ಸಿದ್ದಾಪುರ, ಡಿ. ೨೦ : ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹಾಕಿ ಜಾತಿ ರಾಜಕೀಯ ಮಾಡುತ್ತಿರುವ ಬಿಜೆಪಿಯ ದುರಾಡಳಿತದ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು ಎಂದು ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಗುಣಶೇಖರ್ ಎಚ್ಚರಿಸಿದ್ದಾರೆ.

ಸಿದ್ದಾಪುರದಲ್ಲಿ ನಡೆದ ಸಿಪಿಐ ಪಕ್ಷದ ರಾಷ್ಟಿçÃಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಗುಣಶೇಖರ್ ಮಾತನಾಡಿ, ಈ ದೇಶಕ್ಕೆ ಅಚ್ಚೇದಿನ್ ಬರುತ್ತದೆ ಎಂದು ನಂಬಿ ಜನಸಾಮಾನ್ಯರು ಬಿಜೆಪಿಗೆ ಮತ ಹಾಕಿದ್ದಾರೆ. ಗೆದ್ದ ಬಿಜೆಪಿ ಜನಸಾಮಾನ್ಯರ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದೆ.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿAದಲೂ ನೋಟು ಅಮಾನೀಕರಣ, ಜಿಎಸ್‌ಟಿ, ರೈತ, ಕಾರ್ಮಿಕ ವಿರೋಧಿ ನೀತಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಸೇರಿದಂತೆ ಹಲವಾರು ಸಂಕಷ್ಟವನ್ನು ಎದುರಿಸುತ್ತಿರುವ ದೇಶದ ಜನರು ಬಿಜೆಪಿ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ನಿರ್ವಹಿಸುತ್ತಿರುವ ಬಿಜೆಪಿ ಬಹುತೇಕ ಇಲಾಖೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ.ಜನ ಸಾಮಾನ್ಯರಿಗೆ ನೆರವಾಗಬೇಕಾಗಿದ್ದ ಸರಕಾರಗಳು ಅಭಿವೃದ್ಧಿ ಕಾಳಜಿ ಬಗ್ಗೆ ಚಿಂತಿಸದೆ ಕೋಮು ಜಾತಿ ರಾಜಕೀಯ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಅಮ್ಜದ್ ಮಾತನಾಡಿ, ಜನಪರ ಚಳವಳಿ ಮೂಲಕ ೯೭ ವರ್ಷ ಪೂರೈಸಿರುವ ಸಿಪಿಐ ಪಕ್ಷದ ಸಂಸ್ಥಾಪನಾ ದಿನ ಅಂಗವಾಗಿ ಜಿಲ್ಲೆ, ರಾಜ್ಯ, ರಾಷ್ಟಿçÃಯ ಸಮ್ಮೇಳನಗಳನ್ನು ನಡೆಸಲು ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದ್ದು ವಿಜಯವಾಡದಲ್ಲಿ ನಡೆಯುವ ರಾಷ್ಟಿçÃಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮುಂದಾಗಬೇಕೆAದು ಮನವಿ ಮಾಡಿದರು. ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಸೋಮಪ್ಪ ಮಾತನಾಡಿ, ಸಿಪಿಐ ರಾಷ್ಟಿçÃಯ ಸಮ್ಮೇಳನದ ಭಾಗವಾಗಿ ಕೊಡಗು ಜಿಲ್ಲೆಯಲ್ಲೂ ಸಮ್ಮೇಳನ ನಡೆಸಲು ಚರ್ಚಿಸಲಾಗಿದೆ ಎಂದರು. ಸಿಪಿಐ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ. ಸುನೀಲ್, ಎಐಟಿಯುಸಿ ಉಪಾಧ್ಯಕ್ಷ ಮಣಿ, ಪ್ರಮುಖರಾದ ಕೃಷ್ಣ ಕರಡಿಗೋಡು, ಸೀತಾರಾಂ, ರಮೇಶ್, ಕುಮಾರ್, ಪ್ರಕಾಶ್, ಆನಂದ್ ಸೇರಿದಂತೆ ಮತ್ತಿತರರು ಇದ್ದರು.