ಮಡಿಕೇರಿ, ಡಿ. ೧೯: ಕೊಡಗು ರಕ್ಷಣಾ ವೇದಿಕೆಯ ಶಿರಂಗಾಲ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಎಸ್.ಎಸ್. ಮಂಜುನಾಥ ಆಯ್ಕೆಯಾಗಿದ್ದಾರೆ.
ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಶಿರಂಗಾಲದಲ್ಲಿ ನಡೆದ ಸಭೆಯಲ್ಲಿ ಕೊರವೇಯ ಹೆಬ್ಬಾಲೆ ಘಟಕದ ಅಧ್ಯಕ್ಷ ಚಂದ್ರಕುಮಾರ್ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿ.
ಉಪಾಧ್ಯಕ್ಷರಾಗಿ ವಿನಯ, ಕಾರ್ಯದರ್ಶಿಯಾಗಿ ಚಿಂತನ್, ಸಂಘಟನಾ ಕಾರ್ಯದರ್ಶಿಯಾಗಿ ಧನುಕುಮಾರ್, ನಿರ್ದೇಶಕರುಗಳಾಗಿ ಗಿರೀಶ್, ದೀಪು, ಹೇಮಂತ್, ರವಿ, ಜಸ್ವಂತ್, ವಿನಯ್ ಕುಮಾರ್, ಸಂತೋಷ್, ಅಂಕಿತ್ ನೇಮಕಗೊಂಡಿದ್ದಾರೆ.