ಪಾಲಿಬೆಟ್ಟ, ಡಿ. ೧೬: ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರವನ್ನು ಜಿಲ್ಲಾಡಳಿತ ಕೋವಿಡ್ ಕಾಳಜಿ ಕೇಂದ್ರವಾಗಿ ಪರಿವರ್ತಿಸಿದ ಹಿನ್ನೆಲೆ ಪಾಲಿಬೆಟ್ಟ ವ್ಯಾಪ್ತಿಯ ನಾಗರಿಕರು ಚಿಕಿತ್ಸೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಹುಂಡಿ, ಗದ್ದೆಮನೆ ಸೇರಿದಂತೆ ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ಈ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಸ್ಥಳೀಯ ಕಾಫಿ ತೋಟ ಒಳಗೊಂಡAತೆ ನೂರಾರು ಎಕರೆ ಕಾಫಿ ತೋಟಗಳು ಈ ಭಾಗದಲ್ಲಿದ್ದು ಸಾವಿರಕ್ಕೂ ಹೆಚ್ಚು ಮಂದಿ ತೋಟ ಕಾರ್ಮಿಕರು, ಶಾಲಾ ಮಕ್ಕಳು, ವಯಸ್ಕರುಗಳು ತಮ್ಮ ಆರೋಗ್ಯ ತೊಂದರೆಗಳಿಗೆ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಆಗಮಿಸುತ್ತಾರೆ.

ಆದರೆ, ಜಿಲ್ಲಾಡಳಿತ ಇಲ್ಲಿನ ನಾಗರಿಕರಿಗೆ ಚಿಕಿತ್ಸೆಗಾಗಿ ಪರ್ಯಾಯ ವ್ಯವಸ್ಥೆ ಮಾಡದೇ ಕೋವಿಡ್ ಕಾಳಜಿ ಕೇಂದ್ರವಾಗಿ ಮಾಡಿರುವುದು ಈ ಭಾಗದ ನಾಗರಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ಆರೋಗ್ಯದ ಸಣ್ಣ ತೊಂದರೆಗಳಿಗೂ ದೂರದ ಗೋಣಿಕೊಪ್ಪ ಅಥವಾ ಸಿದ್ದಾಪುರ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯತೆ ಎದುರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಕೂಡ ಹೆಚ್ಚಾಗಿದ್ದು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ಹಗಲು ಸಂಚಾರಕ್ಕೆ ತೊಂದರೆ ಇದ್ದು, ರಾತ್ರಿ ಸಮಯಗಳಲ್ಲಿ ಆರೋಗ್ಯ ಸಮಸ್ಯೆಯಾದರೆ ದೂರದ ಊರುಗಳಿಗೆ ಚಿಕಿತ್ಸೆಗೆ ತೆರಳವುದು ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಉತ್ತಮ ವೈದ್ಯರುಗಳು ಇಲ್ಲಿದ್ದು ಕಾರ್ಮಿಕರಿಗೆ ಚಿಕಿತ್ಸೆಗೆ ಪ್ರಯೋಜನ ವಾಗುತ್ತಿತ್ತು. ಹಲವು ಶಸ್ತçಚಿಕಿತ್ಸೆಗಳು, ದಂತಕ್ಕೆ ಸಂಬAಧಪಟ್ಟ ಚಿಕಿತ್ಸೆಗಳು, ಪ್ರಸೂತಿ ತಜ್ಞರ ಚಿಕಿತ್ಸೆಗಳು ಕೂಡ ಇಲ್ಲಿ ಉತ್ತ ಮವಾಗಿ ನಡೆಯುತ್ತಿತ್ತು. ಪಾಲಿಬೆಟ್ಟ ಅಲ್ಲದೆ ಹೊರಭಾಗದಿಂದ ಎಷ್ಟೋ ರೋಗಿಗಳು ಪಾಲಿಬೆಟ್ಟ ಸರಕಾರಿ ಆಸ್ಪತ್ರೆ ಯಲ್ಲಿ ಶಸ್ತçಚಿಕಿತ್ಸೆಯನ್ನು ಮಾಡಿಕೊಂಡಿರುತ್ತಾರೆ. ಡಾ. ಲೋಹಿತ್, ಡಾ. ಜಗದೀಶ್, ಡಾ. ರಾಕೇಶ್, ಡಾ. ಅಜಿತ್ ಇವರುಗಳು ಉತ್ತಮ ಸೇವೆ ಯನ್ನು ರೋಗಿಗಳಿಗೆ ನೀಡುತ್ತಿದ್ದರು. ಕೋವಿಡ್ ಕಾಳಜಿ ಕೇಂದ್ರವಾಗಿ ಪರಿವರ್ತಿಸಿದ ನಂತರ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಗೆ ಪರಿಶೀಲನೆ ಮಾಡುವ ವ್ಯವಸ್ಥೆಯೂ ಕೂಡ ಇರುವುದಿಲ್ಲ. ಪಾಲಿಬೆಟ್ಟದಲ್ಲಿ ಯಾವುದೇ ಕೋವಿಡ್ ರೋಗಿಗಳೂ ಇರುವುದಿಲ್ಲ. ಹೆಸರಿಗೆ ಮಾತ್ರ ಕಾಳಜಿ ಕೇಂದ್ರವಾಗಿ ಪರಿವರ್ತನೆ ಮಾಡಿ ಸ್ಥಳೀಯ ಹಾಗೂ ಸುತ್ತುಮುತ್ತಲಿನ ಇತರ ರೋಗಿಗಳಿಗೆ ತೊಂದರೆ ಯಾಗಿದೆ. ಕೂಡಲೇ ಕೋವಿಡ್ ಕಾಳಜಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಇಲ್ಲ ಸಾರ್ವಜನಿಕರ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- ಪುತ್ತಂ ಪ್ರದೀಪ್