ಮಡಿಕೇರಿ, ಡಿ. ೨೧: ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ ಕೇಂದ್ರದಿAದ ಹೊರಹೋಗುವ ಎಫ್ ೭ ಮೇಕೇರಿ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿದೆ. ಆದ್ದರಿಂದ ತಾ. ೨೩ ರಂದು (ನಾಳೆ) ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೪ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕಗ್ಗೋಡ್ಲು, ಹಾಕತ್ತೂರು, ಬಿಳಿಗೇರಿ, ತೊಂಬತ್ತುಮನೆ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಅಶೋಕ್ ಕೋರಿದ್ದಾರೆ.