ಚೆಟ್ಟಳ್ಳಿ, ಡಿ. ೨೦: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಮಂಡೇಪAಡ ಸುಜಾಕುಶಾಲಪ್ಪರವರಿಗೆ ಚೆಟ್ಟಳ್ಳಿಯ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನೂತನ ಎಂಎಲ್‌ಸಿ ಸುಜಾಕುಶಾಲಪ್ಪ ಹಾಗೂ ಬಿಜೆಪಿಯ ಪ್ರಮುಖರು ಚೆಟ್ಟಳ್ಳಿಗೆ ಆಗಮಿಸುತ್ತಿದ್ದಂತೆ ಜಯಘೋಷಗಳ ನಡುವೆ ಸ್ವಾಗತಿಸಿ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಸಭೆ ಸೇರಿದರು. ನೂತನ ಎಂಎಲ್ ಸಿ ಸುಜಾಕುಶಾಲಪ್ಪ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಗ್ರಾ.ಪಂ. ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ, ಬಿಜೆಪಿಯ ತಾಲೂಕು ಪದಾಧಿಕಾರಿಗಳು, ಚೆಟ್ಟಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ವಾರ್ಡ್ ಅಧ್ಯಕ್ಷರುಗಳು, ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.
ಸುಜಾಕುಶಾಲಪ್ಪ ಹಾಗೂ ಪಕ್ಷದ ಪ್ರಮುಖರನ್ನು ತೆರೆದ ಜೀಪಿನಲ್ಲಿ ಕರೆತರುವ ಮೂಲಕ ಬಿಜೆಪಿ ಕಾರ್ಯಕರ್ತರು ಡಿಜೆ ಹಾಡಿಗೆ ಹೆಜ್ಜೆಹಾಕಿದರು.ಗುಡ್ಡೆಹೊಸೂರು : ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ ಮಂಡೇಪAಡ ಸುಜಾಕುಶಾಲಪ್ಪ ಅವರ ಗೆಲುವನ್ನು ಗುಡ್ಡೆಹೊಸೂರುವಿನಲ್ಲಿ ಆಚರಿಸಲಾಯಿತು. ಈ ಸಂದರ್ಭ ಶಾಸಕ ಅಪ್ಪಚ್ಚುರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖ ಭಾರತೀಶ್, ಜಿ. ಪಂ. ಸದಸ್ಯೆ ಮಂಜುಳ, ಗುಡ್ಡೆಹೊಸೂರಿನ ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಬೂತ್ ಅಧ್ಯಕ್ಷ ಕುಡೆಕಲ್ ನಿತ್ಯ ಪ್ರವೀಣ್, ಎಂ.ಆರ್. ಮಾದಪ್ಪ, ಎಂ.ಆರ್. ಉತ್ತಪ್ಪ, ಮನುಮಹೇಶ್ ಹಾಜರಿದ್ದರು. ಪಟಾಕಿ ಸಿಡಿಸಿ ಕಾರ್ಯಕರ್ತರು ಕುಣಿದು ಸಂಭ್ರಮಿಸಿದರು.