ಸೋಮವಾರಪೇಟೆ, ಡಿ. ೧೫: ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಕೊಡಗು ಜಿಲ್ಲೆಯಿಂದ ನಿರ್ದೇಶಕರಾಗಿ ಉದ್ಯಮಿ ಹಾಗೂ ದಾನಿಗಳಾದ ರವೀಂದ್ರ ಹೆಚ್.ಎನ್. (ಹರಪಳ್ಳಿ ರವೀಂದ್ರ) ಆಯ್ಕೆಯಾಗಿದ್ದು, ಕದನ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ೫೭೯೨ ಮತಗಳ ಅಂತರದಿAದ ಭರ್ಜರಿ ಜಯಗಳಿಸಿದ್ದಾರೆ.
ಹರಪಳ್ಳಿ ರವೀಂದ್ರ ಅವರು ೯೧೫೭ ಮತಗಳನ್ನು ಗಳಿಸುವ ಮೂಲಕ ವಿಜಯ ಪತಾಕೆ ಹಾರಿಸಿದ್ದು, ಎದುರಾಳಿ ಅಭ್ಯರ್ಥಿ, ಹೆಬ್ಬಾಲೆಯ ಚೇತನ್ ಹೆಚ್.ಎಸ್. ಅವರು ೩೩೬೫ ಮತಗಳನ್ನು ಗಳಿಸಿ ಸೋಲನುಭವಿಸಿದ್ದಾರೆ.
ಇವರೊಂದಿಗೆ ಕಣದಲ್ಲಿದ್ದ ಕೊಡ್ಲಿಪೇಟೆಯ ಮಂಜುನಾಥ್ (೫೩) ಹಾಗೂ ಚೌಡ್ಲು ಗ್ರಾಮದ ಸಿ.ಕೆ. ರಾಜೀವ್ (೨೫) ಅವರುಗಳು ಗಳಿಸಿದ ಮತಕ್ಕಿಂತಲೂ ಹೆಚ್ಚು ಮತಗಳು (೫೫) ತಿರಸ್ಕೃತಗೊಂಡಿವೆ. ಕಳೆದ ತಾ. ೧೨ ರಂದು ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಸೋಮವಾರಪೇಟೆಯ ೨೯ ಹಾಗೂ ಮಡಿಕೇರಿಯ ೨ ಬೂತ್‌ಗಳಲ್ಲಿ ಚುನಾವಣೆ ನಡೆದಿತ್ತು.
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಸದಸ್ಯತ್ವ ಪಡೆದಿರುವ ಜಿಲ್ಲೆಯ ೧೫,೫೧೦ ಮತದಾರರ ಪೈಕಿ ೧೨,೬೫೫ ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದು, ಶೇ. ೮೨ರಷ್ಟು ಮತದಾನವಾಗಿತ್ತು. ಇಂದು ಮಡಿಕೇರಿಯ ಪೊಲೀಸ್ ಮೈತ್ರಿ ಸಭಾಂಗಣದಲ್ಲಿ ಬೆಳಿಗ್ಗೆ ೮ ಗಂಟೆಯಿAದ ಮತ ಎಣಿಕೆ ನಡೆಯಿತು.
ಎಣಿಕಾ ಕೇಂದ್ರದಲ್ಲಿ ೧೦ ಟೇಬಲ್‌ಗಳನ್ನು ಅಳವಡಿಸಿದ್ದು, ೩೧ ಸಿಬ್ಬಂದಿಗಳು ಮತ ಎಣಿಕೆಯಲ್ಲಿ ಭಾಗಿಯಾಗಿದ್ದರು. ಚುನಾವಣಾಧಿಕಾರಿ ಯಾಗಿ ಬಿ.ಕೆ. ಸಲೀಂ, ಸಹಾಯಕ ಅಧಿಕಾರಿಯಾಗಿ ಮೋಹನ್ ಅವರುಗಳು ಕಾರ್ಯನಿರ್ವಹಿಸಿದರು. ಬೆಳಿಗ್ಗೆ ೧೦.೩೦ರ ವೇಳೆಗೆ ಫಲಿತಾಂಶ ಪ್ರಕಟವಾಯಿತು.
ಮತ ಎಣಿಕೆಯ ಆರಂಭ ದಿಂದಲೂ ಹೆಚ್ಚಿನ ಮುನ್ನಡೆ ಕಾಯ್ದುಕೊಂಡ ರವೀಂದ್ರ ಅವರು ಅಂತಿಮವಾಗಿ ೯೧೫೭ ಮತಗಳನ್ನು ಪಡೆಯುವ
(ಮೊದಲ ಪುಟದಿಂದ) ಮೂಲಕ ೫೭೯೨ ಮತಗಳ ಅಂತರದಿAದ ಚೇತನ್ ಅವರನ್ನು ಮಣಿಸಿದರು.
