ಅಂರ‍್ರಾಷ್ಟಿçÃಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಯ್ಕೆ

ನವದೆಹಲಿ, ಡಿ. ೧೬: ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅಂರ‍್ರಾಷ್ಟಿçÃಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ನ್ಯಾಯಮೂರ್ತಿ ದಲ್ವೀರ್ ಸಿಂಗ್ ಅವರು ೧೯೩ ಮತಗಳಲ್ಲಿ ೧೮೩ ಮತಗಳನ್ನು ಪಡೆದರು (ಪ್ರತಿ ದೇಶದಿಂದ ಒಬ್ಬರು ಪ್ರತಿನಿಧಿಸುತ್ತಾರೆ) ಮತ್ತು ಬ್ರಿಟನ್‌ನ ನ್ಯಾಯಮೂರ್ತಿ ಕ್ರಿಸ್ಟೋಫರ್ ಗ್ರೀನ್‌ವುಡ್ ಅವರನ್ನು ಸೋಲಿಸಿ ಬ್ರಿಟನ್‌ನ ಈ ಹುದ್ದೆಯ ಮೇಲಿನ ೭೧ ವರ್ಷಗಳ ಏಕಸ್ವಾಮ್ಯವನ್ನು ಮುರಿದಿದ್ದಾರೆ. ೧೧ ಸುತ್ತಿನ ಮತದಾನದಲ್ಲಿ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಸಾಮಾನ್ಯ ಸಭೆಯಲ್ಲಿ ೧೯೩ ಮತಗಳಲ್ಲಿ ೧೮೩ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ೧೫ ಸದಸ್ಯರಲ್ಲಿ ೧೫ ಮತಗಳನ್ನು ಪಡೆದರು. ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ೯ ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿರುತ್ತಾರೆ.

ತುಳು ಭಾಷೆ ೮ನೇ ಪರಿಚ್ಛೇದಕ್ಕೆ ಸೇರಿಸುವ ಯೋಜನೆ ಇಲ್ಲ

ನವದೆಹಲಿ, ಡಿ. ೧೬: ತುಳು ಭಾಷೆಯನ್ನು ಭಾರತೀಯ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಸಲುವಾಗಿ ಜೈ ತುಳುನಾಡು ಸಂಘಟನೆ ಸೇರಿದಂತೆ ಜಗತ್ತಿನಾದ್ಯಂತ ಇರುವ ತುಳುನಾಡಿಗರ ಹೋರಾಟಕ್ಕೆ ಕೇಂದ್ರ ಸರಕಾರ ತಣ್ಣೀರೆರಚಿದೆ. ತುಳು ಭಾಷೆಯನ್ನು ಭಾರತೀಯ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರಕಾರ ಒತ್ತಿ ಹೇಳಿದೆ. ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲೋಕಸಭೆ ಸಂಸದ ರಾಜಮೋಹನ್ ಉನ್ನಿತಾನ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಸದ್ಯದಲ್ಲಿಯೇ ಯಾವುದೇ ಸೇರ್ಪಡೆಯ ಯೋಜನೆಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜಮೋಹನ್ ಉನ್ನಿತ್ತಾನ್ ಅವರು ತುಳು ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಸರಕಾರದ ನಿಲುವನ್ನು ಕೇಳಿದ್ದರು. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಡಾ. ಸೀತಾಕಾಂತ್ ಮೊಹಾಪಾತ್ರ ಸಮಿತಿಯು ೮ನೇ ಪರಿಚ್ಛೇದದಲ್ಲಿರುವ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಗಳಾಗಿ ಗುರುತಿಸುವ ಬಗ್ಗೆ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ಶಿಫಾರಸು ಮಾಡಿತ್ತು. ಪ್ರಸ್ತುತ, ಅಧಿಕೃತ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಪ್ರಾಯೋಗಿಕ ಅಥವಾ ಆಡಳಿತಾತ್ಮಕವಾಗಿ ಕಾರ್ಯಸಾಧ್ಯವಲ್ಲ ಎಂದು ಹೇಳಿಕೆ ನೀಡಿದ್ದಾರೆ. ತುಳು ಭಾಷೆಯನ್ನು ಭಾರತೀಯ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತಾಗಿ ಈ ಮೊದಲೇ ತುಳುನಾಡಿಗರ ಕೂಗು ಎದ್ದಿತ್ತು. ಹಲವಾರು ಬಾರಿ ಇದೇ ವಿಚಾರವಾಗಿ ಜೈ ತುಳುನಾಡ್ ಸಂಘಟನೆಯ ಮುಂದಾಳತ್ವದಲ್ಲಿ ಟ್ವಿಟರ್ ಕ್ಯಾಂಪೇನ್ ಕೂಡ ನಡೆಸಲಾಗಿತ್ತು. ಇದರ ಬೆನ್ನಲ್ಲೇ ನಾವೂ ಕೂಡ ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ರಾಜಕಾರಣಿಗಳೂ ಕೂಡ ಧ್ವನಿಗೂಡಿಸಿದ್ದರು. ಅವರ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ತುಳು ಭಾಷೆಗೆ ಸ್ಥಾನಮಾನ ಸಿಕ್ಕಿರಲಿಲ್ಲ. ಇದೀಗ ಕೇಂದ್ರ ಸರಕಾರವೇ ಯೋಜನೆಯೇ ಇಲ್ಲವೆಂದು ಹಿಂದೆ ಸರಿದಿರುವುದು ತುಳುನಾಡಿಗರಿಗೆ ಭಾರೀ ನಿರಾಸೆಯಾಗಿದೆ.

