ಚೆಯ್ಯಂಡಾಣೆ, ಡಿ. ೧೯: ಸಮೀಪದ ಚಿಟ್ಟಡೆಯ ಇಝತುಲ್ ಇಸ್ಲಾಂ ಮದರಸದಲ್ಲಿ ಸುನ್ನಿ ಯುವಜನ ಸಂಘದ ಮಹಾಸಭೆಯನ್ನು ವೀರಾಜಪೇಟೆ ಸೆಂಟರ್ ಸಾರಥಿ ಅಹ್ಮದ್ ಮದನಿ ಗುಂಡಿಕೆರೆ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಚಿಟ್ಟಡೆ ಮಹಲ್ ಖತೀಬ್ ಸಯ್ಯದ್ ಅಹ್ಮದ್ ಖಾಸಿಂ ಸಖಾಫಿ ಅಲ್ ಹಾದಿ ತಂಘಳ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಶರೀಫ್ ಝೈನಿ, ಚಿಟ್ಟಡೆ ಜಮಾಅತ್ ಅಧ್ಯಕ್ಷ ಫÀಕ್ರುದ್ಧೀನ್ ಹಾಗೂ ಸ್ಥಳೀಯ ಬ್ರಾಂಚ್ ಸದಸ್ಯರು ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ನೂತನ ಸಾಲಿನ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಝೈನಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಸಿ.ಯು., ಕೋಶಾಧಿಕಾರಿಯಾಗಿ ಉಮ್ಮರ್ ವೈ.ಎ., ಉಪಾಧ್ಯಕ್ಷರಾಗಿ ಫಕ್ರುದ್ಧೀನ್, ಇಸಾಬಾನೌಶಾದ್ ವೈ.ಎ. ದಅವ ಮುಹಮ್ಮದ್ ಮುಸ್ಲಿಯಾರ್, ಸದಸ್ಯರಾಗಿ ಸ್ವಾದಿಕ್ ಮಿಸ್ಬಾಹಿ, ಅಬ್ದುಲ್ ರಜಾಕ್ ಕೆ.ಯು, ಮುಸ್ತಫಾ ವೈ.ಎಂ, ಅಝೀಜ್ ಸಿ.ಎ. ಸಿದ್ದಿಕ್ ಸಿ.ಎಂ, ಮೊಹಮ್ಮದ್ ಕೆ.ಯು, ಸಾದುಲಿ ವೈ.ಎ, ಹಸೈನಾರ್ ವೈ.ಎಂ, ಹುಸೈನ್ ವೈ.ಎ. ಅವರುಗಳÀನ್ನು ಆಯ್ಕೆ ಮಾಡಲಾಯಿತು.