ಸೋಮವಾರಪೇಟೆ, ಡಿ. ೧೫ : ಚನ್ನರಾಯಪಟ್ಟಣದಿಂದ-ಮಾಕುಟ್ಟ ವರೆಗೆ ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಯೋಜನೆಗೆ ಅಂತಿಮ ಒಪ್ಪಿಗೆ ನೀಡಲು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಮ್ಮತಿ ನೀಡಿದ್ದಾರೆ ಎಂದು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.
ಚನ್ನರಾಯಪಟ್ಟಣದಿಂದ-ಮಾಕುಟ್ಟ ರಸ್ತೆಯು ತಾತ್ವಿಕ ಆಧಾರದಲ್ಲಿ ರಾಷ್ಟಿçÃಯ ಹೆದ್ದಾರಿ ಎಂದಿದೆ. ಅದನ್ನು ಸಂಪೂರ್ಣವಾಗಿ ರಾಷ್ಟಿçÃಯ ಹೆದ್ದಾರಿಯನ್ನಾಗಿ ಆದಷ್ಟು ಬೇಗ ಘೋಷಿಸಿ ದ್ವಿಪಥ ರಸ್ತೆಗೆ ಈಗಾಗಲೇ ತಯಾರಾಗಿರುವ ಯೋಜನೆಗೆ ಅನುಮೋದನೆ ನೀಡುವಂತೆ ಪ್ರತಾಪ್ ಸಿಂಹ ಅವರು ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿರುವ ಹಿನ್ನೆಲೆ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನವದೆಹಲಿಯಲ್ಲಿ ಗಡ್ಕರಿ ಅವರನ್ನು ಭೇಟಿ ಮಾಡಿದ ಸಿಂಹ ಅವರು, ಹಾಸನ ಹಾಗೂ ಕೊಡಗು ಜಿಲ್ಲೆಯ ಜನತೆಯ ಬೇಡಿಕೆಯಾಗಿರುವ ರಾಷ್ಟಿçÃಯ ಹೆದ್ದಾರಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸಿದರು. ಸುಮಾರು ೧೮೩ ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ರೂ.೧,೬೦೦ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯಲಿದ್ದು, ಹೊಳೆನರಸೀಪುರ, ಅರಕಲಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಮಡಿಕೇರಿ, ಮೂರ್ನಾಡು, ವೀರಾಜಪೇಟೆಯಿಂದಾಗಿ ಕೇರಳದ ಮಾಕುಟ್ಟಕ್ಕೆ ಸಂಪರ್ಕ ಕಲ್ಪಿಸಲಿದೆ.
ಪ್ರಸ್ತುತ ಈ ಮಾರ್ಗದಲ್ಲಿನ ರಸ್ತೆಯು ಹದಗೆಟ್ಟ ಸ್ಥಿತಿಯಲ್ಲಿದೆ. ಟ್ರಾಫಿಕ್‌ಗೆ ಅನುಗುಣವಾಗಿ ರಸ್ತೆಯು ಅಭಿವೃದ್ಧಿಗೊಂಡಿಲ್ಲ
(ಮೊದಲ ಪುಟದಿಂದ) ಹಾಗೂ ಹಲವು ನಗರ, ಪಟ್ಟಣ ಪ್ರದೇಶಗಳನ್ನು ದಾಟಿ ಸಾಗಬೇಕಾಗಿದ್ದು, ಸವಾರರ ಸಮಯ ವ್ಯರ್ಥವಾಗಲಿದೆ. ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಸಂದರ್ಭ ‘ಬೈ-ಪಾಸ್’ ರಸ್ತೆಗಳ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮುಂದುವರಿದು, ಮಡಿಕೇರಿ ಯಿಂದ ಕೇರಳಕ್ಕೆ ಉತ್ತಮ ಸಂಪರ್ಕ ರಸ್ತೆಯಿಂದಾಗಿ ಕೊಡಗು ಜಿಲ್ಲೆಯಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸಿ ದಂತಾಗುತ್ತದೆ. ಮಾಕುಟ್ಟದಿಂದ ಕೇರಳದ ಕಣ್ಣೂರು ಅಂತರರಾಷ್ಟಿçÃಯ ವಿಮಾನ ನಿಲ್ದಾಣಕ್ಕೂ ಉತ್ತಮ ರಸ್ತೆ ನಿರ್ಮಾಣವಾಗುತ್ತಿದ್ದು, ಹಾಸನ (ಮೊದಲ ಪುಟದಿಂದ) ಹಾಗೂ ಹಲವು ನಗರ, ಪಟ್ಟಣ ಪ್ರದೇಶಗಳನ್ನು ದಾಟಿ ಸಾಗಬೇಕಾಗಿದ್ದು, ಸವಾರರ ಸಮಯ ವ್ಯರ್ಥವಾಗಲಿದೆ. ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಸಂದರ್ಭ ‘ಬೈ-ಪಾಸ್’ ರಸ್ತೆಗಳ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮುಂದುವರಿದು, ಮಡಿಕೇರಿ ಯಿಂದ ಕೇರಳಕ್ಕೆ ಉತ್ತಮ ಸಂಪರ್ಕ ರಸ್ತೆಯಿಂದಾಗಿ ಕೊಡಗು ಜಿಲ್ಲೆಯಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸಿ ದಂತಾಗುತ್ತದೆ. ಮಾಕುಟ್ಟದಿಂದ ಕೇರಳದ ಕಣ್ಣೂರು ಅಂತರರಾಷ್ಟಿçÃಯ ವಿಮಾನ ನಿಲ್ದಾಣಕ್ಕೂ ಉತ್ತಮ ರಸ್ತೆ ನಿರ್ಮಾಣವಾಗುತ್ತಿದ್ದು, ಹಾಸನ ೨೦೧೮ ರಂದೇ ಯೋಜನೆಯ ರೂಪುರೇಷೆಯನ್ನು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಸಂಬAಧಿಸಿದವರಿAದ ಸಲ್ಲಿಸಲಾಗಿದೆ. ಇದೀಗ ಇದಕ್ಕೆ ಅನುಮೋದನೆ ದೊರೆಯಲಿದೆ ಎಂಬ ಭರವಸೆ ಕಾರ್ಯರೂಪಕ್ಕೆ ಬಂದರೆ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ.