ಶನಿವಾರಸಂತೆ, ಡಿ. ೧೪: ಸಮೀಪದ ಕೊಡ್ಲಿಪೇಟೆ ಪಟ್ಟಣದಲ್ಲಿ ಹಳೆಯ ವಿದ್ಯುತ್ ಲೈನ್‌ಗಳನ್ನು ತೆಗೆದು ಕೇಬಲ್ ಅಳವಡಿಸುವ ಕಾಮಗಾರಿ ತಾ. ೧೫ ರಿಂದ (ಇಂದಿನಿAದ) ೧೫ ದಿನಗಳವರೆಗೆ ನಡೆಯಲಿದೆ. ಪಟ್ಟಣದಲ್ಲಿ ಕೆಲಸ ನಿರ್ವಹಿಸುವ ವಿಭಾಗದಲ್ಲಿ ಮಾತ್ರ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕೊಡ್ಲಿಪೇಟೆ ಉಪ ವಿಭಾಗದ ಕಿರಿಯ ಸಂಪರ್ಕಾಧಿಕಾರಿ ಹಿರೇಮಠ್ ತಿಳಿಸಿದ್ದಾರೆ.