ಮಡಿಕೇರಿ, ಡಿ. ೨೦: ಕುಶಾಲನಗರ ಪಟ್ಟಣ ಪಂಚಾಯಿತಿಯ ಎಸ್.ಎಫ್.ಸಿ. ಅನುದಾನ ಪ.ಪಂ.ನಿಧಿಯ ಶೇ.೨೪.೧ ರ ಪರಿಶಿಷ್ಟ ಜಾತಿ, ಪಂಗಡದವರ, ಶೇ.೭.೨೫ ರ ಇತರೆ ಬಡಜನರ ಹಾಗೂ ಶೇ.೫ರ ಅಂಗವಿಕಲರ ಕಲ್ಯಾಣ ನಿಧಿಯ ಕಾರ್ಯಕ್ರಮದಡಿ ವ್ಯಕ್ತಿ ಸಂಬAಧಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸೌಲಭ್ಯ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಸಂಬAಧಪಟ್ಟ ದಾಖಲಾತಿಗಳೊಂದಿಗೆ ಡಿಸೆಂಬರ್, ೩೧ ರ ಸಂಜೆ ೫.೩೦ ರೊಳಗೆ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ ಕುಶಾಲನಗರ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಳನ್ನು ಪಟ್ಟಣ ಪಂಚಾಯಿತಿ ಕಚೇರಿಯಿಂದ ಪಡೆಯಬಹುದು.

ವಿವಿಧ ಕಾರ್ಯಕ್ರಮಗಳ ವಿವರ ಇಂತಿದೆ: ಶೇ. ೭.೨೫ ರ ಅನುದಾನ ವೈಯಕ್ತಿಕ ಸಂಬAಧಿತ ಕಾರ್ಯಕ್ರಮ:-ಯಶಸ್ವಿನಿ ಯೋಜನೆಯ ನಿಯಮ ಮತ್ತು ದರಗಳಂತೆ ಶಸ್ತç ಚಿಕಿತ್ಸೆಗೆ ಧನ ಸಹಾಯ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢಿಕರಣ ಪತ್ರ. ಭಾವಚಿತ್ರ-೦೨ ಸಂಖ್ಯೆ. ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ.(ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ಶಸ್ತç ಚಿಕಿತ್ಸೆಗೆ ಒಳಗಾಗುವ ರೋಗಿಯ ದವಾಖಾನೆಯ ದೃಡೀಕರಣ ಪತ್ರ ಸಲ್ಲಿಸಬೇಕು.

ಶೇ.೨೪.೧೦ರ ಪರಿಶಿಷ್ಟ ಜಾತಿ ವ್ಯಕ್ತಿ ಸಂಬAಧಿಸಿದ ಕಾರ್ಯಕ್ರಮ:- ಮನೆ ದುರಸ್ತಿ/ ಮಾರ್ಪಾಡು ಮಾಡಲು ಸಹಾಯಧನ. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢೀಕರಣ ಪತ್ರ., ಭಾವಚಿತ್ರ-೦೩ ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ.(ಆದಾಯ ಮೂರು ಲಕ್ಷದೊಳಗಿರಬೇಕು), ಬ್ಯಾಂಕಿನ ಉಳಿತಾಯ ಖಾತೆ ಪಾಸ್ ಬುಕ್ ಪ್ರತಿ, ಜಾತಿ ಪ್ರಮಾಣ ಪತ್ರ, ಹಾಲಿ ವಾಸವಾಗಿರುವ ಮನೆ ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ನಂಬರ್ ಇರುವ ಇತ್ತೀಚಿನ ಬಿಲ್ ಹಾಗೂ ರಶೀದಿ, ಪ್ರಸಕ್ತ ವರ್ಷದ ಇ-ಆಸ್ತಿ ನಮೂನೆ ಪ್ರತಿ ಸಲ್ಲಿಸುವುದು.

ಶೇ.೫ ರ ವ್ಯಕ್ತಿ ಸಂಬAಧಿಸಿದ ಕಾರ್ಯಕ್ರಮ:- ಶೇ.೫ರ ಪಟ್ಟಣ ಪಂಚಾಯಿತಿಗೆ ಎಸ್.ಎಫ್.ಸಿ ಅನುದಾನ ವ್ಯಕ್ತಿ ಸಂಬAಧಿಸಿದ ಕಾರ್ಯಕ್ರಮ. ವಿಶೇಷಚೇತನ ಫಲಾನುಭವಿಗಳಿಗೆ ಒಂದು ಬಾರಿ ಜೀವ ವಿಮೆ ಮಾಡಿಸುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢೀಕರಣ ಪತ್ರ, ಭಾವಚಿತ್ರ-೦೩ ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ(ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ಅಂಗವಿಕಲತೆ ಬಗ್ಗೆ ಸಕ್ಷಮ ಪ್ರಾಧಿಕಾರಿಂದ ಪಡೆದಿರುವ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು. ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು /ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮ ಫಲಕದಲ್ಲಿ ನೋಡುವುದು), ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.