ಮಹಾರಾಷ್ಟçದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ; ವಿಧಾನಸಭೆಯಲ್ಲಿ ಖಂಡನಾ ನಿರ್ಣಯ

ಬೆಳಗಾವಿ, ಡಿ. ೧೬: ಮಹಾರಾಷ್ಟçದಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಪ್ರಕರಣಕ್ಕೆ ಸಂಬAಧಿಸಿದAತೆ ಬೆಳಗಾವಿ ವಿಧಾನಸಭೆಯಲ್ಲಿ ಖಂಡನಾ ನಿರ್ಣಯದ ನಿರ್ಧಾರ ಕೈಗೊಳ್ಳಲಾಯಿತು. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸಭೆ ಸೇರಿದಾಗ ಎಂಇಎಸ್ ನಾಯಕರಿಗೆ ಬೆಳಗಾವಿಯಲ್ಲಿ ಕಪ್ಪು ಮಸಿ ಬಳಿದರು ಎಂದು ಮಹಾರಾಷ್ಟçದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಮತ್ತೆ ವಿಷಯ ಪ್ರಸ್ತಾಪಿಸಿದರು. ಬೆಳಗಾವಿಯಲ್ಲಿ ಎಂಇಎಸ್ ಮುಖಂಡರಿಗೆ ಮಸಿ ಬಳಿದ ಕನ್ನಡಾಭಿಮಾನಿಗೆ ಶಿಕ್ಷೆ ವಿಧಿಸಿ ಜೈಲಿಗೆ ಅಟ್ಟಲಾಗಿದೆ. ಆದರೆ, ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟವರನ್ನು ಮಹಾರಾಷ್ಟç ಸರ್ಕಾರ ಶಿಕ್ಷೆ ನೀಡಿದ್ಯಾ ಎಂದು ಪ್ರಶ್ನೆ ಮಾಡಿದರು. ಧ್ವಜ ಸುಟ್ಟು ೨ ದಿನಗಳಾದ್ರೂ ಕ್ರಮ ಕೈಗೊಂಡಿಲ್ಲ. ಭಾಷೆಯ ಬಗ್ಗೆ ನಮಗೆ ಎಷ್ಟು ಕಾಳಜಿ ಇದೆ ನೋಡಿ ಎಂದ ಅವರು, ಕರ್ನಾಟಕಕ್ಕೆ ಅಪಮಾನವಾಗಿದೆ. ಕನ್ನಡಿಗರು ಶಕ್ತಿಹೀನರಲ್ಲ ಎಂದು ಆಕ್ರೋಶ ಹೊರ ಹಾಕಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಅನ್ನದಾನಿ ಪ್ರಮುಖ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಭಾಷಾವಾರು