ಕೂಡಿಗೆ, ಡಿ. ೧೭: ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಅಡಿಯಲ್ಲಿ ಎರಡನೇ ಬಾರಿಯ ಕಾಲುಬಾಯಿ ಜ್ವರಕ್ಕೆ ಲಸಿಕೆಯನ್ನು ನೀಡುವ ಅಭಿಯಾನ ಕಾರ್ಯಕ್ರಮವು ಆರಂಭಗೊAಡಿದೆ.

ತಾಲೂಕು ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ವತಿಯಿಂದ ತಾಲೂಕು ಮಟ್ಟದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಕಾಲುಬಾಯಿ ಜ್ವರ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರಕಾರದ ನಿಯಮದಂತೆ ಎರಡನೇ ಹಂತದ ಲಸಿಕೆಯನ್ನು ನೀಡುವ ಮೂಲಕ ರೋಗ ನಿರೋಧಕ ಶಕ್ತಿಯ ಚುಚ್ಚುಮದ್ದು ಅನ್ನು ಹಾಕಲಾಗುತ್ತಿದೆ ಎಂದು ತಾಲೂಕು ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿ ಡಾ. ಬಾದಾಮಿ ತಿಳಿಸಿದ್ದಾರೆ.

ಅವರ ತಂಡ ಸೀಗೆಹೊಸೂರು ಕೂಡಿಗೆ ಕೂಡುಮಂಗಳೂರು ವ್ಯಾಪ್ತಿಯಲ್ಲಿ ಹಸುಗಳಿಗೆ ಲಸಿಕೆ ಹಾಕುವ ಅಭಿಯಾನ ಪ್ರಾರಂಭ ಮಾಡಿದ್ದಾರೆ.