ಸೋಮವಾರಪೇಟೆ, ಡಿ. ೨೦: ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೦೬ನೇ ಇಸವಿಯಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು, ಶಾಲೆಗೆ ಕಂಪ್ಯೂಟರ್ನ್ನು ಕೊಡುಗೆಯಾಗಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷಿö್ಮÃ, ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕ ಮಹೇಶ್, ಗಣಪತಿ, ಶಶಿಧರ್ ಅವರುಗಳ ಮೂಲಕ ಶಾಲೆಗೆ ಕಂಪ್ಯೂಟರ್ ಹಸ್ತಾಂತರಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಶಿವರಂಜಿನಿ, ರಚನ, ದೀಪಿಕ, ಅನಂತ್, ಪ್ರೀತಮ್, ಚಂದನ್, ವಿವಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.