ನಾಪೋಕ್ಲು : ಸಮೀಪದ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತವು ದೇವರ ಹಬ್ಬ ವಿಜೃಂಭಣೆಯಿAದ ನೆರವೇರಿತು.
ತಾ, ೧೫ ರಂದು ದೇವರಿಗೆ ಮಣ್ಣಿನ ನಾಯಿಗಳ ರೂಪ ಹರಕೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ತಾ. ೧೮ ರಂದು ರಾತ್ರಿ ೯ ಗಂಟೆಗೆ ದೀಪಾರಾಧನೆ ನಂತರ ಬೆಳಗ್ಗಿನವರೆಗೆ ವಿವಿಧ ಕೋಲ ನಡೆದು ತಾ, ೧೯ ರಂದು ೧೦ ಗಂಟೆಗೆ ಕಲ್ಯಾಟ ಅಜ್ಜಪ್ಪ ಕೋಲ ನಡೆಯಿತು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ಏರ್ಪಾಡಿಸಲಾಗಿತ್ತು. ನಂತರ ಅಪರಾಹ್ನ ೧.೩೦ ರ ಸಮಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಕೋಲ ಅಗ್ನಿಪ್ರವೇಶ ನೆರವೇರಿತು. ವಿವಿಧ ರೀತಿಯ ಹರಕೆ ಸೇವೆಯೊಂದಿಗೆ ಹಬ್ಬವು ಸಂಪನ್ನ ಗೊಂಡಿತು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಶಾಸಕ ಕೆ.ಜಿ. ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ರಾಬಿನ್ ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.