ಪ್ರಾಂತ್ಯ ಮಾಡಿಕೊಂಡು ನಾವೆಲ್ಲ ಭಾರತೀಯರಾಗಿದ್ದೇವೆ. ೧೯೫೬ರಿಂದ ಕನ್ನಡ ಬಾವುಟದೊಂದಿಗೆ ನಾವು ಭಾವನಾತ್ಮಕ ಸಂಬAಧ ಹೊಂದಿದ್ದೇವೆ. ಮಹಾರಾಷ್ಟç ಪುಂಡರು ಕನ್ನಡ ಧ್ವಜವನ್ನು ಸುಟ್ಟಿರುವುದು ಅಕ್ಷರಶಃ ಖಂಡನೀಯವಾಗಿದೆ. ಘಟನೆಯನ್ನು ಖಂಡಿಸಿ ಖಂಡನಾ ನಿರ್ಣಯ ಕೈಗೊಳ್ಳಬೇಕು. ಹಾಗೂ ಮಹಾರಾಷ್ಟç ಮತ್ತು ಕೇಂದ್ರ ಸರ್ಕಾರಕ್ಕೆ ಖಂಡನಾ ನಿರ್ಣಯವನ್ನು ಕಳಿಸೋಣ ಎಂದು ತಿಳಿಸಿದರು. ಸರ್ಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ್, ಮಹಾರಾಷ್ಟçದಲ್ಲಿ ಕನ್ನಡ ಬಾವುಟ ಸುಟ್ಟಿದ್ದು ನಮಗೆ ನೋವು ತಂದಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ಸರ್ಕಾರ ಇದ್ದರೂ ಎದ್ದು ನಿಲ್ಲುತ್ತದೆ. ಶಿವಸೇನೆ, ಎಂಇಎಸ್ ಪದೇ ಪದೇ ಈ ವಿಚಾರ ಇಟ್ಟುಕೊಂಡು ಗಡಿಭಾಗದಲ್ಲಿ ಪುಂಡಾಟ ನಡೆಸುತ್ತಿದೆ. ನಮ್ಮಲ್ಲಿ ಆಗಿದ್ದರೆ ಈ ಘಟನೆಯ ಬಗ್ಗೆ ಆರೋಪಿಗಳಿಗ ತಕ್ಷಣ ಶಿಕ್ಷೆ ವಿಧಿಸುತ್ತಿದ್ದೆವು. ಮಹಾರಾಷ್ಟçದಲ್ಲಾಗಿರುವುದರಿಂದ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಂಡು, ಮಹಾರಾಷ್ಟç ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ. ಮುಂದೆ ಈ ರೀತಿ ನಡೆಯದಂತೆ ಹಾಗೂ ಘಟನೆಗೆ ಕಾರಣದವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಾರಾಷ್ಟç ಸರ್ಕಾರಕ್ಕೆ ಸೂಚಿಸಲಾಗುವುದು ಅಶೋಕ್ ತಿಳಿಸಿದರು.

ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಳಗಾವಿ, ಡಿ. ೧೬: ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಗುರುವಾರ ಟ್ರ‍್ಯಾಕ್ಟರ್‌ನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅನೇಕ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಶೇ. ೪೦ ರಷ್ಟು ಕಮಿಷನ್ ಅನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಅನ್ನೋವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರ ಸಂಘದಿAದ ಪ್ರಧಾನಿಗೆ ಬರೆದ ಪತ್ರ ಬಿಡುಗಡೆಯಾಗಿದೆ. ಈ ಬಗ್ಗೆ ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿ. ಇದರಿಂದ ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ, ಕಾಂಗ್ರೆಸ್ ಅವಧಿಯಲ್ಲಿ ೧೦ ಪರ್ಸೆಂಟ್ ಲಂಚದ ಬಗ್ಗೆ ಈ ಹಿಂದೆ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ನಮ್ಮ ಸರ್ಕಾರದಲ್ಲಿ ೧೦ ಪರ್ಸೆಂಟ್ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದ ೪೦ ಪರ್ಸೆಂಟ್ ಕಮಿಷನ್ ಸೇರಿಸಿ ತನಿಖೆ ಮಾಡಲಿ ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ದುರಾಡಳಿತ ಹೆಚ್ಚಾಗಿದೆ. ಪ್ರವಾಹದಿಂದಾಗಿ ನಷ್ಟ ಅನುಭವಿಸಿದರೂ ೨೦೨೧ರ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಕೊರೊನಾದಿಂದ ಮಡಿದವರಿಗೆ, ಪ್ರವಾಹದಲ್ಲಿ ಮನೆ ಕೆಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಈ ಬಾರಿ ರಾಜ್ಯದ ೨೩ ಜಿಲ್ಲೆಗಳಲ್ಲಿ ೩ ಬಾರಿ ಪ್ರವಾಹ ಬಂದಿದೆ. ೧೨ ಲಕ್ಷ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಬೆಳೆ ಹಾನಿಗೆ ಸಂಬAಧಿಸಿದAತೆ ಮೂರು ಪಟ್ಟು ಪರಿಹಾರ ಕೊಡಿ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಶೌರ್ಯ ಪ್ರಶಸ್ತಿ ಮೊತ್ತ ೫ ಪಟ್ಟು ಹೆಚ್ಚಳ: ಸಿಎಂ ಘೋಷಣೆ

ಬೆಳಗಾವಿ, ಡಿ. ೧೬: ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ೫ ಪಟ್ಟು ಹೆಚ್ಚಿಸಿ ಬೆಳಗಾವಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ನಗದು ಅನುದಾನದ ಮೊತ್ತದ ಬಗ್ಗೆ ಪರಿಷ್ಕರಣೆ ನಡೆಸಿದ ಸರ್ಕಾರ ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನ ವನ್ನು ಇದೀಗ ಐದು ಪಟ್ಟು ಹೆಚ್ಚಿಸಿದೆ. ಪರಮವೀರ ಚಕ್ರ ರೂ. ೨೫ ಲಕ್ಷದಿಂದ ರೂ.೧.೫ ಕೋಟಿಗೆ ಹೆಚ್ಚಳ ಮಾಡಲಾಗಿದೆ. ಮಹಾವೀರ ಚಕ್ರ ೧೨ ಲಕ್ಷದಿಂದ ೧ ಕೋಟಿ ರೂಪಾಯಿ, ಅಶೋಕ ಚಕ್ರ ೨೫ ಲಕ್ಷದಿಂದ ೧.೫ ಕೋಟಿ ರೂಪಾಯಿ, ಕೀರ್ತಿ ಚಕ್ರ ೧೨ ಲಕ್ಷದಿಂದ ೧ ಕೋಟಿ ರೂಪಾಯಿ, ವೀರ ಚಕ್ರ ೮ ಲಕ್ಷದಿಂದ ೫೦ ಲಕ್ಷ ರೂಪಾಯಿ, ಶೌರ್ಯ ಚಕ್ರ ೮ ಲಕ್ಷದಿಂದ ೫೦ ಲಕ್ಷ ರೂಪಾಯಿ, ಸೇನಾ ಮೆಡಲ್ ೨ ಲಕ್ಷದಿಂದ ೧೫ ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಸಿಎಂ ಆದೇಶಿದ್ದಾರೆ. ಪ್ರಶಸ್ತಿ ವಿಜೇತರಿಗೆ ಸುಮಾರು ಐದು ಪಟ್ಟು ಅನುದಾನವನ್ನು ಹೆಚ್ವಿಸಲಾಗಿದೆ. ಅವರ ಬಹಳ ವರ್ಷಗಳ ಬೇಡಿಕೆ ಯನ್ನು ಈಡೇರಿಸಿ ಆದೇಶವನ್ನು ಹೊರಡಿಸಿದೆ. ಇದು ಸೇನೆಗೆ ನಾವು ಸಲ್ಲಿಸುವ ಗೌರವ. ನಿವೃತ್ತರಾದ ಮೇಲೆ ಉತ್ತಮ ಜೀವನ ನಡೆಸಲು ಹಾಗೂ ಸಾವನ್ನಪ್ಪಿದಾಗ ಸಹಾಯ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.