ಮಡಿಕೇರಿ, ಡಿ. ೨೧: ಮೂಲತಃ ಜಿಲ್ಲೆಯ ನಿವಾಸಿ ಮೈಸೂರಿನ ಮೈಕಾ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಕಲ್ಮಾಡಂಡ ಜಗತ್ ಅಪ್ಪಣ್ಣ (೧೮) ನಿನ್ನೆ ನಾಲೆಯೊಂದರಲ್ಲಿ ಈಜಲು ಹೋಗಿ ದುರ್ಮರಣ ಹೊಂದಿದ್ದಾನೆ. ಕಲ್ಮಾಡಂಡ ವಾಸು ಅವರ ಪುತ್ರ ಅಪ್ಪಣ್ಣ ನಿನ್ನೆ ಸ್ನೇಹಿತರೊಂದಿಗೆ ಮೈಸೂರು ಸನಿಹದ ನಾಲೆಯಲ್ಲಿ ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಸಿಲುಕಿ ದುರ್ಮರಣ ಹೊಂದಿದ್ದಾನೆ. ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.