ಪೊನ್ನಂಪೇಟೆ, ಡಿ. ೧೬: ಕೊಡಗಿನ ಪ್ರಮುಖ ಇಂಜಿನಿಯರಿAಗ್ ಕಾಲೇಜು ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಅನ್ನು ನಡೆಸು ತ್ತಿರುವ ಕೊಡವ ಎಜುಕೇಶನ್ ಸೊಸೈಟಿ (ಕೆಇಎಸ್)ನ ವಾರ್ಷಿಕ ಸಾಮಾನ್ಯ ಸಭೆ (ಎ.ಜಿ.ಎಂ.) ಇತ್ತೀಚೆಗೆ ಮಡಿಕೇರಿಯ ಸರಕಾರಿ ಪ.ಪೂ. ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು. ಕೆಇಎಸ್ ಅಧ್ಯಕ್ಷ ಸಿ.ಪಿ. ಬೆಳ್ಳಿಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಸಿಐಟಿಯು ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗವನ್ನು ದಾನಿಗಳಾದ ಚೋಡುಮಾಡ ಶಾಂತಿ ಪಾರ್ವತಿ ಮತ್ತು ಚೋಮಣಿ ಅಪ್ಯಯ್ಯ ದಂಪತಿಯ ಗೌರವಾರ್ಥ ನಾಮಫಲಕ ವನ್ನು ಅತಿಥಿಗಳಾದ ಬೆಳ್ಳಿಯಪ್ಪ ಮತ್ತು ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಅನಾವರಣಗೊಳಿಸಿದರು.

ದಂಪತಿಯ ಹೆಸರಿನಲ್ಲಿ ನಿರ್ಮಿಸಿರುವ ಇನ್ನೊಂದು ನಾಮ ಫಲಕವನ್ನು ಕೆಇಎಸ್‌ನ ಖಜಾಂಚಿ ಜಾಜಿ ಉತ್ತಪ್ಪ ಹಾಗೂ ಉಪಾಧ್ಯಕ್ಷ ಎಂ.ಟಿ. ನಾಣಯ್ಯ ಅನಾವರಣ ಗೊಳಿಸಿದರು. ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರ್ಮಿಸಿದ ಎಲೆಕ್ಟಿçಕ್- ವೆಹಿಕಲ್ ಇಗಿ-ಕೋಲ್ಟ್ ಅನ್ನು ಕೆಇಎಸ್‌ನ ಉಪಾಧ್ಯಕ್ಷ ಡಾ. ಎಂ.ಸಿ. ಕಾರಿಯಪ್ಪ ಹಾಗೂ ಕೆಇಎಸ್‌ನ ಗೌರವ ಕಾರ್ಯದರ್ಶಿ ರಾಕೇಶ್ ಪೂವಯ್ಯ ಅನಾವರಣ ಗೊಳಿಸಿದರು. ಈ ಸಂದರ್ಭ ಕೆಇಎಸ್‌ನ ಜಂಟಿ ಕಾರ್ಯದರ್ಶಿ ಸಿ. ರಾಜ ನಂಜಪ್ಪ ಉಪಸ್ಥಿತರಿದ್ದರು. ಕೇಂದ್ರ ಕಾರ್ಯಕಾರಿ ಸಮಿತಿಯು ಕೆಇಎಸ್‌ನ ಎಜಿಎಂಗೆ ಮುಂಚಿತವಾಗಿ ನಡೆಯಿತು. ಕೆಇಎಸ್‌ನ ನಿರ್ದೇಶಕರು, ಸದಸ್ಯರು, ಸಿಐಟಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮತ್ತು ಸಿಐಪಿಯುಸಿ ಪ್ರಾಂಶುಪಾಲ ಡಾ. ರೋಹಿಣಿ ತಿಮ್ಮಯ್ಯ ಭಾಗವಹಿಸಿದ್ದರು.