ಮಡಿಕೇರಿ, ಡಿ. ೨೦: ಕೊಡಗು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಗುಮ್ಮಟ್ಟೀರ ಕಿಲನ್ ಗಣಪತಿ ಆಯ್ಕೆಯಾದರು. ನಗರದ ರಾಜ್‌ದರ್ಶನ್ ಸಭಾಂಗಣ ದಲ್ಲಿ ನಡೆದ ಮಹಾಸಭೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯಿತು. ಸಂಘದ ಉಪಾಧ್ಯಕ್ಷ ರಾಗಿ ಮಹೇಶ್, ಕಾರ್ಯದರ್ಶಿ ಯಾಗಿ ಸುಂದರ್ ಜಿ.ಎಸ್., ಖಜಾಂಜಿ ಯಾಗಿ ಬಿ. ಎ. ಮಹಾಬಲ, ಜಂಟಿ ಕಾರ್ಯದರ್ಶಿ ಗಳಾಗಿ ಪೊನ್ನಂಪೇಟೆ ತಾಲೂಕಿನಿಂದ ವೀರಾಜ್ ಅಪ್ಪಚ್ಚು, ದ್ಯಾನ್ ಸುಬ್ಬಯ್ಯ, ವೀರಾಜಪೇಟೆ ತಾಲೂಕಿನಿಂದ ಬಾಬು ನಾಯ್ಡು, ಜೀವನ್, ಮಡಿಕೇರಿ ತಾಲೂಕಿನಿಂದ ಎನ್. ಬಿ. ರಾಜಶೇಖರ್, ಸೋಮವಾರಪೇಟೆ ತಾಲೂಕಿನಿಂದ ಸುಜಾ ತಿಮ್ಮಯ್ಯ, ಪಿ.ಸಿ. ವಿಜಯಕುಮಾರ್, ಕುಶಾಲನಗರ ತಾಲೂಕಿನಿಂದ ಎಂ.ಬಿ. ಮಾಚಯ್ಯ, ನಿರ್ದೇಶಕರು ಗಳಾಗಿ ಕೆ. ರಮೇಶ್, ಎಸ್.ಸಿ. ಸುಬ್ರಮಣಿ, ಮನೋಹರ್ ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಕಿಲನ್, ೧೮೬ ಸದಸ್ಯರು ಹೊಂದಿರುವ ಸಂಘಟನೆಯ ಬಲವರ್ದನೆಗೆ ಪೂರಕವಾಗಿ ಶ್ರಮಿಸುತ್ತೇನೆ. ಮಾರಾಟಗಾರರ ಸಮಸ್ಯೆ ಪರಿಹಾರಕ್ಕೆ ಸಂಘಟನಾತ್ಮಕ ವಾಗಿ ಮುಂದುವರೆಯಬೇಕು. ಇದಕ್ಕೆ ಸರ್ವರ ಸಹಕಾರ ಬೇಕಾಗಿದೆ ಎಂದು ಮನವಿ ಮಾಡಿದರು. ಸಭೆಯಲ್ಲಿ ಮಾಜಿ ಅಧ್ಯಕ್ಷ ಸುಂದರ್, ಪ್ರಮುಖರಾದ ಮಾಚಯ್ಯ, ರಾಜಶೇಖರ್, ಜಗದೀಶ್, ಬಿ.ಎಸ್. ಸುರೇಶ್ ಹಾಜರಿದ್ದರು.