ಕೋವರ್ ಕೊಲ್ಲಿ ಇಂದ್ರೇಶ್

ಕೊಚಿನ್, ಡಿ. ೧೮: ಅರೇಬಿಕಾ ಕಾಫಿಗೆ ದಾಖಲೆ ಬೆಲೆ ಬಂದ ಬೆನ್ನಲ್ಲೇ ಕರಿ ಮೆಣಸಿನ ದರವೂ ಏರಿಕೆ ದಾಖಲಿಸಿ ಬೆಳೆಗಾರರಿಗೆ ಕೊಂಚ ಸಂತಸ ತಂದಿತ್ತು. ೬ ತಿಂಗಳ ಹಿಂದೆ ೩೨೦-೩೩೦ರ ಆಸು ಪಾಸಿನಲ್ಲಿದ್ದ ಕರಿಮೆಣಸಿನ ದರ ಕಳೆದ ತಿಂಗಳಿನಲ್ಲಿ ೫೫೦ ರೂಪಾಯಿಗಳಿಗೆ ಏರಿಕೆ ದಾಖಲಿಸಿ ಇದೀಗ ಇಳಿಮುಖವಾಗುತ್ತಿದೆ.

ಶುಕ್ರವಾರ ಕೊಚಿನ್ ಮಾರುಕಟ್ಟೆ ಯಲ್ಲಿ ೫೧೦ ರೂಪಾಯಿಗಳಿಗೆ ಕುಸಿಯಿತು. ಮಾರುಕಟ್ಟೆ ಮೂಲಗಳ ಪ್ರಕಾರ ಶ್ರೀಲಂಕಾದಿAದ ಆಮದು ಹೆಚ್ಚಳಗೊಂಡಿದ್ದೇ ದೇಶೀ ಮಾರುಕಟ್ಟೆಯಲ್ಲಿ ಕರಿಮೆಣಸಿನ ದರ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಆಸಿಯಾನ್ ರಾಷ್ಟçಗಳಲ್ಲಿ ಒಂದಾದ ನಮ್ಮ ನೆರೆಯ ಶ್ರೀಲಂಕಾ ದೇಶವು ಸೌತ್ ಏಷಿಯನ್ ಫ್ರೀ ಟ್ರೇಡ್ ಅಗ್ರಿಮೆಂಟ್ (SಂಈಖಿA) ಅಡಿಯಲ್ಲಿ ಬರುವುದರಿಂದ ಶ್ರೀಲಂಕಾದಿAದ ಆಮದು ಮಾಡಿಕೊಳ್ಳಲಾಗುವ ಮೆಣಸಿನ ಮೇಲೆ ಶೇಕಡಾ ೮ ರಷ್ಟು ಆಮದು ತೆರಿಗೆ ವಿಧಿಸಲಾಗುತ್ತಿದೆ. ಜತೆಗೆ ಶೇ. ೨ ರಷ್ಟು ಸೋಷಿಯಲ್ ವೆಲ್‌ಫೇರ್ ಸೆಸ್ ವಿಧಿಸಲಾಗುತ್ತಿದೆ. ಶ್ರೀಲಂಕಾದಲ್ಲಿ ಕಾಳುಮೆಣಸಿನ ದರ ಕೆ.ಜಿ.ಗೆ ಈಗ ೫೦೦ ರೂಪಾಯಿ ಇದ್ದು, ಶೇ. ೮ರ ಆಮದು ತೆರಿಗೆಯ ಪ್ರಕಾರ ೪೦ ರೂಪಾಯಿ, ಶೇ. ೨ ರಷ್ಟು ಸಾಮಾಜಿಕ ಕಲ್ಯಾಣ ಸೆಸ್ ಎಂದು ರೂ. ೧೦ ಮತ್ತು ಸಾಗಾಟ ವೆಚ್ಚವಾಗಿ ರೂ. ೧೦ನ್ನು ಸೇರಿಸಿದರೆ ಕೆ.ಜಿ.ಯೊಂದಕ್ಕೆ ೫೬೦ ರೂಪಾಯಿಗಳಾಗುತ್ತವೆ.

