸಿ, ಅದರ ಆಧಾರದ ಮೇಲೆ ಚಿಕಿತ್ಸೆ ಕೊಡಿಸಿದ್ದರೆ ಪರಿಣಾಮ ಏನಾಗುತ್ತಿತ್ತು ಎಂದು ಪ್ರಶ್ನಿಸಿರುವ ಪೋಷಕರು, ಪ್ರಯೋಗಾಲಯ ಸಿಬ್ಬಂದಿಗಳ ಬೇಜವಾಬ್ದಾರಿ ಹಾಗೂ ಉಡಾಫೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಅಂತರದಲ್ಲಿ ರಕ್ತ ಪರೀಕ್ಷೆ ನಡೆಸಲಾಗಿದೆ. ಹೆಪಟೈಟಿಸ್ ವರದಿಯಲ್ಲಿ ಪಾಸಿಟಿವ್-ನೆಗೆಟಿವ್ ಬಂದಿರುವುದಷ್ಟೇ ಅಲ್ಲದೇ, ರಕ್ತದ ಗುಂಪು ಸಹ ಬದಲಾಗಲು ಸಾಧ್ಯವೇ? ಇದು ಪ್ರಯೋಗಾಲಯದ ಸಮಸ್ಯೆಯೊ ಅಥವಾ ಸಿಬ್ಬಂದಿಗಳ ಅಸಡ್ಡೆಯೋ ತಿಳಿಯುತ್ತಿಲ್ಲ. ಹೀಗಾದರೆ ಬಡ ರೋಗಿಗಳು ಪ್ರಯೋಗಾಲಯದ ಮೇಲೆ ನಂಬಿಕೆ ಇಡುವುದು ಹೇಗೆ? ಈ ಬಗ್ಗೆ ಆರೋಗ್ಯ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು. ಉಡಾಫೆಯ ವರ್ತನೆ ತೋರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ ಸಂಬAಧಿಕರು ‘ಶಕ್ತಿ’ಯೊಂದಿಗೆ ಆಗ್ರಹಿಸಿದ್ದಾರೆ.