ಮತ ಎಣಿಕೆ ಮುಗಿಯುತ್ತಿದ್ದಂತೆ ರವೀಂದ್ರ ಅವರ ಅಭಿಮಾನಿಗಳು ಮಡಿಕೇರಿ, ಕುಶಾಲನಗರ, ಹೆಬ್ಬಾಲೆ, ಶಿರಂಗಾಲ, ಸೋಮವಾರಪೇಟೆ, ಶಾಂತಳ್ಳಿ ಸೇರಿದಂತೆ ಇತರೆಡೆ ತೆರಳಿ ವಿಜಯೋತ್ಸವ ಆಚರಿಸಿದರು. ಮಡಿಕೇರಿಯ ವಿಜಯ ವಿನಾಯಕ ದೇವಾಲಯ, ಕುಶಾಲನಗರ ಹಾಗೂ ಸೋಮವಾರಪೇಟೆಯ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಡಿಕೇರಿಯಲ್ಲಿರುವ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಒಕ್ಕಲಿಗ ಸಮುದಾಯ ಬಾಂಧವರು ಹೆಚ್ಚಿರುವ, ರಾಜ್ಯ ಸಂಘದಲ್ಲಿ ಹೆಚ್ಚಿನ ಸದಸ್ಯತ್ವ ಪಡೆದಿರುವ ಸೋಮವಾರಪೇಟೆಯಲ್ಲಿ ಸಂಭ್ರಮದ ವಿಜಯೋತ್ಸವ ನಡೆಯಿತು. ಕಕ್ಕೆಹೊಳೆ ಜಂಕ್ಷನ್‌ನಿAದ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ತೆರಳಿದ ಅಭಿಮಾನಿಗಳು, ವಾಲಗಕ್ಕೆ ಹೆಜ್ಜೆಹಾಕಿ, ರವೀಂದ್ರ ಅವರ ಪರ ಜಯಘೋಷ ಮೊಳಗಿಸಿದರು. ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಒಕ್ಕಲಿಗರ ಸಂಘದ ಚುನಾವಣೆ ಸಂಬAಧ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದರು. ಕಳೆದ ಕೆಲ ತಿಂಗಳುಗಳಿAದಲೇ ಗ್ರಾಮಗಳಲ್ಲಿ ಊಟೋಪಚಾರ ಏರ್ಪಡಿಸಿ ಮತದಾರರನ್ನು ಮನವೊಲಿಸುವ ಕಾರ್ಯ ನಡೆದಿತ್ತು. ಮತದಾನದ ದಿನದಂದು ಗ್ರಾಮೀಣ ಭಾಗದಿಂದ ಆಗಮಿಸಿದ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದರು.
ಸಮುದಾಯದ ಅಭ್ಯುದಯವೇ ಗುರಿ: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹರಪಳ್ಳಿ ರವೀಂದ್ರ ಅವರು ಪ್ರತಿಕ್ರಿಯಿಸಿ, ಒಕ್ಕಲಿಗ ಸಮುದಾಯದ ಅಭ್ಯುದಯವೇ ಮುಂದಿನ ಗುರಿಯಾಗಿದ್ದು, ಗೌಡ ಸಮುದಾಯದ ಸರ್ವಾಂಗೀಣ ಉನ್ನತಿಗೆ ಶ್ರಮಿಸಲಾ ಗುವುದು. ರಾಜ್ಯ ಒಕ್ಕಲಿಗರ ಸಂಘ ದಿಂದ ಲಭಿಸುವ ಎಲ್ಲಾ ಸೌಲಭ್ಯಗಳೂ ಸೇರಿದಂತೆ ವೈಯಕ್ತಿಕವಾಗಿಯೂ ಸಮುದಾಯದ ಬೆಳವಣಿಗೆಗೆ ಸಹಕಾರ ನೀಡಲಾಗುವುದು ಎಂದರು.
ಕೊಡಗಿನ ಗೌಡ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಲಾಗುವುದು. ಸಂಸ್ಕೃತಿ, ಆಚಾರ-ವಿಚಾರಗಳ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದು ಅಭಿಪ್ರಾಯಿಸಿದರು.
ಕುಶಾಲನಗರದಲ್ಲಿ ವಿಜಯೋತ್ಸವ
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹರಪಳ್ಳಿ ರವೀಂದ್ರ ಬೆಂಬಲಿಗರು ಕುಶಾಲನಗರದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.