ಮಡಿಕೇರಿ, ಡಿ. ೧೩: ಅರೆಭಾಷೆ ದಿನಾಚರಣೆ ಅಂಗವಾಗಿ ತಾ. ೧೫ ರಂದು ಭಾಗಮಂಡಲ ಹಾಗೂ ಮೂರ್ನಾಡಿನಲ್ಲಿ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ ೧೧ಕ್ಕೆ ಭಾಗಮಂಡಲ ಗೌಡ ಸಮಾಜದಲ್ಲಿ ನಡೆಯುವ ಕಾರ್ಯ ಕ್ರಮವನ್ನು ಉದ್ಯಮಿ ಕೋಳಿಬೈಲು ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ ಅಧ್ಯಕ್ಷತೆ ವಹಿಸಲಿದ್ದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ, ಭಾಗಮಂಡಲ ಗೌಡ ಸಮಾಜದ ನಿರ್ದೇಶಕ ಕುದುಪಜೆ ಪ್ರಕಾಶ್, ಭಾಗಮಂಡಲ ನಾಡು ಯುವ ಒಕ್ಕೂಟ ಉಪಾಧ್ಯಕ್ಷ ಡಾ. ದಯಾನಂದ ಕೂಡಕಂಡಿ, ಕಾರ್ಯದರ್ಶಿ ನಿಡ್ಯಮಲೆ ಚಲನ್ ಭಾಗವಹಿಸಲಿದ್ದಾರೆ. ಹಿರಿಯ ಅಥ್ಲೇಟ್ ಎಡಿಕೇರಿ ವಿಶಾಲಾಕ್ಷಿ, ಕುಯ್ಯಮುಡಿ ಗೋಪಾಲ, ಕೊರೊನಾ ವಾರಿಯರ್ ಚಲನ್ ನಿಡ್ಯಮಲೆ, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ ಕೂಡಕಂಡಿ ವೈಷ್ಣವಿ ಅವರನ್ನು ಸನ್ಮಾನಿಸಲಾಗುವುದು.

ಸಂಜೆ ೬ ಗಂಟೆಗೆ ಮೂರ್ನಾಡಿ ನಲ್ಲಿ ನಡೆಯುವ ಕಾರ್ಯಕ್ರಮವನ್ನು ನಿವೃತ್ತ ಸುಬೇದಾರ್ ಮೇಜರ್ ಚೆಟ್ಟಿಮಾಡ ಎಂ. ಬಾಲಕೃಷ್ಣ ಉದ್ಘಾಟಿಸಲಿದ್ದು, ಸಹಪ್ರಾಧ್ಯಾಪಕ ಡಾ. ದಯಾನಂದ ಕೂಡಕಂಡಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಲಿ ದ್ದಾರೆ. ಪ್ರಾಧ್ಯಾಪಕಿ ಡಾ.ಕೋರನ ಸರಸ್ವತಿ ಪ್ರಕಾಶ್, ಗ್ರಾಮ ಲೆಕ್ಕಿಗರಾದ ಮೇರ್ಕಜೆ ದೀಪಿಕಾ, ದೈಹಿಕ ಶಿಕ್ಷಣ ನಿರ್ದೇಶಕ ಕರ್ಣಯ್ಯನ ಈಶ್ವರ ಅಶೋಕ, ಸಹಾಯಕ ಪ್ರಾಧ್ಯಾಪಕ ಡಾ. ಅಯ್ಯಪ್ಪ ದಂಬೆಕೋಡಿ, ಉಪನ್ಯಾಸಕಿ ಬೈಲೆ ಸಹನಾ ಚಂದನ್, ಉಳುವಾರನ ಹರ್ಷಿತಾ ರಾಧಾಕೃಷ್ಣ ಪಾಲ್ಗೊಳ್ಳಲಿದ್ದಾರೆ.