ಮಡಿಕೇರಿ, ಡಿ. ೧೭: ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಸಮುದಾಯಕ್ಕೆ ಸೇರಿದ ಎಲ್ಲರೂ ತಮ್ಮ ಮಾತೃಭಾಷೆ ಮಾತನಾಡುತ್ತಾ; ಭಾಷೆ ಉಳಿಸುವದರೊಂದಿಗೆ ಸಂಸ್ಕೃತಿ - ಪದ್ಧತಿಯನ್ನು ಬೆಳೆಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಪತ್ರಕರ್ತ ಕುಡೆಕಲ್ ಸಂತೋಷ್ ಕರೆ ನೀಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಐಗೂರು ಅರೆಭಾಷೆ ಗೌಡ ಸಮಾಜದ ಆಶ್ರಯದಲ್ಲಿ ಐಗೂರು ಗೌಡ ಸಮಾಜದಲ್ಲಿ ನಡೆದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಅರೆಭಾಷೆಗೆ ಶತಮಾನಗಳ ಇತಿಹಾಸವಿದೆ. ಭಾಷೆ ಯೊಂದಿಗೆ ಸಂಸ್ಕೃತಿಯೂ ಬೆಳೆದು ಬಂದಿದ್ದು, ಭಾಷೆ ನಾಶವಾದಲ್ಲಿ ಸಂಸ್ಕೃತಿಯೊAದಿಗೆ ಜನಾಂಗವೇ ನಾಶವಾಗಲಿದೆ. ಎಲ್ಲರೂ ನಮ್ಮ ಭಾಷೆಯಲ್ಲಿ ಮಾತಾಡುವದರೊಂದಿಗೆ ಭಾಷೆಯನ್ನು ಉಳಿಸುತ್ತಾ, ಸಂಸ್ಕೃತಿ, ಪದ್ಧತಿಯನ್ನು ಬೆಳೆಸಬೇಕು.

ಮನೆಯಲ್ಲಿ ಮಕ್ಕಳಿಗೆ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿಹೇಳಿ ಅರಿವು ಮೂಡಿಸಬೇಕೆಂದು ಹೇಳಿದರು.

ಅರೆಭಾಷಿಕ ಸಮುದಾಯದಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗೂ ಪ್ರತಿಯೊಂದು ಹಂತದಲ್ಲೂ ಒಂದೊAದು ಪದ್ಧತಿಗಳಿವೆ. ಪ್ರಸ್ತುತ ಇವುಗಳು ಕಣ್ಮರೆಯಾಗುತ್ತಿದ್ದು, ಪಾಲಿಸುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ಸಂಸ್ಕೃತಿ ಬಗ್ಗೆ ಶಿಬಿರಗಳನ್ನು ಹಮ್ಮಿಕೊಂಡು ತರಬೇತಿ ನೀಡಲಾಗುತ್ತಿದೆ.

ಶಿಬಿರದಲ್ಲಿ ಕಲಿತವರು ನಂತರದಲ್ಲಿ ಮರೆತುಬಿಡದೆ ಪಾಲಿಸಿ ಕೊಂಡು ಮುಂದಿನ ಪೀಳಿಗೆಗೂ ಕಲಿಸಿಕೊಡುವಂತಾಗಬೇಕೆAದು ಸಲಹೆ ನೀಡಿದರು. ನಮ್ಮ ಭಾಷೆ, ಮಾತನಾಡಲು, ಪದ್ಧತಿಗಳನ್ನು ಆಚರಣೆ ಮಾಡುವಲ್ಲಿ ಹಿಂಜರಿಕೆ ಇರಬಾರದು, ಎಲ್ಲಾ ವಿಭಾಗದಲ್ಲೂ ಮುಂದೆ ಬರಬೇಕು, ನಮ್ಮಲ್ಲಿರುವ ತಪ್ಪನ್ನು ಮರೆಮಾಚಿ ಮತ್ತೋರ್ವರತ್ತ ಬೆಟ್ಟು ತೋರಬಾರದೆಂದು ಉದಾಹರಣೆ ಸಹಿತ ವಿವರಿಸಿದರು.

ಅರೆಭಾಷೆ ಅಕಾಡೆಮಿ ಕೇವಲ ಒಂದು ಜನಾಂಗಕ್ಕೆ ಸೇರಿದ್ದಲ್ಲ; ಅರೆಭಾಷೆ - ಸಂಸ್ಕೃತಿ ಬೆಳೆವಣಿಗೆಗೆ ಶ್ರಮಿಸುತ್ತಿರುವ, ಸಾಧನೆ ಮಾಡಿರು ವವರಿಗೂ ಇಲ್ಲಿ ಅವಕಾಶವಿದೆ. ಇದು ಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯದ ಬೆಳವಣಿಗಾಗಿ ಸರಕಾರ ಕೊಡ ಮಾಡಿರುವ ಅಕಾಡೆಮಿಯಾಗಿದೆ. ಅಕಾಡೆಮಿಯ ಕಾರ್ಯ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳುವದರೊಂದಿಗೆ ಸಂಘಟನಾತ್ಮಕವಾಗಿ ಜನಾಂಗದ ಅಭ್ಯುದಯಕ್ಕೆ ಕೈಜೋಡಿಸುವಂತೆ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಗೌಡ ಸಮಾಜದ ಗೌರವ ಅಧ್ಯಕ್ಷ ಪೊನ್ನಚನ ಗಣಪತಿ ಮಾತನಾಡಿ, ಅಕಾಡೆಮಿ ಸ್ಥಾಪನೆಯಾಗಿ ಹತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಅರೆಭಾಷೆ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಇಂತಹ ಗ್ರಾಮೀಣ ಪ್ರದೇಶದಲ್ಲಿ ಆಚರಣೆ ಮಾಡುತ್ತಿರುವದು ಹೆಮ್ಮೆಯ ವಿಚಾರವಾಗಿದೆ. ಅಕಾಡೆಮಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಯೊಂದಿಗೆ ಕೈಜೋಡಿಸಬೇಕು. ನಮ್ಮ ಗ್ರಾಮದಲ್ಲೂ ಸಂಸ್ಕೃತಿಯನ್ನು ಪಸರಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಕಡ್ಲೇರ ಹೊನ್ನಪ್ಪ ಮಾತನಾಡಿ, ನಮ್ಮ ಭಾಷೆ ಮಾತನಾಡಲು ಯಾವದೇ ರೀತಿಯ ಹಿಂಜರಿಕೆ ಇರಬಾರದು. ನಮ್ಮ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರೆಭಾಷಿಕರಿದ್ದು, ಪ್ರತಿಯೋರ್ವರು ಇನ್ನು ಮುಂದಕ್ಕೆ ಅರೆಭಾಷೆಯಲ್ಲಿಯೇ ಮಾತನಾಡ ಬೇಕು; ಆ ಮೂಲಕ ನಮ್ಮ ಸಂಸ್ಕೃತಿ ಯನ್ನು ಎತ್ತಿಹಿಡಿಯಬೇಕೆಂದು ಹೇಳಿದರು. ಅಕಾಡೆಮಿ ಸ್ಥಾಪನೆಯಾದ ಬಳಿಕ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಎಲ್ಲಾ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಶ್ರಮಿಸುತ್ತಾ ಬರುತ್ತಿದ್ದಾರೆ. ನಮ್ಮ ಗ್ರಾಮದಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲು ಅಕಾಡೆಮಿ ಅವಕಾಶ ಕಲ್ಪಿಸಿದ್ದಾರೆ. ಇಂತಹ ಅವಕಾಶವನ್ನು ಸದುಪ ಯೋಗಪಡಿಸಿಕೊಳ್ಳಬೇಕು. ಏನೇ ಸಮಸ್ಯೆ, ಕೆಲಸಗಳಿದ್ದರೂ ಒಂದಿಷ್ಟು ಸಮಯಾವಕಾಶ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಮ್ಮತನವನ್ನು ಎತ್ತಿ ಹಿಡಿಯಲು ಕೈಜೋಡಿಸುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಐಗೂರು ಅರೆಭಾಷೆ ಗೌಡ ಸಮಾಜದ ಉಪಾಧ್ಯಕ್ಷ ಮೂಲೆಮಜಲು ಮನೋಜ್ ಕುಮಾರ್, ಕಾರ್ಯದರ್ಶಿ ತೆಕ್ಕಡೆ ಸಂದೇಶ್, ಖಜಾಂಚಿ ಮೂಲೆಮಜಲು ಜಯಕುಮಾರ್, ನಿರ್ದೇಶಕರುಗಳಾದ ಬಾರನ ರವೀಂದ್ರ, ಕಾಳೇರಮ್ಮನ ರಾಯ್, ನಾರ್ಕೊಡಿ ವಸಂತ, ಕೂಡಕಂಡಿ ಸೋನಿ ಧೀರಜ್, ಕುತ್ಯೇಡಿ ಬಾಲಕೃಷ್ಣ, ಬಾರನ ನೀಲಕುಮಾರ್, ಸಮುದಾಯ ಬಾಂಧವರು ಪಾಲ್ಗೊಂಡಿದ್ದರು. ಚಿಲ್ಲನ ಪವಿತಾ ಪ್ರಸಾದ್ ಪ್ರಾರ್ಥಿಸಿದರೆ, ಕೂಡಕಂಡಿ ಮೀನಾ ಚಂದ್ರಶೇಖರ್ ಸ್ವಾಗತಿಸಿ, ನಂಗಾರು ಗಿರೀಶ್‌ಕುಮಾರ್ ನಿರೂಪಿಸಿದರೆ, ನಂಗಾರು ಕೀರ್ತಿಪ್ರಸಾದ್ ವಂದಿಸಿದರು.