ನಾಪೋಕ್ಲು: ಸ್ಥಳಿಯ ಮಾಜಿ ಸೈನಿಕರ ಸಂಘದಿAದ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ ೧೨ ಜನರಿಗೆ ಸಂಘದಿAದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ನಗರದ ಮಾರುಕಟ್ಟೆ ಬಳಿಯಲ್ಲಿ ಸಾರ್ವಜನಿಕವಾಗಿ ರಾವತ್ ಅವರ ಭಾವಚಿತ್ರವಿರಿಸಿ ಸೈನಿಕ ಸಂಘದ ಉಪಾಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ ಹೂಮಾಲೆಯನ್ನು ಹಾಕಿ ಗೌರವ ಸೂಚಿಸಿದರು. ನಂತರ ಮಾತನಾಡಿದ ನಾಣಯ್ಯ, ದೇಶ ಕಂಡ ಅಪ್ರತಿಮ ಸೈನಿಕ ರಾವತ್‌ರ ನಿಧನದಿಂದ ದೇಶ ಇಂದು ಬಡವಾಗಿದೆ. ಅವರು ಸೈನಿಕರಿಗೆ ಸ್ಪೂರ್ತಿಯಾಗಿದ್ದರು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅವರು ಮಾತನಾಡಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಕೇಟೋಳಿರ ಅಪ್ಪಚ್ಚ, ಖಜಾಂಚಿ ಕರೀಂ. ಚೊಟ್ಟೆಯಂಡ ರವಿ, ಪುಲ್ಲೆರ ವಿಠಲ ಪಳಂಗಪ್ಪ, ಕಂಬೇಯAಡ ಅಪ್ಪಣ್ಣ, ಕೇಟೋಳಿರ ಗಣಪತಿ ಮತ್ತಿತರರು ಇದ್ದರು.*ಗೋಣಿಕೊಪ್ಪ: ತಿತಿಮತಿ ಗ್ರಾಮದ ರಾಷ್ಟಿçÃಯ ಸ್ವಯಂಸೇವಕ ಸಂಘ ಮತ್ತು ಸೇವಾ ಭಾರತಿ ವತಿಯಿಂದ ಹೆಲಿಕಾಪ್ಟರ್ ಅಪಘಾತದಿಂದ ಮೃತಪಟ್ಟ ಸೇನಾ ದಂಡನಾಯಕ ಹಾಗೂ ಸೇನಾಧಿಕಾರಿಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ತಿತಿಮತಿ ಪಟ್ಟಣದಲ್ಲಿ ಸೇನಾ ದಂಡನಾಯಕ ಹಾಗೂ ಸೇನಾಧಿಕಾರಿಗಳ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಗೂ ಪುಷ್ಪಾರ್ಚನೆಯನ್ನು ಸಲ್ಲಿಸಿ ಸಂತಾಪ ಸೂಚಿಸಲಾಯಿತು.
ಭಾರತವನ್ನು ಕಾಯುವ ಸೇನೆಯ ಬಗ್ಗೆ ಅಗೌರವದಿಂದ ವರ್ತಿಸಿದ ಕಿಡಿಗೇಡಿಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಸಂದೇಶಗಳಿAದ ಸಮಾಜದ ಅಶಾಂತಿಗೆ ಕಾರಣವಾಗುತ್ತಿದೆ ಎಂಬುವುದನ್ನು ಪರಿಗಣಿಸಿ ಅಂತಹ ದೇಶದ್ರೋಹಿ ಕೃತ್ಯವೆಸಗುವವರ ಮೇಲೆ ದೇಶದ್ರೋಹದ ಆರೋಪದ ಮೇಲೆ ಬಂಧಿಸಬೇಕೆAದು ಒತ್ತಾಯಿಸಲಾಯಿತು.
ಈ ಸಂದರ್ಭ ರಾಷ್ಟಿçÃಯ ಸ್ವಯಂಸೇವಕ ಸಂಘದ ಹಿರಿಯರಾದ ಎಂ.ಎನ್. ಕೃಷ್ಣ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಮೃತಪಟ್ಟ ಸೈನಿಕರ ಸೇವೆಯ ಬಗ್ಗೆ ಶ್ಲಾಘಿಸಿದರು. ಅವರ ಕಾರ್ಯವೈಖರಿಯಿಂದ ಭಾರತ ದೇಶ ಸುಭೀಕ್ಷೆಯಾಗಿ ಮತ್ತು ಶಾಂತಿಯುತವಾಗಿ ಇರಲು ಕಾರಣವಾಗಿತ್ತು. ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ಅವರು ದೇಶದ ಸೇನೆಯ ಬಹುದೊಡ್ಡ ಆಸ್ತಿಯಾಗಿದ್ದರು. ಇವರ ಅಕಾಲಿಕ ಮರಣ ದೇಶಕ್ಕೆ ಬಹುದೊಡ್ಡ ನಷ್ಟ ಸಂಭವಿಸಿದೆ ಎಂದು ಹೇಳಿದರು.