ಕೇಂದ್ರ ವಾಣಿಜ್ಯ ಇಲಾಖೆ ಮೂಲಗಳ ಪ್ರಕಾರ ಕಳೆದ ನವೆಂಬರ್ ೨೦೨೧ಕ್ಕೆ ದಕ್ಷಿಣ ಏಷ್ಯಾದ ಮುಕ್ತ ವ್ಯಾಪಾರ ಒಪ್ಪಂದ (SಂಈಖಿA) ಅಡಿಯಲ್ಲಿ ದೇಶೀಯ ಬಳಕೆಗಾಗಿ ಕರಿಮೆಣಸು ಆಮದು ೧,೮೧೪ ಟನ್‌ಗಳ ದಾಖಲೆಯ ಏರಿಕೆ ದಾಖಲಿಸಿದೆ. ನವೆಂಬರ್ ೨೦೨೦ರಲ್ಲಿ ೪೫೪ ಟನ್‌ಗಳಷ್ಟಿದ್ದರೆ ೨೦೧೯ರ ನವೆಂಬರ್‌ನಲ್ಲಿ ೨೩೦ ಟನ್‌ಗಳಷ್ಟಿತ್ತು. ಇದು ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ದಾಖಲೆಯಾಗಿದೆ.

(ಮೊದಲ ಪುಟದಿಂದ) ೨೦೨೧ರ ಜನವರಿ-ನವೆಂಬರ್ ಅವಧಿಯಲ್ಲಿ ಶ್ರೀಲಂಕಾದಿAದ ಕರಿಮೆಣಸಿನ ಒಟ್ಟು ಆಮದು ೮,೯೬೧ ಟನ್‌ಗಳಷ್ಟಿತ್ತು. ೨೦೨೦ರ ಇದೇ ಅವಧಿಯಲ್ಲಿ ಇದು ೪,೦೧೭ ಟನ್‌ಗಳಷ್ಟಿತ್ತು. ೨೦೧೯ರಲ್ಲಿ ಇದೇ ಅವಧಿಯಲ್ಲಿ, ಇದು ೩,೧೪೪ ಟನ್‌ಗಳಷ್ಟಿತ್ತು.

ವಿಯಟ್ನಾಂ ನಂತರ ಭಾರತ ವಿಶ್ವದ ಎರಡನೇ ಅತಿ ದೊಡ್ಡ ಕಾಳುಮೆಣಸಿನ ರಫ್ತು ರಾಷ್ಟçವಾಗಿದೆ. ದೇಶದಲ್ಲಿ ಒಟ್ಟು ವಾರ್ಷಿಕ ೬೬ ಸಾವಿರ ಟನ್‌ಗಳಷ್ಟು ಕಾಳು ಮೆಣಸು ಉತ್ಪಾದನೆ ಆಗುತ್ತಿದ್ದು, ಇದರಲ್ಲಿ ೩೦ ಸಾವಿರ ಟನ್‌ಗಳಷ್ಟು ಉತ್ಪಾದನೆ ಕರ್ನಾಟಕ ರಾಜ್ಯದ್ದಾಗಿದೆ. ಕೇರಳದಲ್ಲಿ ವಾರ್ಷಿಕ ೨೮ ಸಾವಿರ ಟನ್ ಉತ್ಪಾದನೆ ಆಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಶನಿವಾರ ಕಾಳುಮೆಣಸಿನ ಖರೀದಿ ದರ ಕಿಲೋಗೆ ೪೮೦-೪೯೦ ಆಗಿದ್ದರೆ, ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳು ಮೆಣಸಿನ ದರ ೫೦೦ ರಿಂದ ೫೧೦ ರೂಪಾಯಿಗಳವರೆಗೆ ಇತ್ತು. ರೊಬಸ್ಟಾ ಕಾಫಿಯ ದರ ಕುಸಿತದ ನಡುವೆ ಕಾಳುಮೆಣಸಿನ ದರ ಏರಿಕೆ ಬೆಳೆಗಾರರಿಗೆ ಒಂದಷ್ಟು ಚೇತೋಹಾರಿ ಆಗಿದ್ದರೂ ಮತ್ತೆ ದರ ಕುಸಿತದ ಭೀತಿ ಎದುರಾಗಿರುವುದು ಆತಂಕ ಮೂಡಿಸಿದೆ.