ಸೋಮವಾರಪೇಟೆ, ಡಿ. ೧೫: ಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ, ಪ್ರಸ್ತುತ ಮುಳ್ಳುಸೋಗೆಯಲ್ಲಿ ನೆಲೆಸಿದ್ದ ನಂಗಾರು ಪುನೀತ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮಹದೇಶ್ವರ ಬ್ಲಾಕ್‌ನ ನಂಗಾರು ಜಯರಾಜ್ ಅವರ ಪುತ್ರ ಎನ್.ಜೆ. ಪುನೀತ್ (೩೩) ಅವರು ಮುಳ್ಳುಸೋಗೆಯಲ್ಲಿ ಹಾರ್ಡ್ವೇರ್ ಅಂಗಡಿ ನಡೆಸುತ್ತಿದ್ದು, ನಿನ್ನೆ ಸಂಜೆ ಬಾಡಿಗೆ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪೋಷಕರು ಸೇರಿದಂತೆ ಪತ್ನಿ ಮತ್ತು ಎರಡು ವರ್ಷದ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕುಶಾಲನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.