ಮಡಿಕೇರಿ, ಡಿ. ೧೮ : ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮೈಸೂರಿನ ಮಂಜುಶ್ರೀ ಮ್ಯಾಜಿಕ್ ಸ್ಟೆಪ್ಸ್ ನೃತ್ಯ ಸಂಸ್ಥೆ ವತಿಯಿಂದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಒಟ್ಟು ೪೧೮ ತಂಡಗಳು ಭಾಗವಹಿಸಿದ್ದು, ಈ ಪೈಕಿ ಕಿಂಗ್ಸ್ನ ಕಲಾವಿದರು ಪ್ರದರ್ಶಿಸಿದ ತೈಯ್ಯಂ ಕಲಾ ಪ್ರಾಕಾರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಸಂಸ್ಥೆಯ ನೃತ್ಯ ಸಂಯೋಜಕ ಮಹೇಶ್ ಮಾರ್ಗದರ್ಶನದಲ್ಲಿ ಕಲಾವಿದರು ಗಳಾದ ತೋರೇರ ಇಂಚರ, ಗ್ರೀಷ್ಮ, ಕುಡೆಕಲ್ ನಿಹಾಲ್, ನಾಪಂಡ ನಿಶಾ ಪೂವಮ್ಮ, ತೆಕ್ಕಡ ಪ್ರಣಿತ್ ಪೂವಮ್ಮ, ಪೋಶಿತಾ, ಡಯಾನ ಹೆಚ್, ಅನುಕ್ತ, ದಿಯಾ, ತುಷಾರ, ಮೋಕ್ಷ ವಿ.ಎಲ್., ಮೌನ, ಜೀವಿತ, ರೋಹನ್, ಶಿಶಿರ್, ದಿಲನ್ ಆರ್., ಸಮರ್ಥ್ ರೈ, ಪ್ರಜ್ವಲ್ ಕ್ರಾಸ್ತಾ, ಶಶಾಂಕ್, ದಿಲನ್ ಎ.ಜೆ., ಸುಪ್ರಿತ್, ವಿವೇಕ್ ಎಂ.ವಿ., ದಿಲನ್ ಹೆಚ್.ಆರ್., ಅಭಿ ಪ್ರದರ್ಶನ ನೀಡಿದರು. ಇದರೊಂದಿಗೆ ಸಂಸ್ಥೆಯ ಕಲಾವಿದೆ ಜೀವಿತಾ ಸೋಲೋ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.