ನಾಪೋಕ್ಲು, ಡಿ.೧೯: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಪ್ರಾಂತ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ನಲ್ಲಿ ಮೂರ್ನಾಡಿನ ಪಿ.ಎಂ.ಅಪ್ಪಣ್ಣ ಹಾಗೂ ನಾಪೋಕ್ಲುವಿನ ಲವಕಾಳಪ್ಪ ವಿಜೇತರಾದರು. ಗೋಣಿಕೊಪ್ಪಲುವಿನ ಧನ್ಯ ಹಾಗೂ ಅಮ್ಮತ್ತಿಯ ರೋಷನ್ ರನ್ನರ್ ಪ್ರಶಸ್ತಿ ಗಳಿಸಿದರು. ಮಹಿಳಾ ವಿಭಾಗದಲ್ಲಿ ಮೂರ್ನಾಡಿನ ಇಂದಿರಾ ಅಪ್ಪಣ್ಣ ಹಾಗೂ ಸಿದ್ದಾಪುರದ ವಿದ್ಯಾದೇವಯ್ಯ ವಿಜೇತರಾದರೆ ಮೂರ್ನಾಡಿನ ದಿವ್ಯಸತೀಶ್ ಹಾಗೂ ಅಂಜಲಿ ರವಿ ರನ್ನರ್ ಪ್ರಶಸ್ತಿ ಗಳಿಸಿಕೊಂಡರು. ಮಿಕ್ಸ್ಡ್ ಡಬಲ್ಸ್ ಸ್ಪರ್ಧೆಯಲ್ಲಿ ಮೂರ್ನಾಡಿನ ಪಿಎಂ.ಅಪ್ಪಣ್ಣ ಹಾಗೂ ದಿವ್ಯಸತೀಶ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಸಿದ್ದಾಪುರದ ಭರತ್ ಹಾಗೂ ವಿದ್ಯಾದೇವಯ್ಯ ರನ್ನರ್ ಪ್ರಶಸ್ತಿ ಗಳಿಸಿದರು.

ಕೊಡವ ಸಮಾಜದಲ್ಲಿ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಪಂದ್ಯಾವಳಿಯನ್ನು ವಲಯಾಧ್ಯಕ್ಷ ಡಾ.ಪಂಚಮ್ ತಿಮ್ಮಯ್ಯ ಉದ್ಘಾಟಿಸಿದರು. ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ೩೫ ತಂಡಗಳು ಪಾಲ್ಗೊಂಡಿದ್ದವು.

ಪುರುಷರ ಡಬಲ್ಸ್ ವಿಭಾಗದ ಟ್ರೋಫಿಯನ್ನು ಬೊಪ್ಪಂಡ ಜಾಲಿಬೋಪಯ್ಯ ಹಾಗೂ ಶೈಲಾಬೋಪಯ್ಯ, ಮಿಕ್ಸ್÷್ಡ ಡಬಲ್ಸ್ ಸ್ಪರ್ಧೆಯ ಟ್ರೋಫಿಗಳನ್ನು ಕೇಟೋಳಿರ ಎಸ್.ಕುಟ್ಟಪ್ಪ ಹಾಗೂ ಜಾಜಿಕುಟ್ಟಪ್ಪ ಪ್ರಾಯೋಜಿಸಿದ್ದರು. ಮಹಿಳಾ ವಿಭಾಗದ ಟ್ರೋಫಿಗಳನ್ನು ಕೇಟೋಳಿರ ರತ್ನಚರ್ಮಣ ಹಾಗೂ ರಾಜಾಚರ್ಮಣ ಪ್ರಾಯೋಜಿಸಿದ್ದರು. ಲಯನ್ಸ್ ವಲಯಾಧ್ಯಕ್ಷ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಬ್ಯಾಡ್ಮಿಂಟನ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮುಕ್ಕಾಟಿರ ಎಂ.ವಿನಯ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಪಂಚಮ್ ತಿಮ್ಮಯ್ಯ ಸೌಮ್ಯತಿಮ್ಮಯ್ಯ, ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಅರುಣ್‌ಅಪ್ಪಚ್ಚು, ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಪುಷ್ಪರಾಜ್, ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ, ಖಜಾಂಚಿ ಕೇಟೋಳಿರ ಕುಟ್ಟಪ್ಪ ಪಾಲ್ಗೊಂಡಿದ್ದರು.