ಶೇ.೭.೨೫ರ ವ್ಯಕ್ತಿ ಸಂಬAಧಿಸಿದ ಕಾರ್ಯಕ್ರಮ:- ನಗರ ಬಡ ವಿದ್ಯಾರ್ಥಿಗಳಲ್ಲಿ ಎಸ್‌ಎಸ್‌ಎಲ್‌ಸಿ/ ಪಿಯುಸಿ ಓದುತ್ತಿರುವ ಮೆರಿಟ್ ಆಧಾರದ ಮೇಲೆ ಟ್ಯಾಬ್ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢಿಕರಣ ಪತ್ರ, ಭಾವಚಿತ್ರ-೦೩ ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ (ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ವ್ಯಾಸಂಗ ದೃಢೀಕರಣ ಪತ್ರದ ಪ್ರತಿ ಸಲ್ಲಿಸಬೇಕು. ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು /ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣಪತ್ರ (ಮಾದರಿ ನಮೂನೆಯನ್ನು ಕಚೇರಿಯ ನಾಮಫಲಕದಲ್ಲಿ ನೋಡುವುದು), ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.

ಶೇ.೨೪.೧೦ರ ವೈಯಕ್ತಿಕ ಸಂಬAಧಿಸಿದ ಕಾರ್ಯಕ್ರಮ:- ಪರಿಶಿಷ್ಟ ಜಾತಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢೀಕರಣ ಪತ್ರ, ಭಾವಚಿತ್ರ-೦೩ ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ್ರ (ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ಹೊಲಿಗೆ ತರಬೇತಿ ಪಡೆದಿರುವ ಬಗ್ಗೆ ದೃಢೀಕರಣ ಪತ್ರ ಪ್ರತಿ. ಈ ಸೌಲಭ್ಯವನ್ನು ಪಡೆದಿಲ್ಲದಿರುವ ಈ ಇಲಾಖೆಯಿಂದ ಅಂಬೇಡ್ಕರ್ ನಿಗಮ/ಸಮಾಜ ಕಲ್ಯಾಣ ಇಲಾಖೆಯಲ್ಲಿ ದೃಢಿಕರಣ ಪತ್ರ ಸಲ್ಲಿಸುವುದು.

ಶೇ.೨೪.೧೦ರ ವೈಯಕ್ತಿಕ ಸಂಬAಧಿಸಿದ ಕಾರ್ಯಕ್ರಮ:- ಪರಿಶಿಷ್ಟ ಪಂಗಡ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡುವುದು. ಅರ್ಜಿಯೊಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡು, ಇತ್ತೀಚಿನ ವಾಸ ಸ್ಥಳ ದೃಢೀಕರಣ ಪತ್ರ, ಭಾವಚಿತ್ರ-೦೩ ಸಂಖ್ಯೆ, ಒಂದು ವರ್ಷದೊಳಗೆ ಪಡೆದಿರುವ ಆದಾಯ ಪ್ರಮಾಣ ಪತ

್ರ (ಆದಾಯ ಮೂರು ಲಕ್ಷದೊಳಗಿರಬೇಕು), ಜಾತಿ ಪ್ರಮಾಣ ಪತ್ರ, ಹೊಲಿಗೆ ತರಬೇತಿ ಪಡೆದಿರುವ ಬಗ್ಗೆ ದೃಢೀಕರಣ ಪತ್ರದ ಪ್ರತಿ, ಈ ಸೌಲಭ್ಯವನ್ನು ಇತರೆ ಇಲಾಖೆಯಲ್ಲಿ ಪಡೆಯದೇ ಇರುವ ಬಗ್ಗೆ ಸಮಾಜ ಕಲ್ಯಾಣ/ಅಂಬೇಡ್ಕರ್ ನಿಗಮದಿಂದ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ಕುಶಾಲನಗರ ಪ.ಪಂ.ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.