ನಿವೃತ್ತ ಸೈನಿಕರಾದ ಬಿ.ಎನ್. ನಂಜಪ್ಪ ವಸಂತ, ಸಿ.ಎಲ್. ಜಾನ್, ಪ್ರಚಾರಕ ಮುಖೇಶ್, ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಚೆಪುö್ಪಡಿರ ಕಾರ್ಯಪ್ಪ, ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಚೆಪುö್ಪಡಿರ ರಾಮಕೃಷ್ಣ, ಉಪಾಧ್ಯಕ್ಷ ಪಾಲೆಂಗಡ ಮನು ನಂಜಪ್ಪ, ತಿತಿಮತಿ ಗ್ರಾ.ಪಂ. ಉಪಾಧ್ಯಕ್ಷ ವಿಜಯ, ಸದಸ್ಯರುಗಳಾದ ಎನ್.ಎನ್. ಅನೂಪ್ ಕುಮಾರ್, ಶಂಕರ, ಸರಸ್ವತಿ, ದೇವರಪುರ ಉಪಾಧ್ಯಕ್ಷ ಮನೆಯಪಂಡ ಮಹೇಶ್, ವಿ.ಎಸ್.ಎಸ್.ಎನ್. ನಿರ್ದೇಶಕರುಗಳಾದ ಗೋವಿಂದ, ಮಂಜುಳ, ಸೇವಾ ಭಾರತಿ ಕಾರ್ಯಕರ್ತರು, ರಾಷ್ಟಿçà ಸ್ವಯಂಸೇವಾ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.ನಾಪೋಕ್ಲು: ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ ಭಾರತೀಯ ಸೇನೆಯ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ಮತ್ತು ಹುತಾತ್ಮರಾದ ಇತರ ಸೇನಾಧಿಕಾರಿಗಳಿಗೆ ನಾಪೋಕ್ಲುವಿನ ಬೇತು ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭ ನಿವೃತ್ತ ಸೇನಾಧಿಕಾರಿ ಕೊಂಡೀರ ನಾಣಯ್ಯ, ಚೋಕಿರ ಮುತ್ತಪ್ಪ, ಕೊಂಡೀರ ನಂದ, ಮಾಚೇಟಿರ ಕುಶು ಕುಶಾಲಪ್ಪ, ಕಾಳೆಯಂಡ ಸಾಬ ತಿಮ್ಮಯ್ಯ, ಚೋಕಿರ ಸುಧಿ ಅಪ್ಪಯ್ಯ, ಕುಂಚೇಟಿರ ಸುಧಿ, ಚೋಕಿರ ರೋಷನ್, ಅನಿಲ್, ಮಿಟ್ಟು, ಸೋಮಯ್ಯ, ಬೊಳ್ಳೇಪಂಡ ಹರೀಶ್ ಮತ್ತಿತರರು ಇದ್ದರು.ಗೋಣಿಕೊಪ್ಪಲು ನ್ಯಾಷನಲ್ ಅಕಾಡೆಮಿ ಶಾಲೆ
ಗೋಣಿಕೊಪ್ಪಲು: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಪಡೆಯ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳಿಗೆ ಗೋಣಿಕೊಪ್ಪಲು ನ್ಯಾಷನಲ್ ಅಕಾಡೆಮಿ ಶಾಲೆಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ನ್ಯಾಷನಲ್ ಅಕಾಡೆಮಿ ಶಾಲೆಯ ಮುಖ್ಯಸ್ಥೆ ಶಾಂತಿ ಅಚ್ಚಪ್ಪ ಅವರು ಹಾಗೂ ಶಾಲೆಯ ಪ್ರಾಂಶುಪಾಲೆ ಗೀತಾ, ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.ಪೊನ್ನಂಪೇಟೆ: ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತದ ರಕ್ಷಣಾ ವಿಭಾಗಗಳ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕ ರಾವತ್ ಸೇರಿದಂತೆ ೧೩ ಮಂದಿ ಯೋಧರಿಗೆ ಪೊನ್ನಂಪೇಟೆ ಶ್ರೀ ನಂದೀಶ್ವರ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪೊನ್ನಂಪೇಟೆಯ ಆಟೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಉಪಾಧ್ಯಕ್ಷ ಚಮ್ಮಟ್ಟಿರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ಚೀರಂಡ ಚಂಗಪ್ಪ, ಖಜಾಂಚಿ ಎಂ.ಆರ್. ನವೀನ್ ಹಾಗೂ ಸಂಘದ ಸದಸ್ಯರು ಹಾಜರಿದ್ದರು.