ಸೋಮವಾರಪೇಟೆ, ಡಿ. ೧೯: ಯಾವುದೇ ಒಂದು ಸಂಸ್ಕೃತಿ-ಪರAಪರೆ ಉಳಿಯಬೇಕಾದರೆ ಮೊದಲು ಅದರ ಆಚರಣೆಯಾಗ ಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಿಸಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ತಾಲೂಕು ಹಿಂದೂ ಮಲೆಯಾಳ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತಿ ಮತ್ತು ಪರಂಪರೆ ಉಳಿಯಬೇಕಾದರೆ ಅದನ್ನು ನಾವು ಪಾಲಿಸುವುದರೊಂದಿಗೆ, ನಮ್ಮ ಮಕ್ಕಳು ಸಹ ಅದನ್ನು ಮುಂದುವರೆಸುವAತೆ ನೋಡಿಕೊಳ್ಳಬೇಕು. ಸಮಾಜ ಬಲಿಷ್ಠವಾಗಿ ಬೆಳೆಯಬೇಕಾದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಕೇರಳದ ಕಾಂಞಗಾಡ್ನ ಶ್ರೀ ಸ್ವಾಮಿ ಗಂಗಾ ಜೀ ನಾಯರ್ ಅವರು ಆಶೀರ್ವಚನ ನೀಡಿ, ನಮ್ಮ ಹಿಂದೂ ಧರ್ಮದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಹಾಗಾದಲ್ಲಿ ಮಾತ್ರ ಧಾರ್ಮಿಕ ಸಂಸ್ಕೃತಿ ಬೆಳೆಯಲು ಸಾಧ್ಯ.
ಜಿಲ್ಲಾ ಸಮಿತಿಯಿಂದ ಮಡಿಕೇರಿಯಲ್ಲಿ ನಿರ್ಮಾಣ ಮಾಡುತ್ತಿರುವ ಸಮಾಜದ ಭವನಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಮುಂದಿನ ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡು ಸಮಾಜ ಬಾಂಧವರ ಬಳಕೆಗೆ ಸಿಗುವಂತಾಗ ಬೇಕೆಂದು ಆಶಿಸಿದರು.
ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ವಹಿಸಿದ್ದರು. ವೇದಿಕೆಯಲ್ಲಿ ಮೈಸೂರಿನ ಉದ್ಯಮಿ ರಾಜೇಂದ್ರ ಬಾಬು, ಕೊಡಗು ಜಿಲ್ಲಾ ಹಿಂದೂ ಮಲೆಯಾಳ ಸಮಾಜದ ಗೌರವಾಧ್ಯಕ್ಷ ಕೆ.ಎಸ್. ರಮೇಶ್, ಉಪಾಧ್ಯಕ್ಷ ಸುಧೀರ್, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಎಸ್ಎನ್ಡಿಪಿ ಮಡಿಕೇರಿ ಶಾಖೆಯ ಅಧ್ಯಕ್ಷ ವಾಸುದೇವ್, ವೀರಾಜಪೇಟೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಿಬಾ ಪೃಥ್ವಿನಾಥ್, ಕುಶಾಲನಗರದ ಕೇರಳ ಸಮಾಜದ ಅಧ್ಯಕ್ಷ ಶಿವನಂದನ್, ಕುಶಾಲನಗರದ ಉದ್ಯಮಿ ಎ.ಕೆ. ಉಣ್ಣಿಕೃಷ್ಣನ್, ಜಿ.ಪಂ. ಮಾಜಿ ಸದಸ್ಯೆ ಸುನಿತಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ೨೦೨೦-೨೧ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಲಾಯಿತು. ಸಮಾಜ ಬಾಂಧವರಿಗೆ ಪೂಕಳಂ ಸ್ಪರ್ಧೆ ನಡೆಯಿತು.