ಮಡಿಕೇರಿ, ಡಿ. ೧೮: ಕೊಡಗು ಜಿಲ್ಲೆಯಲ್ಲಿ ಕುಟುಂಬದ ಸರ್ವ ಸದಸ್ಯರ ಆಸ್ತಿಯಾಗಿರುವ ಜಮ್ಮಾ ಆಸ್ತಿಗೆ ಸಂಬAಧಿಸಿದAತೆ, ೨೦೦೦-೦೧ ಸಾಲಿನಲ್ಲಿ, ಕೊಡಗು ಜಿಲ್ಲಾಧಿಕಾರಿಗಳ ಆದೇಶವನ್ನು ಆಧರಿಸಿ ಪಟ್ಟೇದಾರರ ಹೆಸರನ್ನು ಆರ್‌ಟಿಸಿಯ ಮೂರನೇ ಕಾಲಂನಿAದ ಒಂಭತ್ತನೇ ಕಾಲಂಗೆ ವರ್ಗಾಯಿಸಿರುವುದರಿಂದ, ಪಟ್ಟೇದಾರರ ವಂಶಸ್ಥರಿಗೆ ಮಾತ್ರ ಇಡೀ ಆಸ್ತಿಯ ಮೇಲೆ ಹಕ್ಕು ಲಭಿಸಿದ್ದು, ಕುಟುಂಬದ ಇತರ ಸದಸ್ಯರು ಅತಂತ್ರರಾಗಿರುವ ಗಂಭೀರ ಸಮಸ್ಯೆ ಕುರಿತು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರು ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರು ನೀಡಿರುವ ವಿವರ ಮಾಹಿತಿ ಇಂತಿದೆ:-

೨೦೦೦ರ ಪೂರ್ವದಲ್ಲಿ, ಕೊಡಗು ಜಿಲ್ಲೆಯಲ್ಲಿ ಪಹಣಿಗೆ ಬದಲಾಗಿ ಜಮಾಬಂದಿ ವಹಿ ಚಾಲ್ತಿಯಲ್ಲಿದ್ದು, ಕುಟುಂಬದ ಹಿರಿಯ ವ್ಯಕ್ತಿಯನ್ನು ಪಟ್ಟೇದಾರರೆಂದು ಕರೆಯಲಾಗುತ್ತಿದೆ. ಸದರಿ ಪಟ್ಟೇದಾರರ ಹೆಸರು ಜಮಾಬಂದಿಯ ೩ನೇ ಕಾಲಂನಲ್ಲಿ ಅದೇ ಕುಟುಂಬದ ಇತರೆ ಹಕ್ಕುದಾರರ ಹೆಸರು ಜಮಾಬಂದಿಯ ೬ನೇ ಕಾಲಂನಲ್ಲಿ ದಾಖಲಾಗುತ್ತಿತ್ತು.

೨೦೦೦ರ ಪೂರ್ವದಲ್ಲಿ ಕೈಬರಹದ ಪಹಣಿಯನ್ನು ಗ್ರಾಮಲೆಕ್ಕಿಗರು ಕೇವಲ ಬೆಳೆ ದಾಖಲು ಮಾಡಲು ಮಾತ್ರ ಉಪಯೋಗಿಸುತ್ತಿದ್ದು, ಅಧಿಕೃತವಾಗಿ ಜಮಾಬಂದಿ ದಾಖಲೆಯನ್ನೇ ಉಳಿದ ಎಲ್ಲಾ ಕಾರ್ಯಗಳಿಗೆ ಅಂದರೆ ಹಕ್ಕು, ದಾಖಲೆಗೆ, ಬ್ಯಾಂಕ್ ಸಾಲ ಇತ್ಯಾದಿ ಸರ್ಕಾರಿ ಕೆಲಸಗಳಿಗೆ ರೈತರು ಬಳಸುತ್ತಿದ್ದರು.

ಪಹಣಿ ಗಣಕೀಕರಣ ಪ್ರಾರಂಭಗೊAಡಾಗ ಕೊಡಗು ಜಿಲ್ಲೆಯಲ್ಲಿ ಕೂಡ ಜಮಾಬಂದಿ ದಾಖಲೆಯನ್ನು ಪಹಣಿಯಾಗಿ ಪರಿವರ್ತಿಸಿ ಗಣಕೀಕರಣ ಪ್ರಾರಂಭಿಸಿದ್ದು, ಜಿಲ್ಲಾಧಿಕಾರಿಯವರ ಆದೇಶ ಸಂಖ್ಯೆ:ಸಿಎAಪಿ/೦೨/೨೦೦೦-೦೧ ದಿನಾಂಕ : ೨೫.೦೧.೨೦೦೨ರಲ್ಲಿ ಕೈಬರಹದ ಪಹಣಿಯನ್ನು ತ್ಯಜಿಸಿ ದಿನಾಂಕ : ೦೧.೦೨.೨೦೦೨ರಿಂದ ಗಣಕೀಕೃತ ಪಹಣಿಯನ್ನು ಜಾರಿಗೊಳಿಸಲಾಗಿರುತ್ತದೆ.

ಕೊಡಗು ಜಿಲ್ಲೆಯಾದ್ಯಂತ ಈ ಹಿಂದೆ ಜಾರಿಯಲ್ಲಿದ್ದಂತಹ ಜಮಾಬಂದಿ ಪದ್ಧತಿಯಿಂದ ಆರ್‌ಟಿಸಿ ತರ್ಜುಮೆಗೊಂಡು ಭೂ ದಾಖಲೆಗಳನ್ನು ಗಣಕೀಕರಿಸುವ ಸಂದರ್ಭದಲ್ಲಿ ಜಮಾಬಂದಿ ೩ನೇ ಕಾಲಂನಲ್ಲಿ ದಾಖಲಿದ್ದ ಕುಟುಂಬದ ಇತರ ಸದಸ್ಯರ ಹೆಸರುಗಳನ್ನು ಜಂಟಿ ಖಾತೆದಾರರನ್ನಾಗಿ ಯಥಾವತ್ತಾಗಿ ದಾಖಲಿಸಲಾಗಿರುತ್ತದೆ. ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮುಂತಾದ ಕುಟುಂಬದ ಅವಿಭಜಿತ ಪಿತ್ರಾರ್ಜಿತ ಸ್ವತ್ತುಗಳಲ್ಲಿ ಹೆಚ್ಚಾಗಿ ನೋಂದಾಯಿತ ಪಾಲುಪಾರಿಕತ್ತು ಆಗದೇ ಇದ್ದು, ಪಾಲುಪಾರಿಕತ್ತು ಹಾಜರುಪಡಿಸಿದ್ದಲ್ಲಿ ಮ್ಯೂಟೇಷನ್ ಮೂಲಕ ಭೂ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳಿಗೆ ಅವಕಾಶವಿರುತ್ತದೆ.

ಪಾಲುಪಾರಿಕತ್ತು ಹಾಜರುಪಡಿಸಿದಲ್ಲಿ ಮ್ಯೂಟೇಶನ್ ನಡಾವಳಿ ನಡೆಸಿ ಪಹಣಿ ದಾಖಲಿಸಿ, ಹಕ್ಕು ಬದಲಾವಣೆ ಮಾಡಲಾಗುತ್ತಿದೆ.

ಪಾಲುಪಾರಿಕತ್ತು ಹಾಜರುಪಡಿಸಿದ ತರುವಾಯ ಹಕ್ಕು, ಬದಲಾವಣೆಗೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ.