ಸೋಮವಾರಪೇಟೆ,ಡಿ.೧೭: ಉಪ ಚುನಾವಣೆ ಘೋಷಣೆಯಾಗಿರುವ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ೨ ಸ್ಥಾನಗಳಿಗೆ ಸಂಬAಧಿಸಿದAತೆ ಒಟ್ಟು ೫ ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಇಂದು ನಾಲ್ವರು ನಾಮಪತ್ರ ಸಲ್ಲಿಸುವ ಮೂಲಕ ಉಮೇದುವಾರರ ಸಂಖ್ಯೆ ೫ಕ್ಕೇರಿದೆ. ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಎಂ. ದಿವ್ಯ, ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತರಾಗಿ ಹೆಚ್.ಎಸ್. ಮಂಜುಳಾ, ಹಾಗೂ ಕೆ.ಎ. ಸುಕನ್ಯ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.

ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರಕ್ಕೆ ಸಂಬAಧಿಸಿದAತೆ ಬಿಜೆಪಿ ಬೆಂಬಲಿತರಾಗಿ ಟಿ.ಕೆ. ಚಂದ್ರಶೇಖರ್ (ಪ್ರವೀಣ್) ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ವಿ. ಹರೀಶ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.

ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಬಿಜೆಪಿ ಮುಖಂಡರಾದ ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಗ್ರಾ.ಪಂ. ಅಧ್ಯಕ್ಷ ರುದ್ರಪ್ಪ, ಪ್ರಮುಖರಾದ ಡಿ.ಎ. ಪರಮೇಶ್, ಹೆಚ್.ಎನ್. ದಿವಾಕರ್, ಕೆ.ಕೆ. ಸುಧಾಕರ್, ಕೆ.ಸಿ. ಕಿಸಾನ್, ಡಿ.ಡಿ. ಪೊನ್ನಪ್ಪ, ಉಮೇಶ್, ಜಿತೇಂದ್ರ, ದಯಾನಂದ್, ಜೋಯಪ್ಪ, ಕಾಂಗ್ರೆಸ್ ಪ್ರಮುಖರಾದ ಜಗದೀಶ್, ಅಶೋಕ್, ಶಿವರಾಜ್, ಜೆಡಿಎಸ್ ಮುಖಂಡರಾದ ಕೆ.ಟಿ. ಪರಮೇಶ್, ಮೋಹನ್, ಉಮೇಶ್ ಅವರುಗಳು ಉಪಸ್ಥಿತರಿದ್ದರು.

ತಾ.೧೮ರಂದು(ಇAದು) ನಾಮಪತ್ರಗಳ ಪರಿಶೀಲನೆ, ೨೦ ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ, ೨೭ ರಂದು ಮತದಾನ, ಅವಶ್ಯವಿದ್ದಲ್ಲಿ ತಾ. ೨೯ರಂದು ಮರು ಮತದಾನ, ತಾ. ೩೦ರಂದು ಮತ ಎಣಿಕೆ ನಡೆಯಲಿದೆ.