*ಗೋಣಿಕೊಪ್ಪ, ಡಿ. ೧೮: ತಿತಿಮತಿ ಗ್ರಾಮದಲ್ಲಿ ವನ್ಯಪ್ರಾಣಿಗಳಿಂದ ಉಂಟಾಗುವ ಸಮಸ್ಯೆಯನ್ನು ಬಗೆಹರಿಸುವಂತೆ ಮತ್ತು ಗ್ರಾಮ ಪಂಚಾಯಿತಿ ಸ್ಥಳೀಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳುವಂತೆ÷ಒತ್ತಾಯಿಸಿ ಮನವಿ ಪತ್ರವನ್ನು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕ ವತಿಯಿಂದ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗೆ ಸಲ್ಲಿಸಲಾಯಿತು.

ರಾಜ್ಯ ಮಾಧ್ಯಮ ಕಾರ್ಯದರ್ಶಿ ಮಂಜುಕಿರಣ್ ನೇತೃತ್ವದಲ್ಲಿ ಕೊಡಗಿನ ತಂಡ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ತಿತಿಮತಿಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯರು ಇಲ್ಲದ ಕಾರಣ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ನಾಯಿಮನೆ ಕಾಲೋನಿಯ ಕೊಪ್ಪಕ್ಕೆ ತೆರಳುವ ಸೇತುವೆ ಬಳಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟ ನಡೆಯುತ್ತಿದೆ ಹಾಗೂ ವನ್ಯಪ್ರಾಣಿಗಳ ಹಾವಳಿಯಿಂದ ಶಾಲಾ ಮಕ್ಕಳು ಶಾಲೆಗೆ ತೆರಳಲು ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ರಸ್ತೆ ಬದಿಗಳಲ್ಲಿ ಹಾಗೂ ಪಾಳುಬಿಟ್ಟಿರುವ ಜಾಗಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.

ಕಾಡುಪ್ರಾಣಿಗಳ ಉಪಟಳ ತಡೆಯಲೆಂದು ಆರ್.ಆರ್.ಟಿ. ತಂಡ ರಚಿಸಲಾಗಿದ್ದು, ತಂಡ ಕಾರ್ಯೋನ್ಮುಖವಾಗದೇ ನಿಷ್ಕಿçಯಗೊಂಡಿದೆ. ಇದನ್ನು ಮತ್ತೆ ಸಕ್ರಿಯವಾಗಿ ಕಾರ್ಯೋನ್ಮುಖಗೊಳಿಸಲು ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ಚೆಪುö್ಪಡಿರ ಕಾರ್ಯಪ್ಪ, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಳ್ಳಿಚಂಡ ಧನು, ಜಿಲ್ಲಾ ಸಂಚಾಲಕ ಬಾದುಮಂಡ ಮಹೇಶ್, ಜಿಲ್ಲಾ ಖಜಾಂಚಿ ಚಂಗುಲAಡ ರಾಜಪ್ಪ, ಚೆಪುö್ಪಡಿರ ಮಹೇಶ್, ಕಟ್ಟೇರ ಪ್ರಕಾಶ್‌ನಂಜಪ್ಪ, ಹಸಿರು ಸೇನೆ ತಂಡದ ನಾಯಕರಾದ ರಘು, ಮೋಹನ್, ರವಿ ಹಾಜರಿದ್ದರು.