ಮಡಿಕೇರಿ, ಡಿ.೧೯: ನಗರದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಧೆಯು ಕೊಡಗು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘ-ಸAಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ “೬ ತಿಂಗಳು/ ೧೮೦ ದಿನಗಳ” ಅವಧಿಯ ದೂರಶಿಕ್ಷಣ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್” ತರಬೇತಿಯು ಜನವರಿ, ೦೧ ರಿಂದ ಪ್ರಾರಂಭವಾಗಲಿದೆ. ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ತರಬೇತಿ ಶಿಕ್ಷಣ ಅವಶ್ಯಕವಾಗಿರುವುದರಿಂದ ಸಂಸ್ಥೆಯು ತರಬೇತಿ ನೀಡುತ್ತಿದ್ದು, ಸಹಕಾರ ಇಲಾಖೆ, ಸಂಘ ಸಂಸ್ಥೆಗಳು ಹಾಗೂ ಸಹಕಾರ ಒಕ್ಕೂಟ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ರಾಜ್ಯದ ಮಡಿಕೇರಿ, ಬೆಂಗಳೂರು, ಮೈಸೂರು, ಮೂಡಬಿದರೆ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಇಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಥೆ ನಡೆಸುತ್ತಿದೆ. ಈ ತರಬೇತಿ ಸಂಸ್ಥೆಗಳ ಮೂಲಕ ಸಹಕಾರ ಸಂಘ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾತ್ರ “೬ ತಿಂಗಳು/ ೧೮೦ ದಿನಗಳ” ಅವಧಿಯ ದೂರ ಶಿಕ್ಷಣದ ಮೂಲಕ “ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿಸೆಂಬರ್ ೩೧ ಕೊನೆ ದಿನವಾಗಿದೆ.

ದೂರ ಶಿಕ್ಷಣ ಡಿ.ಸಿ.ಎಂ., ತರಬೇತಿಯ ಅರ್ಜಿ ಫಾರಂ ಮತ್ತು ಕೈಪಿಡಿ ಪುಸ್ತಕವನ್ನು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಮಡಿಕೇರಿ ತರಬೇತಿ ಸಂಸ್ಥೆಯಲ್ಲಿ ಪಡೆಯಬಹುದು. ಅರ್ಜಿ ಮತ್ತು ಕೈಪಿಡಿ ಪುಸ್ತಕದ ಶುಲ್ಕ ರೂ.೨೦೦ ಗಳನ್ನು ನಗದಾಗಿ ಪಾವತಿಸಿ ಪಡೆಯಬಹುದು; ವೆಬ್‌ಸೈಟ್ ತಿತಿತಿ.ಞsಛಿಜಿಜಛಿm.ಛಿo.iಟಿ ಆನ್‌ಲೈನ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಅಂಚೆ ಮೂಲಕ ಅರ್ಜಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ರೂ.೧೦ ಮೌಲ್ಯದ ಸ್ಟಾಂಪ್ ಅಂಟಿಸಿದ ಸ್ವ-ವಿಳಾಸವಿರುವ ರೂ.೨೦೦ ಗಳ ಡಿ.ಡಿ/ಪೋಸ್ಟಲ್ ಆರ್ಡರ್ ಜೊತೆಗೆ ೧೨”x೧೦” ಅಳತೆಯ ಲಕೋಟೆಯನ್ನು ಲಗತ್ತಿಸಿ ಪ್ರಾಂಶುಪಾಲರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಮಡಿಕೇರಿ ಇವರಿಂದ ಪಡೆಯಬಹುದು. ಸಿಬ್ಬಂದಿಗಳು ಅರ್ಜಿಯನ್ನು ಭರ್ತಿ ಮಾಡಿ ಪ್ರಾಂಶುಪಾಲರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಅಬ್ಬಿಫಾಲ್ಸ್ ರಸ್ತೆ, ಮುತ್ತಪ್ಪ ದೇವಸ್ಥಾನ ಹತ್ತಿರ, ಮಡಿಕೇರಿ ಇವರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ. ೯೪೪೯೨೪೫೦೨೪/ ೮೭೬೨೧೧೦೯೫೨/ ೭೨೫೯೭೨೯೧೦೪, ೮೭೬೨೯೨೫೮೬೨ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲರು ತಿಳಿಸಿದ್ದಾರೆ.