ವೀರಾಜಪೇಟೆ, ಡಿ. ೧೬: ಕರಡ ಮಲೆತಿರಿಕೆ ದೇವಾಲಯಕ್ಕೆ ಸಂಬAಧಪಡುವ ಕರಡ ಭಗವತಿ ದೇವಾಲಯದ ಪುನರ್ ಪ್ರತಿಷ್ಠೆ ದ್ರವ್ಯ ಕಲಶಾದಿಗಳ ಪೂಜಾ ವಿಧಿವಿಧಾನಗಳು ಎರಡು ದಿನಗಳ ಕಾಲ ವಿಜೃಂಭಣೆಯಿAದ ನಡೆಯಿತು.
೨೦೧೭ರಲ್ಲಿ ಭಗವತಿ ದೇವರ ಸಾನ್ನಿಧ್ಯದಲ್ಲಿ ಸುಳ್ಯದ ಶಶಿಕುಮಾರ್ ಹಾಗೂ ನೀಲೇಶ್ವರ ಜಗದೀಶ್ವರ ಅವರುಗಳು ಸ್ವರ್ಣಪ್ರಶ್ನೆ ಇರಿಸಿದಾಗ ಕೇತ್ರದಲ್ಲಿ ಚೈತನ್ಯ ಕ್ಷಯ ಕಾಣಿಸಿರುವುದರಿಂದ ಇಲ್ಲಿರುವ ಶಿವಲಿಂಗವನ್ನು ತಾಂತ್ರಿಕ ವಿಧಿ ಪ್ರಕಾರ ಬದಲಾಯಿಸಿ ಭಗವತಿಯ ರೂಪಬಿಂಬವನ್ನು ಶಿಲ್ಪ ನಿರ್ದೇಶನದ ಪ್ರಕಾರ ಬ್ರಹ್ಮ ಕಲಶವನ್ನು ನೇರವೇರಿಸಲಾಯಿತು.
ಮೂರು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ದಾನಿಗಳಾದ ಪಟ್ರಪಂಡ ಪ್ರೇಮಾ, ನಮಿತಾ ಅವರುಗಳನ್ನು ಸನ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪ, ಕಾರ್ಯದರ್ಶಿ ಐತಿಚಂಡ ಶಂಕರಿ ಚಿಂಗಪ್ಪ ಮಲೆತಿರಿಕೆ ಭಗವತಿ ದೇವಾಲಯ ಅಧ್ಯಕ್ಷ ನಡಿಕೇರಿಯಂಡ ಸೋಮಯ್ಯ, ನಿರ್ದೇಶಕ ಐತಿಚಂಡ ಭೀಮಯ್ಯ ಮತ್ತಿತರರು ಇದ್ದರು.