ಸೋಮವಾರಪೇಟೆ,ಡಿ.೨೦: ಉಪ ಚುನಾವಣೆ ಘೋಷಣೆಯಾಗಿರುವ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ೨ ಸ್ಥಾನಗಳಿಗೆ ಸಂಬAಧಿಸಿದAತೆ ಒಟ್ಟು ೫ ಮಂದಿ ಕಣದಲ್ಲಿದ್ದಾರೆ.

ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಇಂದು ಯಾರೊಬ್ಬರೂ ನಾಮಪತ್ರ ವಾಪಸ್ ಪಡೆಯದೆ ಚುನಾವಣೆಗೆ ಅಣಿಯಾಗುತ್ತಿದ್ದು, ಸಾಮಾನ್ಯ ಮಹಿಳೆ ಮೀಸಲಾಗಿರುವ ಒಂದು ಸ್ಥಾನಕ್ಕೆ ಮೂವರು, ಹಿಂದುಳಿದ ವರ್ಗ ಎ ಮೀಸಲಾತಿಯ ಒಂದು ಸ್ಥಾನಕ್ಕೆ ಈರ್ವರು ಸ್ಪರ್ಧಿಸಿದ್ದಾರೆ. ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಎಂ. ದಿವ್ಯ, ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತರಾಗಿ ಹೆಚ್.ಎಸ್. ಮಂಜುಳಾ ಹಾಗೂ ಕೆ.ಎ. ಸುಕನ್ಯ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.

ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರಕ್ಕೆ ಸಂಬAಧಿಸಿದAತೆ ಬಿಜೆಪಿ ಬೆಂಬಲಿತರಾಗಿ ಟಿ.ಕೆ. ಚಂದ್ರಶೇಖರ್ (ಪ್ರವೀಣ್) ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ವಿ. ಹರೀಶ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ. ತಾ. ೨೭ ರಂದು ಮತದಾನ, ಅವಶ್ಯವಿದ್ದಲ್ಲಿ ತಾ. ೨೯ರಂದು ಮರು ಮತದಾನ, ತಾ. ೩೦ರಂದು ಮತ ಎಣಿಕೆ ನಡೆಯಲಿದೆ.