ನಾಪೋಕ್ಲು, ಡಿ. ೧೭ : ನಗರದಿಂದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಲಯಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಕಾಡು ಗಿಡಗಂಟಿ ಬೆಳೆದಿದ್ದು ಇಲ್ಲಿನ ಬೇತು ಪಿ.ಎ.ಜಿ. ಗೆಳೆಯರ ಬಳಗದವರು ರಸ್ತೆ ಬದಿಯ ಕಾಡುಗಳನ್ನು ಕಡಿದು ಶ್ರಮದಾನ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಕ್ಕಿ ದೇವಾಲಯದ ಶಾಸ್ತಾವು ಹಬ್ಬವು ತಾ. ೧೮,೧೯ ರಂದು ಜರುಗಲಿದೆ.

ಈ ಸಂದರ್ಭ ಪಿ.ಎ.ಜಿ. ಬಳಗದ ಅಧ್ಯಕ್ಷ ಎ.ಎಂ. ಪೂಣಚ್ಚ, ಉಪಾಧ್ಯಕ್ಷ ಪಿ.ಯಸ್. ಸೋಮಯ್ಯ, ಕಾರ್ಯದರ್ಶಿ ಮಿಟ್ಟು ಸೋಮಯ್ಯ, ಸದಸ್ಯರಾದ ಭರತ್ ಕುಮಾರ್, ಬೋಪಯ್ಯ, ನಿತಿನ್, ಗಿರೀಶ್, ಸೋಮಣ್ಣ, ಅನಿಲ್ ತಮ್ಮಯ್ಯ, ಉಮೇಶ್, ಪೆಮ್ಮಯ್ಯ, ಜಿ.ಎ. ನಾಣಯ್ಯ, ದರ್ಶನ್ ದೇವಯ್ಯ, ಪಳಂಗಪ್ಪ, ಮತ್ತಿತರರು ಪಾಲ್ಗೊಂಡಿದ್ದರು.